»   » ರಕ್ಷಿತ್ ಶೆಟ್ಟಿಗೆ ಹುಡುಗಿ ಹುಡುಕುತ್ತಿದ್ದಾರೆ ಜಗ್ಗೇಶ್

ರಕ್ಷಿತ್ ಶೆಟ್ಟಿಗೆ ಹುಡುಗಿ ಹುಡುಕುತ್ತಿದ್ದಾರೆ ಜಗ್ಗೇಶ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಭರವಸೆಯ ನಟ ರಕ್ಷಿತ್ ಶೆಟ್ಟಿ ಅವರಿಗೆ ಇಂದು (ಜೂನ್ 6th) ಹುಟ್ಟುಹಬ್ಬದ ಸಂಭ್ರಮ. ಸದ್ಯಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ನಟ ರಕ್ಷಿತ್ ಶೆಟ್ಟಿ ಅವರು ಚಿತ್ರತಂಡದ ಜೊತೆ ಕಪಾಲಿ ಚಿತ್ರಮಂದಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

"ವೈಟ್ ಮೈಬಣ್ಣ 6 ಫೀಟ್ ಮೈಕಟ್ಟು ಮದುವೆಯಾದ ವರ್ಷದಲ್ಲೇ ವಂಶ ಉದ್ದಾರ ಮಾಡ್ತಾರೆ..ಹುಡ್ಗಿ ಬೇಕಾಗಿದ್ದಾಳೆ ಸಂಪರ್ಕಿಸಿ...ರಕ್ಷಿತ್ c/off ಶೆಟ್ರು" ಅಂತ ನವರಸ ನಾಯಕ ಜಗ್ಗೇಶ್ ಅವರು ರಕ್ಷಿತ್ ಶೆಟ್ಟಿ ಅವರಿಗೆ ಹುಡುಗಿ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]


Actor Rakshit Shetty Celebrates his Birthday Today June 6

ಅಂದಹಾಗೆ ಜಗ್ಗೇಶ್ ಅವರು ಈ ಥರ ಟ್ವಿಟ್ಟರ್ ನಲ್ಲಿ ಬರೆದುಕೊಳ್ಳಲು ಕಾರಣ ಏನಪ್ಪಾ ಅಂದ್ರೆ ರಕ್ಷಿತ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವುದರಿಂದ ಅವರಿಗೆ ವಿಭಿನ್ನವಾಗಿ ಈ ರೀತಿಯಾಗಿ ಶುಭ ಹಾರೈಸಿದ್ದಾರೆ.ನಟ ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ ಅವರು ಯೋಗರಾಜ್ ಭಟ್ ಅವರ 'ವಾಸ್ತು ಪ್ರಕಾರ' [ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು] ಚಿತ್ರದಲ್ಲಿ ಒಂದಾಗಿ ತೆರೆ ಹಂಚಿಕೊಂಡಿದ್ದರು. ಚಿತ್ರದ ಯಶಸ್ಸಿನ ಜೊತೆಗೆ ಜನ್ಮದಿನದ ಸಂಭ್ರಮದಲ್ಲಿರುವ ರಕ್ಷಿತ್ ಶೆಟ್ಟಿ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ.


English summary
Kannada actor Rakshit Shetty Celebrates his Birthday Today June 6th with his friends and fans in Bengaluru. Kannada Actor Jaggesh tweet wishes for Rakshit Shetty Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada