twitter
    For Quick Alerts
    ALLOW NOTIFICATIONS  
    For Daily Alerts

    ಬೊಕ್ಕ ತಲೆಯಲ್ಲಿ ಕೂದಲು ನಾಟಿ ಮಾಡ್ತೀವಿ ಅಂದ್ರೆ ಬೇಡ ಅಂದ್ರಂತೆ 'ಮೊಟ್ಟೆ' ಶೆಟ್ರು!

    |

    ಬೊಕ್ಕ ತಲೆಯವರ ನೋವಿನ ಕತೆಯನ್ನು ಹಾಸ್ಯದ ಮೂಲಕ ಹೇಳಿ ಮನೆ ಮಾತಾದವರು ರಾಜ್‌ ಬಿ ಶೆಟ್ಟಿ. ಬೊಕ್ಕತಲೆಯನ್ನು ಟೋಪಿಯಡಿ ಬಚ್ಚಿಡುವ ಜಮಾನಾದಲ್ಲಿ ತಮ್ಮ ಬೊಕ್ಕ ತಲೆಯನ್ನು ಸರಿ ದಿಕ್ಕಿನಲ್ಲಿ ಬಳಸಿ ಫೇಮಸ್ ಆದ ಶೆಟ್ಟರು, ಸಾಮಾನ್ಯ ಬುದ್ಧಿವಂತರಲ್ಲ.

    Recommended Video

    ಡಿ ಬಾಸ್ ದಾಸೋಹದ 41 ನೇ ದಿನ ನಿರಾಶ್ರಿತರಿಗೆ ಉಪಹಾರದ ಜೊತೆ ಮೊಟ್ಟೆ ವಿತರಣೆ | Darshan | Filmibeat Kannada

    'ಒಂದು ಮೊಟ್ಟೆಯ ಕತೆ' ಬರುವ ಮುನ್ನಾ ಮುಜುಗರದ, ಕೀಳರಿಮೆಯ ವಿಷಯವಾಗಿದ್ದ ಬೊಕ್ಕ ತಲೆ ಎಂಬುದು, ಗೌರವದ ಸಂಕೇತವಾಯಿತು, ಬೊಕ್ಕ ತಲೆಯವರನ್ನು ತಮಾಷೆಯಾಗಿ ನೋಡುತ್ತಿದ್ದವರು, ಸಿಂಪತಿ ತುಂಬಿದ ನೋಟ ಬೀರುವಂತೆ ಮಾಡಿದ್ದು ರಾಜ್ ಬಿ ಶೆಟ್ಟಿ.

    ಇಂಥಹಾ ರಾಜ್ ಬಿ ಶೆಟ್ಟಿ ಅವರ ಮುಂದೆ ಒಂದು ಅತ್ಯದ್ಭುತವಾದ ಆಫರ್ ಒಂದು ಬಂದಿತ್ತಂತೆ. 'ಒಂದು ಮೊಟ್ಟೆ ಕತೆ' ಸಿನಿಮಾ ನೋಡಿದ ವೈದ್ಯರೊಬ್ಬರು ರಾಜ್ ಬಿ ಶೆಟ್ಟಿ ಅವರಿಗೆ ಆಫರ್ ಒಂದನ್ನು ನೀಡಿದ್ದರಂತೆ, ಆದರೆ ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು ಶೆಟ್ಟಿ. ಏನದು ಆಫರ್ ಮುಂದೆ ಓದಿ...

    ತಲೆಗೂದಲು ಕಸಿ ಮಾಡುವ ಆಫರ್

    ತಲೆಗೂದಲು ಕಸಿ ಮಾಡುವ ಆಫರ್

    ಒಂದು ಮೊಟ್ಟೆಯ ಕತೆ ಸಿನಿಮಾ ನೋಡಿದ ವೈದ್ಯರೊಬ್ಬರು, ರಾಜ್ ಬಿ ಶೆಟ್ಟಿ ಗೆ ಕರೆ ಮಾಡಿ, ನಿಮ್ಮ ತಲೆಗೆ ಕೂದಲು ಕಸಿ ಮಾಡಿ, ತಲೆಗೂದಲು ಬೆಳೆಯುವಂತೆ ಮಾಡುತ್ತೇನೆ, ಅಷ್ಟಲ್ಲದೇ ತಾವು ಹಣವನ್ನೂ ನೀಡಬೇಕಿಲ್ಲ' ಎಂದರಂತೆ.

