'ಯುವರತ್ನ' ನಂತರ ಅಪ್ಪು ಮುಂದಿನ ಚಿತ್ರದ ಚಿತ್ರೀಕರಣಕ್ಕೆ ಡೇಟ್ ಫಿಕ್ಸ್
Recommended Video
ಪವರ್ ಸ್ಟಾರ್ ಪುನೀತ್ ರಜ್ ಕುಮಾರು ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರು, ಧಾರವಾಡ ಅಂತ ಕರ್ನಾಟಕದ ನಾನಾಭಾಗಗಳಲ್ಲಿ ಭರ್ಜರಿಯಾಗಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಅಪ್ಪು ಸಿನಿಮಾಗಾಗಿ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.
ದಸರಗೆ 'ಯವರತ್ನ' ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಟೀಸರ್ ರಿಲೀಸ್ ಆಗುವುದನ್ನು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಮಾಡುತ್ತಿದ್ದಾರೆ. ಯುವರತ್ನ ಚಿತ್ರೀಕರಣ ಮುಗಿಯುತ್ತಿದ್ದಂತೆ ಅಪ್ಪು ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ.
ಹೌದು, ಬಹುನಿರೀಕ್ಷೆಯ ಜೇಮ್ಸ್ ಚಿತ್ರಕ್ಕೆ ಈಗಾಗಲೆ ತಯಾರಿನಡೆಯುತ್ತಿದೆ. ಅಭಿಮಾನಿಗಳಿಗೆ ಸಂತಸದ ಸುದ್ದಿ ಅಂದ್ರೆ ಜೇಮ್ಸ್ ಚಿತ್ರದ ಚಿತ್ರೀಕರಣ ನವೆಂಬರ್ ನಿಂದ ಪ್ರಾರಂಭವಾಗಲಿದೆ. ಈಗಾಗಲೆ ಚಿತ್ರದ ಮೋಷನ್ ಪೋಸ್ಟರ್ ಪುನೀತ್ ಹುಟ್ಟುಹಬ್ಬದ ದಿನ ರಿಲೀಸ್ ಮಾಡಲಾಗಿದೆ. ಪೋಸ್ಟರ್ ನೋಡಿದ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಜೋಮ್ಸ್ ನಿರ್ದೇಶಕ ಚೇತನ್ ಅವರ ಕನಸಿನ ಪ್ರಾಜೆಕ್ಟ್. ಚೇತನ್ ಸದ್ಯ ಶ್ರೀಮುರಳಿ ಜೊತೆ ಭರಾಟೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಭರಾಟೆ ಕೂಡ ಕೊನೆಯ ಹಂತದಲ್ಲಿದೆ. ಭರಾಟೆ ಮುಗಿಯುತ್ತಿದ್ದಂತೆ ಜೇಮ್ಸ್ ಕೈಗೆತ್ತಿಕೊಳ್ಳಲಿದ್ದಾರೆ ಚೇತನ್.
ಸದ್ಯ ಅಭಿಮಾನಿಗಳು ಯುವರತ್ನಗಾಗಿ ಕಾಯುತ್ತಿದ್ದಾರೆ. ದಸರಾಗೆ ಟೀಸರ್ ರಿಲೀಸ್ ಮಾಡುವ ಚಿತ್ರತಂಡ ಚಿತ್ರವನ್ನು ಡಿಸೆಂಬರ್ ಗೆ ರಿಲೀಸ್ ಮಾಡುವ ಸಾಧ್ಯತೆ ಇದೆ. ಚಿತ್ರದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











