For Quick Alerts
  ALLOW NOTIFICATIONS  
  For Daily Alerts

  ಮತ್ತೆ ರಿಚ್ಚಿ ಅವತಾರದಲ್ಲಿ ಬರ್ತಾರೆ ರಕ್ಷಿತ್ ಶೆಟ್ಟಿ

  By Naveen
  |

  ನಟನೆ ಹಾಗೂ ನಿರ್ದೇಶನ ಎರಡು ವಿಭಾಗವನ್ನು ನಿರ್ವಹಿಸುವ ರಕ್ಷಿತ್ ಶೆಟ್ಟಿ ಸದ್ಯ ಹೀರೋ ಆಗಿ ಫುಲ್ ಬ್ಸುಸಿ ಇದ್ದಾರೆ. ರಕ್ಷಿತ್ ಕೊನೆಯದಾಗಿ ನಿರ್ದೇಶನ ಮಾಡಿದ್ದು 'ಉಳಿದವರು ಕಂಡಂತೆ' ಚಿತ್ರವನ್ನು. ಇನ್ನು ಈ ಚಿತ್ರದ ರಿಚ್ಚಿ ಪಾತ್ರ ಸಾಕಷ್ಟು ಜನರಿಗೆ ಸಖತ್ ಇಷ್ಟ ಆಗಿತ್ತು. ಜೊತೆಗೆ ಈ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಆದರೆ, ಇದೀಗ ಮತ್ತೆ ಈ ಅವತಾರದಲ್ಲಿ ರಕ್ಷಿತ್ ಎಂಟ್ರಿ ಕೊಡಲಿದ್ದಾರೆ.

  ನಟ ರಕ್ಷಿತ್ ಶೆಟ್ಟಿ ಈಗ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ರಾಹುಲ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೆ ಹೊಸ ನಿರ್ದೇಶಕನ ಚಿತ್ರದಲ್ಲಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ.

   ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ್ದಕ್ಕೆ ರಕ್ಷಿತ್ ಶೆಟ್ಟಿಗೆ ಟೆಕ್ಕಿಯಿಂದ ಪಾಠ ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ್ದಕ್ಕೆ ರಕ್ಷಿತ್ ಶೆಟ್ಟಿಗೆ ಟೆಕ್ಕಿಯಿಂದ ಪಾಠ

  'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಾಹುಲ್ ಅವರಿಗೆ ಇದು ಮೊದಲ ಸಿನಿಮಾವಾಗಿದೆ. ಚಿತ್ರದ ಕಥೆ ರಿಚ್ಚಿ ಪಾತ್ರವನ್ನು ಬೆಸ್ಡ್ ಆಗಿ ಇಟ್ಟುಕೊಂಡು ಮಾಡಲಾಗಿದೆಯಂತೆ. ಈ ಚಿತ್ರದ ಮೂಲಕ ತೆರೆ ಮೇಲೆ ಮತ್ತೆ ರಿಚ್ಚಿ ಅಬ್ಬರಿಸುತ್ತಿದ್ದಾನೆ. ಅಂದಹಾಗೆ, ಈ ಹೊಸ ಚಿತ್ರದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.

  actor rakshit shettys new movie based on ulidavaru kandante richie character

  ರಕ್ಷಿತ್ ಶೆಟ್ಟಿ ಸದ್ಯ ಅವನೇ ಶ್ರೀಮನ್ನಾರಾಯಣ ಹಾಗೂ '777 ಚಾರ್ಲಿ' ಸಿನಿಮಾದಲ್ಲಿ ತೊಡಗಿದ್ದಾರೆ. ಇವುಗಳ ಬಳಿಕ ಈ ಹೊಸ ಸಿನಿಮಾ ಶುರು ಆಗಲಿದೆ.

  English summary
  Kannada actor Rakshit Shetty's new movie based on 'Ulidavaru Kandante' Richie character. The movie is directed by Rahul

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X