    ವೈದ್ಯರ ಆಫರ್ ನಿರಾಕರಿಸಿದ ಶೆಟ್ಟಿ

    ವೈದ್ಯರ ಆಫರ್ ನಿರಾಕರಿಸಿದ ಶೆಟ್ಟಿ

    ಆದರೆ ವೈದ್ಯರ ಆಫರ್ ಅನ್ನು ತಲೆಗೂದಲು ಬಾಚಿದಂತೆ ಬಾಚಿ ಪಕ್ಕಕ್ಕೆಸೆದರಂತೆ ರಾಜ್‌ ಬಿ ಶೆಟ್ಟಿ. 'ಆ ಸಿನಿಮಾ ಮಾಡಿದ್ದುದರ ಉದ್ದೇಶವೇ, ನಾವು ಹೇಗಿದ್ದೇವೆಯೋ ಹಾಗೆ ಒಪ್ಪಿಕೊಳ್ಳಬೇಕು ಎಂಬುದಾಗಿತ್ತು. ಹಾಗಾಗಿ ಸಿನಿಮಾ ಮಾಡಿದ ನಾನೇ ನನ್ನನ್ನು ಬದಲಾಯಿಸಿಕೊಳ್ಳುವುದು ಸೂಕ್ತವಲ್ಲವೆಂದು ಬೇಡವೆಂದರಂತೆ.

    ಅಭಿಮಾನಿಗಳನ್ನು ಗಳಿಸಿಕೊಟ್ಟ ಮೊಟ್ಟೆಯನ್ನು ತೊರೆಯುವುದೇ?

    ಅಭಿಮಾನಿಗಳನ್ನು ಗಳಿಸಿಕೊಟ್ಟ ಮೊಟ್ಟೆಯನ್ನು ತೊರೆಯುವುದೇ?

    ತಮಗೆ ಸಿನಿಮಾ ಜೀವನ ನೀಡಿದ, ಲಕ್ಷಾಂತರ ಅಭಿಮಾನಿಗಳನ್ನು ತಂದುಕೊಟ್ಟ 'ಮೊಟ್ಟೆ'ಯನ್ನು ಕಳೆದುಕೊಳ್ಳಲು ರಾಜ್ ಬಿ ಶೆಟ್ಟಿ ಒಪ್ಪಲಿಲ್ಲ. ಬೊಕ್ಕ ತಲೆಯವರಿಗೆ ಮಾದರಿ, ಆದರ್ಶ ನಾಯಕ ಆಗಿರುವ ರಾಜ್ ಬಿ ಶೆಟ್ಟಿ ಅವರೇ ತಲೆ ಮೇಲೆ ಕೂದಲು ಬೆಳೆಸಿಕೊಂಡು ನಾಯಕತ್ವ ಬಿಟ್ಟು ಹೋಗುವುದನ್ನು ಬೊಕ್ಕ ತಲೆಯವರು ಸಹಿಸಿಕೊಳ್ಳುತ್ತಲೂ ಇರಲಿಲ್ಲ.

    ಎರಡು ಸಿನಿಮಾ ಬಿಡುಗಡೆಗೆ ಸಿದ್ಧ

    ಎರಡು ಸಿನಿಮಾ ಬಿಡುಗಡೆಗೆ ಸಿದ್ಧ

    ಇನ್ನು ರಾಜ್ ಬಿ ಶೆಟ್ಟಿ ಅವರು ಹಲವು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗರುಡಗಮನ ವೃಷಭ ವಾಹನ ಚಿತ್ರೀಕರಣ ಅಂತಿಮ ಹಂತದಲ್ಲಿರುವಾಗಲೇ ಲಾಕ್‌ಡೌನ್ ಆರಂಭವಾಯಿತು. ಇನ್ನು ಹೇಮಂತ್ ಕುಮಾರ್ ನಿರ್ದೇಶನದ 'ತುರ್ತು ನಿರ್ಗಮನ' ಸಹ ಬಿಡುಗಡೆಗೆ ತಯಾರಾಗಿದೆ.

    English summary
    Actor Raj B Shetty once offered free hair transplant treatment from a doctor after his movie 'ondu motteya kathe'. But he refused it.
    Tuesday, May 5, 2020, 23:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X