ಥೈಲ್ಯಾಂಡ್‌ನಲ್ಲಿ ರಕ್ಷಿತ್ ಶೆಟ್ಟಿ & '777 ಚಾರ್ಲಿ' ಟೀಂ!

ನಟ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಬಿಡುಗಡೆ ಆಗಿ ಸೂಪರ್ ಹಿಟ್​ ಆಗಿದೆ. ಬಾಕ್ಸ್ ಆಫೀಸ್​ನಲ್ಲಿಯೂ ಸಖತ್ ಆಗಿ ಸದ್ದು ಮಾಡಿದ್ದು, ಸ್ಯಾಂಡಲ್​ವುಡ್​ನಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅದರಲ್ಲಿ ಚಾರ್ಲಿ ಪಾತ್ರದಲ್ಲಿ ನಟಿಸಿದ್ದ ನಾಯಿ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ಯಾನ್ ಇಂಡಿಯಾ ರಿಲೀಸ್ ಆದ 777 ಚಾರ್ಲಿ ಬಿಡುಗಡೆಯಾಗಿ 50 ದಿನಗಳನ್ನೂ ಪೂರೈಸಿದೆ. ಜೊತೆಗೆ ಒಟಿಟಿ ಅಲ್ಲಿಯೂ ಚಿತ್ರವು ಬಿಡುಗಡೆ ಆಗಿದೆ. ಕಮರ್ಷಿಯಲ್ ಸಿನಿಮಾ ಅಲ್ಲದೇ ಹೋದ್ರೂ, ಈ ಸಿನಿಮಾ ಜನಮನ ಮುಟ್ಟುವಲ್ಲಿ ಯಶ್ಸು ಕಂಡಿದೆ.

ಬಾಲಿವುಡ್, ಟಾಲಿವುಡ್‌ನಲ್ಲೂ ಕೂಡ ಸಿನಿಮಾ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಈಗ ಈ ಚಿತ್ರದ ಬಗ್ಗೆ ಮಾತನಾಡಲು ಕಾರಣ ಚಿತ್ರದ ಯಶಸ್ಸು, ಇಡೀ ಸಿನಿಮಾತಂಡ ಚಾರ್ಲಿಯ ಯಶಸ್ಸನ್ನು ಆಚಾರಿಸಲು ವಿದೇಶಕ್ಕೆ ಹರಿದೆ. ಅಲ್ಲಿನ ಫೊಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದೆ.

100 ಕೋಟಿ ದಾಖಲೆ ಬರೆದ ಚಾರ್ಲಿ!

100 ಕೋಟಿ ದಾಖಲೆ ಬರೆದ ಚಾರ್ಲಿ!

ಬೀದಿ ನಾಯಿಗಳ ರಕ್ಷಣೆ, ಪೋಷಣೆ ಕುರಿತ ಸಂದೇಶವಿರುವ ಈ ಚಿತ್ರದಲ್ಲಿ 'ಧರ್ಮ'ನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಧರ್ಮ-ಚಾರ್ಲಿಯ ಭಾವನಾತ್ಮಕ ಪಯಣ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಕಿರಣ್‌ರಾಜ್‌ ಗೆದ್ದು ಬೀಗಿದ್ದಾರೆ. ಇನ್ನು ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 75 ಕೋಟಿ ರೂ. ಗಿಂತಲೂ ಅಧಿಕ ಕಲೆ ಹಾಕಿದ್ದು, ಒಟ್ಟಾರೆ ಗಳಿಕೆ 100 ರಿಂದ 150 ಕೋಟಿ ರೂ.ಗೂ ಅಧಿಕ ಆಗಿದೆ.

ಥೈಲ್ಯಾಂಡ್‌ನಲ್ಲಿ 777 ಚಾರ್ಲಿ ತಂಡ!

ಥೈಲ್ಯಾಂಡ್‌ನಲ್ಲಿ 777 ಚಾರ್ಲಿ ತಂಡ!

