ಹೊಸ ಖಾತೆ ತೆರೆದ ಪುನೀತ್ ಮಾಡಿದ ಮೊದಲ ಟ್ವೀಟ್ ಇದು
Recommended Video

ಅಪ್ಪು ಮಾಡಿದ ಮೊದಲ ಟ್ವೀಟ್ ಇದೇ ನೋಡಿ..! | Filmibeat Kannada
ಒಂದು ಕಡೆ ನಟ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ಆಚೆ ಬಂದಿದ್ದಾರೆ. ಇನ್ನೊಂದು ಕಡೆ ನಟ ಪುನೀತ್ ರಾಜ್ ಕುಮಾರ್ ಅಧಿಕೃತವಾಗಿ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ.
ನಟ ಪುನೀತ್ ಜುಲೈ ತಿಂಗಳ ಅಂತ್ಯದಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದರು. ಇದೀಗ ತಮ್ಮ ಖಾತೆಯಿಂದ ಅವರು ಮೊದಲ ಟ್ವೀಟ್ ಮಾಡಿದ್ದಾರೆ. ಅಪ್ಪು ಮೊದಲ ಟ್ವೀಟ್ ಏನು ಮಾಡಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

'ಕವಲುದಾರಿ' ಸಿನಿಮಾ ಪುನೀತ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗಿದೆ. ಸೋ, ತಮ್ಮ ಮೊದಲ ಟ್ವೀಟ್ ಮೂಲಕ ಟೀಸರ್ ಅನ್ನು ಪುನೀತ್ ಹಂಚಿಕೊಂಡಿದ್ದಾರೆ. ಈ ಟೀಸರ್ ನಿಂದ ಅಪ್ಪು ಖಾತೆ ಶುಭಾರಂಭವಾಗಿದೆ.
ಅಂದಹಾಗೆ, ಸದ್ಯ ಪುನೀತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 12 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸದ್ಯಕ್ಕೆ ಪುನೀತ್ ಯಾರನ್ನು ಫಾಲೋ ಮಾಡುತ್ತಿಲ್ಲ.
More from Filmibeat
English summary
Kannada actor Puneeth Rajkumar has finally joined Twitter. 'Kavalu Daari' teaser is his first tweet.


Click it and Unblock the Notifications











