twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್‌ವುಡ್ ನಟ ರಮೇಶ್‌ ಅರವಿಂದ್‌ಗೆ 'ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ'

    |

    ಕನ್ನಡ ಚಿತ್ರರಂಗದ ಮೇರುನಟ ರಮೇಶ್‌ ಅರವಿಂದ್ ಸುಮಾರು 35 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಾದ ರಹಿತ ನಟ ಎನ್ನುವ ಹೆಗ್ಗಳಿಕೆಗೂ ರಮೇಶ್‌ ಅರವಿಂದ್ ಪಾತ್ರರಾಗಿದ್ದು, ಕೇವಲ ನಟನಾಗಿ ಅಲ್ಲ. ಒಬ್ಬ ಅದ್ಭುತ ವ್ಯಕ್ತಿಯಾಗಿಯೂ ಸಹ ಗುರುತಿಸಿಕೊಂಡವರು. ಸರಳ ಸಜ್ಜನಿಕೆಗೆ ಹೆಸರಾಗಿರುವ ರಮೇಶ್‌ ಅರವಿಂದ್‌ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಸದಾ ಹಸನ್ಮುಖಿಯಾಗಿರುವ ಅವರು, ಸಕರಾತ್ಮಕ ಯೋಚನೆಗಳನ್ನೇ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

    ಶತದಿನಗಳನ್ನು ಆಚರಿಸಿರುವ ಒಂಬತ್ತು ಚಿತ್ರಗಳಲ್ಲಿ ರಮೇಶ್‌ ನಾಯಕ ನಟರಾಗಿದ್ದು, ಯಾವುದೇ ಪಾತ್ರಗಳನ್ನು ನೀಡಿದರೂ ಸಹ ಆ ಪಾತ್ರಕ್ಕೆ ಕಿಂಚಿತ್ತು ಅಪಮಾನವಾಗದಂತೆ ಪಾತ್ರಕ್ಕೆ ಜೀವ ತುಂಬುತ್ತಾರೆ. ಒಬ್ಬ ಪರಿಪೂರ್ಣ ನಟರಾಗಿರುವ ರಮೇಶ್‌ ಅರವಿಂದ್‌ ಇಂದು ಅನೇಕ ಯುವ ನಟರಿಗೆ, ಯುವ ಜನತೆಗೆ ಸ್ಫೂರ್ತಿ. ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ರಮೇಶ್‌ ಅರವಿಂದ್‌ ಒಬ್ಬ ಒಳ್ಳೆ ವಾಗ್ಮಿ. ತಮ್ಮ ನಿರರ್ಗಳ ಹಾಗೂ ಸ್ಪಷ್ಟ ಕನ್ನಡದಿಂದ ನೋಡುಗರನ್ನು ಸೆಳೆಯುವ ಅವರು ಬದುಕಿಗೆ ಸ್ಫೂರ್ತಿ ನೀಡುವ ವಿಚಾರಗಳ ಕುರಿತು ಮಾತನಾಡುತ್ತಿರುತ್ತಾರೆ. ಇಂತಹ ವಿಡಿಯೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

