ಸೋಷಿಯಲ್ ಮೀಡಿಯಾಗಳ ಸಹವಾಸ ಬಿಟ್ಟ ರಕ್ಷಿತ್ ಶೆಟ್ಟಿ!

By Naveen

Recommended Video

ರಕ್ಷಿತ್ ಅಭಿಮಾನಿಗಳ ಕೈಗೆ ಇನ್ಮುಂದೆ ಸಿಗೋದಿಲ್ಲ..! | Filmibeat Kannada

ನಾವು.. ನೀವು..ಎಲ್ಲರೂ ಸೋಷಿಯಲ್ ಮೀಡಿಯಾಗೆ ಇವತ್ತು ಅಂಟಿಕೊಂಡುಬಿಟ್ಟಿದ್ದೇವೆ. ಊಟ, ನೀರು, ಗಾಳಿಯ ರೀತಿ ಸೋಷಿಯಲ್ ಮೀಡಿಯಾ ನಮ್ಮ ಜೀವನದ ಒಂದು ಭಾಗ ಆಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಬಾಳುವ ಶಕ್ತಿ ನಮಗೆ ಇದೆಯಾ ಎನ್ನುವ ಅನುಮಾನ ಕೆಲ ಬಾರಿ ಮೂಡುತ್ತದೆ.

ಹೀಗಿರುವಾಗ, ನಟ ರಕ್ಷಿತ್ ಶೆಟ್ಟಿ ಇನ್ನು ಮುಂದೆ ಸೋಷಿಯಲ್ ಮೀಡಿಯಾಗಳ ಸಹವಾಸ ಬೇಡ ಎಂದಿದ್ದಾರೆ. ಕನ್ನಡದಲ್ಲಿ ಈಗ ಬಹುತೇಕ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಇದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್ ಖಾತೆಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದಾರೆ.

ಹಳೆ ತಲೆಮಾರಿನ ನಟ, ನಟಿ, ನಿರ್ದೇಶಕರು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ನಟ ರಕ್ಷಿತ್ ಶೆಟ್ಟಿ ಮಾತ್ರ ಇದರಿಂದ ದೂರ ಸರಿದಿದ್ದಾರೆ. ಮುಂದೆ ಓದಿ...

ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ದೂರ

ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ದೂರ

ಇಷ್ಟು ದಿನ ನಟ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾ ಸಖತ್ ಆಕ್ಟಿವ್ ಆಗಿದ್ದರು. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ವಿಚಾರಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿದ್ದರು. ಎಲ್ಲರಂತೆ, ಪ್ರತಿ ದಿನ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದ ರಕ್ಷಿತ್ ಈಗ ಅದರಿಂದ ಹೊರ ಬಂದಿದ್ದಾರೆ.

ಟ್ವಿಟ್ಟರ್, ಫೇಸ್ ಬುಕ್, ಇನ್ಟಾಗ್ರಾಮ್ ಖಾತೆ ಇಲ್ಲ

ಟ್ವಿಟ್ಟರ್, ಫೇಸ್ ಬುಕ್, ಇನ್ಟಾಗ್ರಾಮ್ ಖಾತೆ ಇಲ್ಲ

ರಕ್ಷಿತ್ ಅವರ ಟ್ವಿಟ್ಟರ್, ಫೇಸ್ ಬುಕ್, ಇನ್ಟಾಗ್ರಾಮ್ ಮೂರು ಖಾತೆಗಳು ಈಗ ಚಾಲ್ತಿಯಲ್ಲಿ ಇಲ್ಲ. ಈ ಮೂರು ಖಾತೆಗಳನ್ನು ಅವರು ಡಿಲೀಟ್ ಮಾಡಿದ್ದಾರೆ. ಸೋ, ಇನ್ನು ಮುಂದೆ, ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್ ನಲ್ಲಿ ರಕ್ಷಿತ್ ಶೆಟ್ಟಿ ಅಂತ ಹುಡುಕಿದವರಿಗೆ ಅವರ ಯಾವ ಖಾತೆಯೂ ಸಿಗುವುದಿಲ್ಲ.

ಫ್ಯಾನ್ಸ್ ಪೇಜ್ ಗಳು ಇವೆ ಅಷ್ಟೆ

ಫ್ಯಾನ್ಸ್ ಪೇಜ್ ಗಳು ಇವೆ ಅಷ್ಟೆ

ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಇರುವ ಕೆಲ ಆಫೀಶಿಯಲ್ ಫೇಸ್ ಬುಕ್ ಖಾತೆಗಳು ಇವೆ. ಇನ್ನು ಮುಂದೆ ಅವರ ಸಿನಿಮಾದ ಅಪ್ ಡೇಟ್ ಸುದ್ದಿ ಇದರ ಮೂಲಕವೇ ಬರಬಹುದು.

ಕಾರಣ ಏನು?

ಕಾರಣ ಏನು?

ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ಶೆಟ್ಟಿ ಆಚೆ ಬರುವುದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ಆದರೆ, ಕೆಲ ದಿನಗಳ ಹಿಂದೆ ಈ ಬಗ್ಗೆ ರಕ್ಷಿತ್ ತಿಳಿಸಿದ್ದರು. ''ನಾನು ಸೋಷಿಯಲ್ ಮೀಡಿಯಾ ದಿಂದ ಹೊರ ಬರುತ್ತಿದ್ದೇನೆ. ನಿಮ್ಮ ಪ್ರೀತಿಗೆ ಧನ್ಯವಾದ.'' ಎಂದು ಇನ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು.

ಸಖತ್ ಟ್ರೋಲ್ ಆಗುತ್ತಿತ್ತು

ಸಖತ್ ಟ್ರೋಲ್ ಆಗುತ್ತಿತ್ತು

ರಕ್ಷಿತ್ ಶೆಟ್ಟಿ ಅವರ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಆಗುತ್ತಿತ್ತು. ಕೆಲವರು ಮಿತಿ ಮೀರಿ ಅವರ ಮತ್ತು ರಶ್ಮಿಕಾ ಬಗ್ಗೆ ಟ್ರೋಲ್ ಮಾಡುತ್ತಿದ್ದರು. ಸೋ, ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ಹೊರ ಬಂದರ..? ಉತ್ತರ ಅವರಿಗೆ ಗೊತ್ತು.

ಅತಿ ಹೆಚ್ಚು ಫಾಲೋವರ್ಸ್ ಇದ್ದರು

ಅತಿ ಹೆಚ್ಚು ಫಾಲೋವರ್ಸ್ ಇದ್ದರು

ಟ್ವಿಟ್ಟರ್ ಖಾತೆಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದ ನಟರ ಪೈಕಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಫಾಲೋವರ್ಸ್ ಗಳಿಸಿದ್ದ ರಕ್ಷಿತ್ ಮತ್ತೆ ವಾಪಸ್ ಬರುತ್ತಾರ ಅಥವಾ ತಮ್ಮ ನಿರ್ಧಾರವನ್ನು ಕೈ ಬಿಡುವುದಿಲ್ವಾ ನೋಡಬೇಕು.

More from Filmibeat

English summary
Kannada actor Rakshit Shetty quits social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X