For Quick Alerts
  ALLOW NOTIFICATIONS  
  For Daily Alerts

  ಪಬ್ಲಿಕ್ ಟಿವಿ v/s ರಕ್ಷಿತ್: ಅರ್ಹತೆ ಇದ್ದವರಿಗೆ ಜವಾಬ್ದಾರಿ ಕೊಡಿ, ತೇಜೋವಧೆ ಬಗ್ಗೆ ರಕ್ಷಿತ್ ಪ್ರತಿಕ್ರಿಯೆ

  |

  'ನಾನು ಇಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಬಂದಿದ್ದು, ಯಾರೋ ಏನೋ ಕಾರ್ಯಕ್ರಮ ಮಾಡ್ತಾರೆ ಅದಕ್ಕೆ ಅಂತ ಉತ್ತರ ಕೊಟ್ಟುಕೊಂಡು ಕೂರಲು ಆಗಲ್ಲ' ಎನ್ನುತ್ತಾ ಮಾತು ಪ್ರಾರಂಭಿಸಿದ ರಕ್ಷಿತ್, ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ರು.

  ಪಬ್ಲಿಕ್ ಟಿವಿ ಗೆ ಹೇಳಿದಂತೆ ಮಾಡಿ ತೋರಿಸಿದ ರಕ್ಷಿತ್! | Filmibeat Kannada

  ಇತ್ತೀಚಿಗೆ ಕನ್ನಡ ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಒಂದು ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಬಗ್ಗೆ ಮಾಡಿದ ಆರೋಪಗಳಿಗೆ ರಕ್ಷಿತ್ ಇಂದು ಪ್ರತಿಕ್ರಿಯೆ ನೀಡಿದರು. ತನ್ನ ತೇಜೋವಧೆ ಕಾರ್ಯಕ್ರಮಕ್ಕೆ ರಕ್ಷಿತ್ ಇಂದು ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ರು.

  ಪತ್ರಿಕಾಗೋಷ್ಠಿಯಲ್ಲಿ "ಕಾರ್ಯಕ್ರಮ ನೋಡಿ ರಿಷಬ್ ಶೆಟ್ಟಿ ಕಾಲ್ ಮಾಡಿ ಹೇಳಿದ, ಈ ರೀತಿ ಕಾರ್ಯಕ್ರಮ ಬಂದಿದೆ ಎಂದು. ಇದೇನು ಹೊಸದಲ್ಲ ಎಂದೆ. ಆದರೆ ಇದಕ್ಕೆ ರಿಯಾಕ್ಟ್ ಮಾಬೇಕಾಗುತ್ತೆ ಅಂತ ಹೇಳಿದ. ನಂತರ ಪ್ರಮೋದ್ ಶೆಟ್ಟಿ ಕಾಲ್ ಮಾಡಿದ್ರು. ತುಂಬಾ ಸಿಟ್ಟಿನಲ್ಲಿ ಇದ್ರು. ಬಳಿಕ ನಾನು ಲೀಗಲ್ ಆಗಿ ಮಾಡೋಣ ಎಂದು ಹೇಳಿ ಸುಮ್ಮನಾದೆ. ನಾನು ಸ್ವಲ್ಪ ಕಾರ್ಯಕ್ರಮ ನೋಡಿದೆ ಇದು ಸ್ವಲ್ಪ ಜಾಸ್ತಿ ಆಯ್ತು ಅಂತ ಅನಿಸಿತು. ಟಾರ್ಗೆಟ್ ಮಾಡೋಕು ಒಂದು ರೀತಿ ಇರುತ್ತೆ" ಎಂದು ರಕ್ಷಿತ್ ಹೇಳಿದ್ರು.

