For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ಸೂಪರ್ ಸ್ಟಾರ್; ಸಹೋದರನನ್ನು ಭೇಟಿಯಾಗಿ ಆಶೀರ್ವಾದ ಪಡೆದ ರಜನಿಕಾಂತ್

  |

  ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ (ಡಿಸೆಂಬರ್-06) ಬೆಂಗಳೂರಿಗೆ ಆಗಮಿಸಿದ್ದಾರೆ. ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿರುವ ರಜನಿಕಾಂತ್ ಇಲ್ಲಿ ನೆಲೆಸಿರುವ ಸಹೋದರ ಸತ್ಯನಾರಾಯಣ ರಾವ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

  ರಾಜಕೀಯ ಎಂಟ್ರಿಗೂ ಮುನ್ನ ಬೆಂಗಳೂರಿನಲ್ಲಿ ಅಣ್ಣನ ಆಶೀರ್ವಾದ ಪಡೆದ 'ತಲೈವಾ' | Filmibeat Kannada

  ಡಿಸೆಂಬರ್ 31ರಂದು ರಾಜಕೀಯ ಪಕ್ಷ ಘೋಷಣೆ ಮಾಡಲಿರುವ ರಜನಿಕಾಂತ್ ಬೆಂಗಳೂರಿನಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಸತ್ಯನಾರಾಯಣ ಅವರಿಂದ ಆಶೀರ್ವಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ: ಡಿಸೆಂಬರ್ 31ಕ್ಕೆ ಪಕ್ಷ ಘೋಷಣೆ

  ಈ ಮೊದಲು ಅಂದರೆ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡುವ ಸಮಯದಲ್ಲೂ ಸೂಪರ್ ಸ್ಟಾರ್ ಬೆಂಗಳೂರಿಗೆ ಆಗಮಿಸಿ, ಕುಟುಂಬದವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

  ಕಳೆದ ವರ್ಷ ಅನಾರೋಗ್ಯದಿಂದ ಸಹೋದರ ಸತ್ಯನಾರಾಯಣ ರಾವ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯದಲ್ಲಿ ಅವರನ್ನು ನೋಡಲು ರಜನಿಕಾಂತ್ ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು. ಸೂಪರ್ ಸ್ಟಾರ್ ಆಸ್ಪತ್ರೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ರಜನೀಕಾಂತ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಹಲವು ಪಕ್ಷಗಳು ಯತ್ನಿಸಿದ್ದವು, ಆದರೆ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳದ ರಜನಿಕಾಂತ್ ಈಗ ತಮ್ಮದೇ ರಾಜಕೀಯ ಪಕ್ಷ ಸ್ಥಾಪನೆ ಮಾಡುತ್ತಿದ್ದಾರೆ.

  ರಜನೀಕಾಂತ್ ಸಮಕಾಲೀನರಾದ ರಜನಿಕಾಂತ್ ಈಗಾಗಲೇ ಮಕ್ಕಳ್ ನಿಧಿ ಮಯಂ ಎಂಬ ಪಕ್ಷ ಸ್ಥಾಪಿಸಿಯಾಗಿದೆ. ಈಗ ರಜನೀಕಾಂತ್ ಅವರು ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದು, ಪಕ್ಷದ ಹೆಸರು ಏನಿರುತ್ತದೆ, ಪಕ್ಷದ ಲಾಂಛನ ಏನಿರುತ್ತದೆ ಎಂಬ ಕುತೂಹಲ ಕೆರಳಿದೆ.

  English summary
  Actor Rajinikanth yesterday visited his brother Sathyanarayana in Bengaluru and took his blessings.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X