For Quick Alerts
  ALLOW NOTIFICATIONS  
  For Daily Alerts

  ಹುಬ್ಬಳ್ಳಿಯಲ್ಲಿ ನಟ ರಕ್ಷಿತ್: ಸಿಂಪಲ್ ಸ್ಟಾರ್ ನೋಡಿ ಅಭಿಮಾನಿಗಳು ಫುಲ್ ಖುಷ್

  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಶ್ರೀಮನ್ನಾರಾಯಣ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಕನ್ನಡ ವರ್ಷನ್ ರಿಲೀಸ್ ಆದ ನಂತರ ಶ್ರೀಮನ್ನಾರಾಯಣ ಬೇರೆ ಬೇರೆ ಭಾಷೆಯಲ್ಲಿಯೂ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಎಲ್ಲೆಲ್ಲೂ ಶ್ರೀಮನ್ನಾರಾಯಣ ಹವಾ ಜೋರಾಗಿದೆ. ಇದರ ನಡುವೆ ರಕ್ಷಿತ್ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಗೆ ರಕ್ಷಿತ್ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ರಕ್ಷಿತ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳ ಜೊತೆ ಮಾತನಾಡಿ ಯಶಸ್ವಿನ ಸಂತಸವನ್ನು ಹಂಚಿಕೊಂಡಿದ್ದಾರೆ.

  ಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  ನಂತರ ಮಾಧ್ಯಮದ ಜೊತೆ ಮಾತನಾಡಿದ ರಕ್ಷಿತ್ "ಒಂದು ಸಿನಿಮಾ ಗೆಲುವು ಸಾಧಿಸಲು ಉತ್ತರ ಕರ್ನಾಟಕ ಭಾಗ ಬೆನ್ನೆಲುಬಾಗಿದ್ದು, ಅದೇ ರೀತಿ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ಗೆಲಿಸಿದ್ದಾರೆ. ಅಲ್ಲದೇ ಚಿತ್ರದ ಚಿತ್ರೀಕರಣವನ್ನು ಉತ್ತರ ಕರ್ನಾಟಕ ಭಾಗದಲ್ಲೂ ಮಾಡಲಾಗಿದೆ. ಸಿನಿಮಾ 10 ದಿನಗಳಲ್ಲಿ ಹೊಸ ದಾಖಲೆ ಸೃಷ್ಟಿ ಮಾಡುವಲ್ಲಿ ಮುನ್ನುಗ್ಗುತ್ತಿದೆ. ತೆಲಗು, ತಮಿಳು, ಮಲಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ" ಎಂದು ಹೇಳಿದರು.

  ಇನ್ನು ಇದೆ ತಿಂಗಳು 17 ರಂದು ಶ್ರೀಮನ್ನಾರಾಯಣ ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಎಂದು ರಕ್ಷಿತ್ ಮಾಹಿತಿ ನೀಡಿದರು. ರಕ್ಷಿತ್ ಜೊತೆ ನಿರ್ದೇಶಕ ಸಚಿನ್ ಮತ್ತು ಖಳನಟ ಬಾಲಾಜಿ, ಪ್ರಮೋದ ಶೆಟ್ಟಿ ಸಾಥ್ ನೀಡಿದ್ದರು. ಅವನೇ ಶ್ರೀಮನ್ನಾರಾಯಣ ಡಿಸೆಂಬರ್ 27ರಂದು ಕನ್ನಡ ವರ್ಷನ್ ತೆರೆಗೆ ಬಂದಿದೆ. ನಂತರ ತಮಿಳು, ತೆಲುಗು ಮತ್ತು ಮಲಯಾಳಂ ವರ್ಷನ್ ನಾರಾಯಣ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

  English summary
  Kannada Actor Rakshith Shetty visited Hubballi theatre. Hubballi fans are happy to saw Rakshith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X