    "ನಮ್ಮ ಚಿತ್ರಗಳಿಗೆ ಆಸ್ಕರ್ ಸರ್ಟಿಫಿಕೇಟ್ ಬೇಕಾಗಿಲ್ಲ": ನಿಖಿಲ್ ಶಾಕಿಂಗ್ ಹೇಳಿಕೆ

    ರಮೇಶ್‌ ಅರವಿಂದ್‌ ಅವರ ಮಾತುಗಳು ಅದೆಷ್ಟೂ ಜನರಿಗೆ ಸ್ಥೂರ್ತಿ ನೀಡಿವೆ. ಅವರ ಬದುಕು ಕೂಡ ಅಷ್ಟೇ ಪಾರದರ್ಶಕ. ತಾವು ಬದುಕಿನಲ್ಲಿ ಅಳವಡಿಸಿಕೊಂಡ ವಿಚಾರಗಳನ್ನೇ ಇತರರಿಗೆ ಹೇಳುವ ರಮೇಶ್‌ ಅರವಿಂದ್‌ ಇತ್ತೀಚಿಗೆ ತಾವು ಬರೆದ ಪುಸ್ತಕ ಕೂಡ ಬಿಡುಗ ಮಾಡಿದ್ದರು. ರಮೇಶ್‌ ಅರವಿಂದ್‌ ಅವರ 'ಪ್ರೀತಿಯಿಂದ ರಮೇಶ್‌ ಅರವಿಂದ್‌: ಯಶಸ್ಸಿನ ಸರಳ ಸೂತ್ರಗಳು' ಪುಸ್ತಕವನ್ನು ಇತ್ತೀಚೆಗೆ ಹಿರಿಯ ನಟ ಅನಂತ್‌ ನಾಗ್‌ ಬಿಡುಗಡೆ ಮಾಡಿದ್ದರು. ಸಾವಣ್ಣ ಪ್ರಕಾಶನದಲ್ಲಿ ಮುದ್ರಣಗೊಂಡಿರುವ ಪ್ರೀತಿಯಿಂದ ರಮೇಶ್‌ ಅರವಿಂದ್‌ ಯಶಸ್ಸಿನ ಸರಳ ಸೂತ್ರಗಳು ಪುಸ್ತಕ ಬಿಡುಗಡೆಗೊಂಡ ಮೊದಲೇ ದಿನವೇ ಮರು ಮುದ್ರಣಗೊಂಡಿತ್ತು.

    Actor Ramesh Aravind Felicitated With The Prestigious Shivarama Karanth Hutturu Award

    ಉತ್ತಮ ನಟ, ನಿರೂಪಕ, ಲೇಖಕಕ, ವಾಗ್ಮಯಿ, ಸರಳ ವ್ಯಕ್ತಿಯಾಗಿರುವ ರಮೇಶ್‌ ಅರವಿಂದ್‌ ಅವರನ್ನು ಮತ್ತೊಂದು ಪ್ರಶಸ್ತಿ ಅರಸಿ ಬಂದಿದೆ. ಚಿತ್ರರಂಗಕ್ಕೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಈ ಬಾರಿಯ 'ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ'ಯನ್ನು ರಮೇಶ್‌ ಅರವಿಂದ್‌ಗೆ ನೀಡಲು ನಿರ್ಧರಿಸಲಾಗಿದೆ.

    ಸೈಮಾ ಆಯ್ತು ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ! ದಿನಾಂಕ ಬಹಿರಂಗಸೈಮಾ ಆಯ್ತು ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ! ದಿನಾಂಕ ಬಹಿರಂಗ

    ಕಳೆದ 17 ವರ್ಷಗಳಿಂದ ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಕೊಡಮಾಡುತ್ತಾ ಬಂದಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ನಟ ರಮೇಶ್‌ ಅರವಿಂದ್‌ ಅವರು ಈ ಅತ್ಯುತ್ತಮ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಕೇವಲ ರಮೇಶ್‌ ಅರವಿಂದ್ ಅವರ ಅಭಿಮಾನಿಗಳಿಗಷ್ಟೇ ಅಲ್ಲದೇ, ಇಡಿ ಚಿತ್ರರಂಗಕ್ಕೆ ಹೆಮ್ಮೆಯ ಹಾಗೂ ಸಂತಸದ ವಿಚಾರವಾಗಿದೆ.

    ಇನ್ನು ಅಕ್ಟೋಬರ್‌ 10 ಶಿವರಾಮ ಕಾರಂತ ಅವರ ಹುಟ್ಟುಹಬ್ಬದ ಅಂಗವಾಗಿ ಕೋಟದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಮೇಶ್‌ ಅರವಿಂದ್‌ ಅವರಿಗೆ 'ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ' ನೀಡಿ ಗೌರವಿಸಲಾಗುತ್ತದೆ. ಇನ್ನು ಇತ್ತೀಚೆಗಷ್ಟೆ ರಮೇಶ್‌ ಅರವಿಂದ್‌ಗೆ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

    'RRR'ಗೆ ಮುಚ್ಚಿಲ್ಲ ಆಸ್ಕರ್ ಹಾದಿ: ಆದರೆ ಪ್ರವೇಶ ಹೇಗೆ?'RRR'ಗೆ ಮುಚ್ಚಿಲ್ಲ ಆಸ್ಕರ್ ಹಾದಿ: ಆದರೆ ಪ್ರವೇಶ ಹೇಗೆ?

    English summary
    Sandalwood Actor Ramesh Aravind felicitated with the prestigious Shivarama Karanth Hutturu award. Know More.
    Saturday, September 24, 2022, 19:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X