»   » ಮುಂದುವರೆದ ವೆಂಕಟನ ಹಾಸ್ಯೋತ್ಸವ

ಮುಂದುವರೆದ ವೆಂಕಟನ ಹಾಸ್ಯೋತ್ಸವ

Subscribe to Filmibeat Kannada
ರಾಮ, ಶ್ಯಾಮ ಭಾಮ, ಸತ್ಯವಾನ್ ಸಾವಿತ್ರಿ ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ರಮೇಶ್‌ಅರವಿಂದ್ ನಿರ್ದೇಶನದ ಮತ್ತೊಂದು ಹಾಸ್ಯ ರಸಾಯನ ವೆಂಕಟ ಇನ್ ಸಂಕಟ ಚಿತ್ರಕ್ಕೆ ನಗರದಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ.

ಇಲ್ಲೊಬ್ಬ ರಜನಿಕಾಂತ್ ಇದ್ದಾನೆ. ಆಶಾ ಎಂಬ ಹುಡುಗಿಗೆ ಲವ್ ಯೂ ಎಂದು ಹಾಸ್ಯಕ್ಕೂ ಗುರಿಯಾಗುತ್ತಾನೆ. ಈತ ಚುಡಾಯಿಸಿದ್ದಾಗ ಕೋಪಗೊಂಡ ಆಶಾ ತಟ್ಟೆಯಲ್ಲಿದ್ದ ನೂಡಲ್ಸ್ ತೆಗೆದು ಅವನ ತಲೆಯ ಮೇಲೆ ಸುರಿದು ಕಬ್ಬಿಣ್ಣದ ರಿಂಗ್ ಒಂದನ್ನು ಕಿರೀಟದ ರೀತಿ ಇಟ್ಟು ಅಲ್ಲಿಂದ ಪರಾರಿಯಾಗುವ ಹಾಸ್ಯ ಸನ್ನಿವೇಶವನ್ನು ವೆಂಕಟ ಇನ್ ಸಂಕಟ ಚಿತ್ರಕ್ಕಾಗಿ ವೆಂಕಟಪ್ಪ ಕಾಲೇಜ್ ಕ್ಯಾಂಟೀನ್‌ನಲ್ಲಿ ನಿರ್ದೇಶಕರು ಚಿತ್ರೀಕರಿಸಿಕೊಂಡರು.

ನರೇನ್ ಮಗಲಾನಿ ಅವರು ಸಿನಿಮಾಹೌಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ವೆಂಕಟ ಇನ್ ಸಂಕಟ ಚಿತ್ರಕ್ಕೆ ರವಿಜೋಷಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ರಿಕ್ಕಿಕೇಜ್ ಸಂಗೀತ, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ನಂದ ಸಂಭಾಷಣೆ, ಎ.ಎನ್.ಮೂರ್ತಿ, ರವಿವರ್ಮ ಸಾಹಸ, ಮದನ್ ಹರಿಣಿ ನೃತ್ಯ, ಬಾಲಾಜಿಮನೋಹರ್, ಧನಂಜಯ ಬಾಲಾಜಿ ಸಹನಿರ್ದೇಶನ, ರಮೇಶ್‌ದೇಸಾಯಿ ಕಲೆ, ಟಿ.ಎನ್.ಎಲ್.ಶಾಸ್ತ್ರಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್‌ಅರವಿಂದ್, ಶರ್ಮಿಳಾಮಾಂಡ್ರೆ, ಮೇಘನ ಮುಡಿಯನ್, ಅನುಶಾ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಪ್ಪಿಕಡ್, ಎಂ.ಎಸ್.ಉಮೇಶ್ ಮುಂತಾದಾವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada