ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಚ್ಚುಗತ್ತಿ ಹೀರೋ ರಾಜವರ್ಧನ್!
ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾಗಿರುವ ನಟ ರಾಜವರ್ಧನ್. ದಿವಂಗತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ಸ್ಯಾಂಡಲ್‌ವುಡ್‌ನಲ್ಲಿ ನಾಯಕ ನಟರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಬಿಚ್ಚುಗತ್ತಿ ಸಿನಿಮಾದ ಬಳಿಕ ಸಾಲು-ಸಾಲು ಚಿತ್ರಗಳಿಂದ ಅವಕಾಶ ಪಡೆದುಕೊಳ್ಳುತ್ತಿರುವ ರಾಜವರ್ಧನ್ ಅವರಿಗೆ ಇಂದು ಜನ್ಮ ದಿನದ ಸಂಭ್ರಮ. ಈ ಸಂಭ್ರಮದಲ್ಲಿ ರಾಜವರ್ಧನ್ ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ.
ಬರ್ತ್‌ಡೆ ಅಂದ್ರೆ ಸಾಕು ಮೋಜು ಮಸ್ತಿ, ಪಾಟ್ರಿ ಪಬ್ಬು ಅಂತಲೇ ಸುತ್ತುವ ಅನೇಕ ಸೆಲೆಬ್ರೆಟಿಗಳನ್ನು ನಾವು ನೋಡಿದ್ದೇವೆ. ಹೆಚ್ಚಿನವರಿಗೆ ಜನ್ಮದಿನದಂದು ಪಾರ್ಟಿ , ಫ್ರೆಂಡ್ಸ್ ಜೊತೆ ಔಟಿಂಗ್ ಬಿಟ್ರೆ ಬೇರೆನೂ ಮಾಡಲು ತೋಚುವುದೆ ಇಲ್ಲಾ. ಆದರೆ ನಟ ರಾಜವರ್ಧನ್ ಈ ರೀತಿ ಮಾಡಿಲ್ಲ. ಬದಲಾಗಿ ಎಲ್ಲಾರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ತನ್ನ ಹುಟ್ಟುಹಬ್ಬದ ನೆನಪಿಗಾಗಿ ಪ್ರತಿ ವರ್ಷವೂ ಒಂದೊಳ್ಳೆ ಕೆಲಸವನ್ನು ಮಾಡುವ ರಾಜವರ್ಧನ್ ಈ ಬಾರಿ ಕೂಡ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಬರ್ತ್ ಡೇ ಖುಷಿಯಲ್ಲಿ ಯುವಕರಿಗೆ ಮಾದರಿಯಾಗಿದ್ದಾರೆ. ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ನೇತ್ರಾದಾನ ಮಾಡಲು ರಾಜವರ್ಧನ್ ನೋಂದಣಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್, ಡಾ.ಮಂಜುನಾಥ್ ಉಪಸ್ಥಿತರಿದ್ದರು. ನಟ ರಾಜವರ್ಧನ್ ರ ಈ ನಿರ್ಧಾರಕ್ಕೆ ಆಸ್ಪತ್ರೆ ಸಿಬ್ಬಂದಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

'ಬಿಚ್ಚುಗತ್ತಿ' ಸಿನಿಮಾ ಮೂಲಕ ಸ್ಯಾಂಡಲ್'ವುಡ್ ಗೆ ಎಂಟ್ರಿ ಕೊಟ್ಟಿದ್ದ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ಮೊದಲ ಸಿನಿಮಾದಲ್ಲಿ ಭರವಸೆ ನಾಯಕ ಮಿಂಚಿದ್ದಾರೆ. ಸದ್ಯ 'ಬಿಚ್ಚುಗತ್ತಿ' ಸಿನಿಮಾ ಬಳಿಕ 'ಹಿರಣ್ಯ' ಸಿನಿಮಾದಲ್ಲಿ ನಟಿಸ್ತಿರುವ ರಾಜವರ್ಧನ್, ಅತ್ತ 'ಪ್ರಣಯಂ' ಸಿನಿಮಾ ಮುಗಿಸಿ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಅಂದಹಾಗೆ ಹಿರಣ್ಯ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಮಾಡ್ತಿದ್ದು, ವಿಘ್ನೇಶ್ವರ ಮತ್ತು ವಿಜಯ್ ಕುಮಾರ್ ಬಂಡವಾಳ ಹೂಡಿದ್ದಾರೆ. ತೆಲುಗಿನ ಹುಡುಗಿ ರಿಹಾನಾ ನಾಯಕಿಯಾಗಿ ನಟಿಸ್ತಿದ್ದಾರೆ. ನಟ ರಾಜವರ್ಧನ್ ಈ ಸಿನಿಮಾದಲ್ಲಿ ತುಂಬ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