ಚಾರ್ಲಿ ಸಿನಿಮಾತಂಡ ಇದೀಗ ಚಿತ್ರದ ಸಕ್ಸಸ್​ ಸಂಭ್ರಮಿಸಲು ಥೈಲ್ಯಾಂಡ್​ಗೆ ಹಾರಿದೆ. ಚಿತ್ರದ ನಿರ್ದೇಶಕ ಕಿರಣ್ ರಾಜ್​, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಬಹುತೇಕ ಎಲ್ಲರೂ ಥೈಲ್ಯಾಂಡ್​ ಪ್ರವಾಸದಲ್ಲಿದ್ದಾರೆ. ನಿರ್ದೇಶಕ ಕಿರಿಣ್ ರಾಜ್​, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಥೈಲ್ಯಾಂಡ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಫೊಟೋಗಳಿಗೆ 'ಶಾಂತಿ ಮತ್ತು ನಗು, ಯಶಸ್ಸಿನ ನಂತರ' ಎಂದು ಬರೆದುಕೊಂಡಿದ್ದಾರೆ. ಚಿತ್ರತಂಡದ ಜೊತೆಗೆ ನಟ ರಕ್ಷಿತ್ ಶೆಟ್ಟಿ ಕೂಡ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ. ಆದರೆ ಇಲ್ಲಿ ಚಾರ್ಲಿ ಮಾತ್ರ ಮಿಸ್ಸಿಂಗ್.

50 ದಿನಕ್ಕೆ ಒಟಿಟಿಯಲ್ಲಿ '777 ಚಾರ್ಲಿ'!

50 ದಿನಕ್ಕೆ ಒಟಿಟಿಯಲ್ಲಿ '777 ಚಾರ್ಲಿ'!

ಸಿನಿಮಾ ಬಗ್ಗೆ ಮಾಡಿದ್ದ ನಟ ರಕ್ಷಿತ್ ಶೆಟ್ಟಿ ಭರವಸೆಯನ್ನು ವ್ಯಕ್ತ ಪಡಿಸಿದ್ದರು. ಈ ಸಿನಿಮಾ 50 ದಿನಗಳನ್ನು ಪೂರೈಸುತ್ತೆ ಎಂಬ ಭರವಸೆಯಿದೆ. ಅಂದು ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತೇವೆ ಎಂದು ಹೇಳಿದ್ದರು. ಅಂತೆಯೇ ಜುಲೈ 29ರಂದು '777 ಚಾರ್ಲಿ' ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಇದೇ ದಿನ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಸಣ್ಣ ಟೀಸರ್ ಹಂಚಿಕೊಳ್ಳುವ ಮೂಲಕ ರಕ್ಷಿತ್ ಶೆಟ್ಟಿ ಮತ್ತು ಟೀಮ್ ತಿಳಿಸಿದೆ. ಚಿತ್ರಮಂದಿರಲ್ಲಿ ಚಾರ್ಲಿಯನ್ನು ಮಿಸ್ ಮಾಡಿಕೊಂಡವರು, ಈಗ ಒಟಿಟಿಯಲ್ಲಿ ಕಣ್ತುಂಬಿಕೊಳ್ಳ ಬಹುದಾಗಿದೆ.

Recommended Video

ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ರಿಲೀಸ್ ಮುಂದೂಡಿಕೆ ? | Dhruva Sarja | Martin | Filmibeat Kannada

ಡಿಲೀಡೆಟ್ ದೃಶ್ಯಗಳ ಅಳವಡಿಕೆ!

ಇನ್ನು 777 ಚಾರ್ಲಿ ಸಿನಿಮಾದ ಒಟಿಟಿಯಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಚಿತ್ರಮಂದಿರಲ್ಲಿ ನಿಮಗೆ ನೋಡಲು ಸಿಗದ ಕೆಲವು ದೃಶ್ಯಗಳು ಇಲ್ಲಿ ಸಿಗುತ್ತವೆ. ಹೌದಿ ಚಿತ್ರಮಂದಿರದಲ್ಲಿ '777 ಚಾರ್ಲಿ'ಯ ಹಲವು ದೃಶ್ಯಳಿಗೆ ಕತ್ತರಿ ಹಾಕಲಾಗಿತ್ತು. ನಂತ್ರ ಸಾಮಾಜಿಕ ಜಾಲತಾಣದಲ್ಲಿ ಚಾರ್ಲಿಯ ಡಿಲಿಟೆಡ್ ದೃಶ್ಯಗಳು ಕೂಡ ವೈರಲ್ ಆಗಿದ್ದವು. ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಆ ಎಲ್ಲಾ ಡಿಲಿಡೆಟ್ ದೃಶ್ಯಗಳೂ ಕೂಡ ಇರಲಿವೆ. ಹಾಗಾಗಿ ಇದು ಹೊಸ ಚಾರ್ಲಿ ಎಂದೇ ಹೇಳ ಬಹುದು.

More from Filmibeat

English summary
Actor Rakshit Shetty Enjoying Thailand Trip With 777 Charlie Team, Celebrating the success of 777 Charliee, know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X