ಮಗಳ ಮದುವೆ ಸಂಭ್ರಮದಲ್ಲಿ ರಮೇಶ್ ಅರವಿಂದ್; ಸಂಗೀತ ಸಮಾರಂಭದಲ್ಲಿ ಮಿಂಚಿದ ನಿಹಾರಿಕಾ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ ಜೋರಾಗಿದೆ. ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ದಿನಗಳಿಂದ ನಿಹಾರಿಕಾ ಮದುವೆ ಶಾಸ್ತ್ರಗಳು ನಡೆಯುತ್ತಿದೆ. ರಮೇಶ್ ಅರವಿಂದ್ ಮಗಳ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಮುದ್ದಿನ ಮಗಳು ನಿಹಾರಿಕಾ ಅಕ್ಷಯ್ ಎನ್ನುವರ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಿಹಾರಿಕಾ ಮತ್ತು ಅಕ್ಷಯ್ ಇಬ್ಬರು ಈಗ ಪತಿ-ಪತ್ನಿಯರಾಗುತ್ತಿದ್ದಾರೆ. ನಿಹಾರಿಕಾ ಮತ್ತು ಅಕ್ಷಯ್ ಮದುವೆ ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ನಡೆಯುತ್ತಿದೆ.

ಸಂಗೀತ ಸಮಾರಂಭದಲ್ಲಿ ಮಿಂಚಿದ ನಿಹಾರಿಕಾ

ಸಂಗೀತ ಸಮಾರಂಭದಲ್ಲಿ ಮಿಂಚಿದ ನಿಹಾರಿಕಾ

ನಿನ್ನೆ (ಡಿಸಂಬರ್ 27) ರೆಸಾರ್ಟ್ ನಲ್ಲಿ ರಮೇಶ್ ಅರವಿಂದ್ ಮಗಳ ಸಂಗೀತ ಸಮಾರಂಭದ ಶಾಸ್ತ್ರ ಜೋರಾಗಿ ನೆರವೇರಿತು. ಎಲ್ಲಾ ಶಾಸ್ತ್ರಗಳನ್ನು ನಿಹಾರಿಕಾ ಎಂಜಾಯ್ ಮಾಡುತ್ತಿದ್ದಾರೆ. ಸಂಗೀತ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿಹಾರಿಕಾ ಸಂಗೀತ ಸಮಾರಂಭದಲ್ಲಿ ಭಾಗಿಯಾಗಿ, ನವ ಜೋಡಿಗೆ ಶುಭಹಾರೈಸಿದ್ದಾರೆ.

ಕೆಂಪು ಬಣ್ಣದ ಲೆಹೆಂಗಾದಲ್ಲಿ ನಿಹಾರಿಕಾ ಮಿಂಚಿಂಗ್

ಕೆಂಪು ಬಣ್ಣದ ಲೆಹೆಂಗಾದಲ್ಲಿ ನಿಹಾರಿಕಾ ಮಿಂಚಿಂಗ್

ನಿಹಾರಿಕಾ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದಾರೆ. ಮದುಮಗ ಅಕ್ಷಯ್ ಸೂಟ್ ನಲ್ಲಿ ಮಿಂಚಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಜೊತೆ ರಮೇಶ್ ಅರವಿಂದ್ ಕುಟುಂಬ ಸಹ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರೆಸಾರ್ಟ್ ನಲ್ಲಿ ನಡೆಯಲಿದೆ ಸರಳ ಮದುವೆ

ರೆಸಾರ್ಟ್ ನಲ್ಲಿ ನಡೆಯಲಿದೆ ಸರಳ ಮದುವೆ

ಅಂದಹಾಗೆ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಡಿಸೆಂಬರ್ 28ರಂದು ಅಂದರೆ ಇವತ್ತು ನಡೆಯಲಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ನಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ಅಕ್ಷಯ್, ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಕೋವಿಡ್ ಇರುವ ಕಾರಣ ಸರಳವಾಗಿ ಮದುವೆ ನಡೆಯುತ್ತಿದ್ದು ಕೆಲವೇ ಕೆಲವು ಮಂದಿ ಹಾಜರಾಗಿದ್ದಾರೆ. ಕುಟುಂಬದವರು ಮತ್ತು ತೀರಾ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ ಎನ್ನುವ ಸುದ್ದಿ ತಿಳಿದುಬಂದಿದೆ. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಮದುವೆ ನೆರವೇರಲಿದೆ.

ಜನವರಿಯಲ್ಲಿ ಆರತಕ್ಷತೆ

ಜನವರಿಯಲ್ಲಿ ಆರತಕ್ಷತೆ

ಇಂದು ಮದುವೆ ನೆರವೇರಿದರೆ ಜನವರಿ ಎರಡನೇ ವಾರದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ರಿಸಪ್ಷನ್ ನಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ. ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.

More from Filmibeat

English summary
Actor Ramesh Aravind daughter Niharika sangeeth ceremony photo goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X