For Quick Alerts
  ALLOW NOTIFICATIONS  
  For Daily Alerts

  ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದ ಸ್ಯಾಂಡಲ್ ವುಡ್ ನಟ

  |

  ಸಿನಿಮೀಯ ರೀತಿಯಲ್ಲಿ ದರೋಡೆಕೋರನ್ನು ಹಿಡಿದು ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ ಸ್ಯಾಂಡಲ್ ವುಡ್ ನಟ ರಘು ಭಟ್. ಇತ್ತೀಚಿಗೆ ತೆರೆಕಂಡ ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡಿ ರಾತ್ರಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ರಘು ಭಟ್ ದರೋಡೆಕೋರರನ್ನು ಬೆನ್ನತ್ತಿ ಹಿಡಿಯುವ ಮೂಲಕ ನಿಜವಾಗಿಯೊ ಹೀರೋಯಿಸಂ ತೋರಿಸಿ ಸಾಹಸ ಮೆರೆಸಿದ್ದಾರೆ.

  ರಘು ಭಟ್ ಪತ್ನಿ ಜೊತೆ ಸಿನಿಮಾ ವೀಕ್ಷಿಸಿ ರಾತ್ರಿ ಮನೆಗೆ ತೆರಳುತ್ತಿದ್ದಾಗ, ರಘು ಭಟ್ ಕಾರಿನ ಮುಂದಿನ ಕಾರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆಕೊರರು ಅದರಲ್ಲಿದ್ದ ಚಿನ್ನ, ಹಣವನ್ನು ದೋಚಿ ಪರಾರಾಗಿಯಾಗಿದ್ದರು. ಬೈಕ್ ಏರಿ ಪರಾರಿಯಾಗುತ್ತಿದ್ದ ಕಳ್ಳರ ಬೆನ್ನತ್ತಿದ ರಘು ಭಟ್ ಸುಮಾರು 2 ಕಿ.ಮಿ ದರೋಡೆ ಕೋರರನ್ನು ಚೇಸ್ ಮಾಡಿಕೊಂಡು ಹೋಗಿದ್ದಾರೆ.

  ದರೋಡೆ ಮಾಡಿ ವೇಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ದರೋಡೆಕೋರರು ರಸ್ತೆ ಮದ್ಯೆ ಇದ್ದ ವಿಭಜನಕ್ಕೆ ಡಿಕ್ಕಿ ಬಿದ್ದಿದ್ದಾರೆ. ಆಗ ರಘು ಭಟ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಸಿದ್ದಾರೆ. ಭಾರತಿ ನಗರದ ಸೇಂಟ್ ಜಾನ್ಸ್ ಶ್ರೀ ಸರ್ಕಲ್ ಬಳಿ ಕಳ್ಳರು ರಘು ಭಟ್ ಕೈಗೆ ಸಿಕ್ಕಿಬಿದ್ದಾರೆ. ದರೋಡೆಕೋರರು ಸದ್ಯ ಹಲಸೂರ್ ಪೊಲೀಸರ ವಶದಲ್ಲಿ ಇದ್ದಾರೆ. ದರೋಡೆಕೋರರು ಅಬ್ದುಲ್ ಮತ್ತು ಮೋಯಿನ್ ಎಂದು ತಿಳಿದುಬಂದಿದೆ.

  ರಘುಭಟ್ ಕೆಲಸಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಲ್ಲ ಕಡೆಯಿಂದ ರಘು ಭಟ್ ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ರಘು ಭಟ್ ಅನ್ವೇಷಿ, ಎಂಎಂಸಿಎಚ್, ಲವ್ ಯೂ2 ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ.

  English summary
  Actor Raghu Bhat Catches robber and handed over the to the police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X