ತಾತ ರಜನಿಕಾಂತ್ ಸ್ಟೈಲ್ ನಲ್ಲಿ ಪೋಸ್ ನೀಡಿದ ಮೊಮ್ಮಗ
ಸ್ಟೈಲ್ ಎಂದ ತಕ್ಷಣ ಬರುವ ಮೊದಲ ಹೆಸರು ಸೂಪರ್ ಸ್ಟಾರ್ ರಜನಿಕಾಂತ್. ರಜನಿ ಸಿನಿಮಾಗಳಲ್ಲಿ ಅವರ ಸ್ಟೈಲ್ ನೋಡುವುದೇ ಮಜಾ. ಅದಕ್ಕೆ ಅವರನ್ನ ಸ್ಟೈಲ್ ಕಿಂಗ್ ಎಂದು ಕರೆಯುವುದು.
ಈಗ ರಜನಿಕಾಂತ್ ಸ್ಟೈಲ್ ಅನ್ನು ಒಬ್ಬ ಹುಡುಗ ಮೀರಿಸುತ್ತಿದ್ದಾನೆ. ಅವನು ಬೇರೆ ಯಾರು ಅಲ್ಲ ರಜನಿಕಾಂತ್ ಮೊಮ್ಮಗ. ತಾತನ ಸ್ಟೈಲ್ ನಲ್ಲಿ ನಿಂತ ಮೊಮ್ಮಗನ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ತಾತ - ಮೊಮ್ಮಗನ ಈ ಕ್ಯೂಟ್ ಚಾಲೆಂಜ್ ನ ಫೋಟೋವನ್ನು ಸೌಂದರ್ಯ ರಜನಿಕಾಂತ್ ಹಂಚಿಕೊಂಡಿದ್ದಾರೆ. ಒಂದು ಕಡೆ ಅಪ್ಪ ಮತ್ತೊಂದು ಕಡೆ ತಮ್ಮ ಮಗನ ಫೋಟೋವನ್ನು ಸೇರಿಸಿ ಅಭಿಮಾನಿಗಳಿಗೆ ತೋರಿಸಿದ್ದಾರೆ.

''ತಾತ ನಂತೆ ಮೊಮ್ಮಗ'' ಎಂಬ ಟೈಟಲ್ ಅನ್ನು ತಮ್ಮ ಪೋಸ್ಟ್ ಗೆ ಸೌಂದರ್ಯ ರಜನಿಕಾಂತ್ ನೀಡಿದ್ದಾರೆ. ತಮ್ಮ ಮಗನ ಸ್ಟೈಲ್ ನೋಡಿ ಖುಷಿ ಆಗುತ್ತಿದೆ ಎಂದಿದ್ದಾರೆ.
English summary
Check out picture : Like thatha like grandson Super Star Rajinikanth grandson style.


Click it and Unblock the Notifications