For Quick Alerts
  ALLOW NOTIFICATIONS  
  For Daily Alerts

  ಅಂದು 'H2o' ಇಂದು 'O2': ಪುನೀತ್ ನಿರ್ಮಾಣದಲ್ಲಿ ಬರ್ತಿದೆ ಮತ್ತೊಂದು ಸಿನಿಮಾ

  By ಫಿಲ್ಮ್ ಡೆಸ್ಕ್
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಬ್ಯಾನರ್ ನಲ್ಲಿ ಸಾಲು ಸಾಲು ಸಿನಿಮಾಗಳು ಸೆಟ್ಟೇರುತ್ತಿವೆ. ಈಗಾಗಲೆ ಪುನೀತ್ ನಿರ್ಮಾಣದ ಕವಲುದಾರಿ ಮತ್ತು ಮಯಾಬಜಾರ್ ಎರಡು ಸಿನಿಮಾಗಳು ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಭಿನ್ನ ಕಥೆಗಳನ್ನು ಆಯ್ದುಕೊಳ್ಳುತ್ತಿರುವ ಪಿ ಆರ್ ಕೆ ಬ್ಯಾನರ್, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.

  ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

  ಸದ್ಯ ಪುನೀತ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಮತ್ತು ಲಾ ಎರಡು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿವೆ. ಇದರ ಬೆನ್ನಲ್ಲೆ ಈಗ ಫ್ಯಾಮಿಲಿ ಪ್ಯಾಕ್ ಎನ್ನುವ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದರ ನಡುವೆ ಈಗ ಪುನೀತ್ ಬ್ಯಾನರ್ ನಿಂದ ಮತ್ತೊಂದು ಸಿನಿಮಾ ಮೂಡಿಬರುತ್ತಿದೆ.

  'ಕೆಲವರ ಬಗ್ಗೆ ಇಂಟ್ರೊಡಕ್ಷನ್ ಬೇಡ, ಇನ್ಫಾರ್ಮೇಷನ್ ಸಾಕು': ಪವರ್ ಸ್ಟಾರ್ ಖದರ್'ಕೆಲವರ ಬಗ್ಗೆ ಇಂಟ್ರೊಡಕ್ಷನ್ ಬೇಡ, ಇನ್ಫಾರ್ಮೇಷನ್ ಸಾಕು': ಪವರ್ ಸ್ಟಾರ್ ಖದರ್

  ವಿಶೇಷ ಅಂದರೆ ಚಿತ್ರಕ್ಕೆ O2 ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಹಿಂದೆ ಉಪೇಂದ್ರ H2O ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಈಗ o2 ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಪವರ್ ಸ್ಟಾರ್. ಇದು ವೈದ್ಯಕೀಯ ಲೋಕಕ್ಕೆ ಸಂಬಂಧಿಸಿದ ಮೆಡಿಕಲ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ.

  ಪುನೀತ್ ನಿರ್ಮಾಣದಲ್ಲಿ ಬಂದ ಈಗಾಗಲೆ ರಿಲೀಸ್ ಆಗಿರುವ ಮಾಯಾ ಬಜಾರ್ ಸಿನಿಮಾದ ನಿರ್ದೇಶಕ ರಾಧಾಕೃಷ್ಣ , ಈ ಸಿನಿಮಾದ ನಿರ್ಮಾಣ ವಿಭಾಗದಲ್ಲಿಯೂ ಕೈ ಜೋಡಿಸಿದ್ದಾರೆ. ಪ್ರಶಾಂತ್ ರಾಜ್ ಮತ್ತು ರಾಘವ್ ಇಬ್ಬರು ನಿರ್ದೇಶನ ಮಾಡುತ್ತಿದ್ದಾರೆ. ಅಪರೂಪದ ಕಥೆಯನ್ನು ಇಟ್ಟುಕೊಂಡು ಬರ್ತಿರುವ O2 ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ಪಿ ಆರ್ ಕೆ ಬ್ಯಾನರ್ ಈ ಸಿನಿಮಾ ಮೂಲಕ ಯಾರನ್ನು ಪರಿಚಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

  English summary
  Actor Puneeth Rajkumar's PRK productions announce to new movie title O2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X