  "ಇದೆಲ್ಲ ನನ್ನ ಫ್ಯಾಮಿಲಿಗೆ ಅಭ್ಯಾಸವಾಗಿದೆ. ತಾಯಿ ಹೇಳಿದ್ರು, ತಲೆಕಡಿಸಿಕೊಳ್ಳಬೇಡ ಎಂದರು. ಅದರೆ ಅವರಲ್ಲಿ ಒಂದು ನೋವಿತ್ತು. ಬಳಿಕ 11ಕ್ಕೆ ಉತ್ತರ ಕೊಡುತ್ತೇನೆ ಎಂದು ಪೋಸ್ಟ್ ಮಾಡಿದ ಬಳಿಕ ಅದನ್ನು ನೋಡಿ ತಾಯಿಗೆ ಸಮಾಧಾನ ಆಯ್ತು. ನನ್ನ ಸಿನಿಮಾಗೆ ಜನ ಬರ್ತಾರೆ ಎನ್ನುವುದು ನನಗೆ ಗೊತ್ತು. ಆದರೆ ಈ ಸಮಯದಲ್ಲಿ ಜನ ಇಷ್ಟು ಜನ ನನ್ನ ಜೊತೆ ನಿಲ್ತಾರೆ ಎನ್ನುವುದು ನನಗೆ ಇದೇ ಮೊದಲು ಗೊತ್ತಾಯ್ತು. ಇದೇ ಕೊನೆ. ಇಂಥ ವಿಚಾರಕ್ಕೆ ನಾನು ಇಮ್ಮುಂದೆ ಮಾತಡಲ್ಲ" ಎಂದು ರಕ್ಷಿತ್ ಪ್ರತಿಕ್ರಿಯೆ ನೀಡಿದ್ರು.

  "ಬ್ರೇಕ್ ಅಪ್ ಆದಾಗ ಪಬ್ಲಿಕ್ ಟಿವಿ ತುಂಬ ಕೆಟ್ಟದಾಗಿ ಕಾರ್ಯಕ್ರಮ ಮಾಡಿದ್ರು. ಎಲ್ಲರೂ ಮಾಡಿದ್ದರು. ಆದರೆ ಅವರದ್ದು ಅತಿಯಾಗಿತ್ತು. ಅದು ನನಗೆ ತುಂಬಾ ಸಿಟ್ಟು ತಂದಿತ್ತು. ಪಿತ್ತ ನೆತ್ತಿಗೇರಿತ್ತು, ಆಗ ಕೆಟ್ಟದಾಗಿ ಮಾತನಾಡಿದೆ"ಎಂದು ಕಾರ್ಯಕ್ರಮ ಮಾಡಿದ ಆಯೋಜಕರ ವಿರುದ್ಧ ಗರಂ ಆದರು. "ಇಲ್ಲಿ ನಿರೂಪಕರದ್ದೂ ಜವಾಬ್ದಾರಿ ಇರುತ್ತೆ. ಸ್ಕ್ರಿಪ್ಟ್ ಬರೆದುಕೊಟ್ಟ ಬಳಿಕ ಅದನ್ನು ಓದುವಾಗ ಯೋಚಿಸಬೇತು. ಪ್ರತಿಭೆ ಇರೋರಿಗೆ ಎಲ್ಲಾದರೂ ಕೆಲಸ ಸಿಗುತ್ತೆ" ಎಂದರು.

  "ರಂಗನಾಥ್ ಅವರೇ, ಪಬ್ಲಿಕ್ ಟಿವಿಯಲ್ಲಿ ಏನೇ ಬಂದರೂ ಅದೂ ನಿಮ್ಮ ಬಾಯಲ್ಲೇ ಬಂದಷ್ಟು ಮೌಲ್ಯವಿದೆ. ನಿಮ್ಮ ವಾಹಿನಿಯನ್ನು ತುಂಬಾ ಜನ ನಂಬುತ್ತಾರೆ. ಒಬ್ಬ ವ್ಯಕ್ತಿಗೆ ಜವಾಬ್ದಾರಿ ಕೊಡುವಾಗ ಆ ವ್ಯಕ್ತಿ ಎಷ್ಟು ಅರ್ಹ ಎನ್ನುವುದನ್ನು ತುಂಬಾ ಮುಖ್ಯ. ಇದು ನನಗೆ ಅನುಭವ ಆಗಿದೆ. ಅರ್ಹತೆ ಇಲ್ಲದವರಿಗೆ ಜವಾಬ್ದಾರಿ ಕೊಟ್ಟು ನಾನು ಕೈ ಸುಟ್ಟುಕೊಂಡಿದ್ದೆ, ನೀವು ಸುಟ್ಟುಕೊಳ್ಳುತ್ತೀರಿ" ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಿಗೆ ಸಲಹೆ ನೀಡಿದರು.

  English summary
  Actor Rakshith Shetty reaction About Public TV alligation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X