18 ವರ್ಷಗಳ ಬಳಿಕ ರಾಜ್ ಕಿಡ್ನಾಪ್ ತೀರ್ಪು : 9 ಆರೋಪಿಗಳು ಪ್ರಕರಣದಿಂದ ಖುಲಾಸೆ!

Recommended Video

ಇದೇನಿದು ವರನಟನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳಿಗೆ ಮುಕ್ತಿ..! | Filmibeat Kannada

ವರ ನಟ ಡಾ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿದ್ದ ಪ್ರಕರಣದ ತೀರ್ಪು ಬಂದಿದೆ. ತಮಿಳುನಾಡಿನ ಈರೋಡ್ ಜಿಲ್ಲಾ ನ್ಯಾಯಾಲಯ ಈಗ ಪ್ರಕರಣದ ತೀರ್ಪು ನೀಡಿದೆ.

ಸೂಕ್ತ ಸಾಕ್ಷ್ಯ ಆಧಾರ ಇಲ್ಲದ ಕಾರಣ ಕಿಡ್ನಾಪ್ ಆರೋಪವನ್ನು ಸಾಬೀತು ಮಾಡಲು ಸಾಧ್ಯ ಆಗಿಲ್ಲ. ಈ ಕಾರಣ 9 ಆರೋಪಿಗಳನ್ನು ಈ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಈರೋಡ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಮಣಿ ಅವರು ಆದೇಶ ನೀಡಿದ್ದಾರೆ.

ಡಾ. ರಾಜ್ ಕುಮಾರ್ ಕಿಡ್ನಾಪ್ ಪ್ರಕರಣದ ತೀರ್ಪು ಪ್ರಕಟ

2000 ರಲ್ಲಿ ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದ. ಆದರೆ, ಅದರ ವಿಚಾರಣೆ 11 ವರ್ಷಗಳ ಬಳಿಕ ಅಂದರೆ 2011 ರಲ್ಲಿ ಶುರು ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಗಳ ಮೇಲೆ ಆರೋಪ ಇತ್ತು.

actor rajkumar kidnap case 9 accused acquitted

13 ಆರೋಪಿಗಳಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್ ಸೇರಿದಂತೆ 4 ಮಂದಿ ನಿಧನ ಹೊಂದಿದ್ದಾರೆ. ಉಳಿದವರಿಗೆ ಈಗ ಬಿಡುಗಡೆಯ ಭಾಗ್ಯ ಸಿಕ್ಕಿದೆ.

actor rajkumar kidnap case 9 accused acquitted

ಈ ಪ್ರಕರಣದಲ್ಲಿ ಪಾರ್ವತಮ್ಮ ರಾಜ್ ಕುಮಾರ್, ಅವರ ಸಹೋದರ ಚಿನ್ನೆಗೌಡ, ತಮಿಳಿನಾಡಿನ ಅಧಿಕಾರಿಗಳು ಸೇರಿದಂತೆ ನೂರಕ್ಕು ಹೆಚ್ಚು ಜನರು ಸಾಕ್ಷಿ ಹೇಳಿದ್ದರು. ಆದರೆ, ಇಂದು ಈ ಬಗ್ಗೆ ತೀರ್ಪು ಪ್ರಕಟ ಆಗಿದ್ದು. ಸೂಕ್ತ ಸಾಕ್ಷ್ಯ ಆಧಾರ ಇಲ್ಲದ ಕಾರಣ ಆರೋಪಿಗಳ ಬಿಡುಗಡೆಗೆ ಕೋರ್ಟ್ ಆದೇಶ ನೀಡಿದೆ.

More from Filmibeat

English summary
Dr Rajkumar kidnap case: K Mani, the additional district judge in Gobichettipalayam in Erode district to delivered the judgment in the 18-year-old abduction of Kannada superstar Dr Rajkumar by forest brigand Veerappan. All 9 accused are acquitted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X