ಡಾ ವಿಷ್ಣು ಪ್ರಶಸ್ತಿ ಪಡೆದ ಬಳಿಕ 'ನನ್ನ ಜೀವನ ಸಾರ್ಥಕ'ವೆಂದ ರಮೇಶ್ ಭಟ್
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ಪ್ರತಿ ವರ್ಷ ನೀಡುವ ಅಭಿನವ ಬಾರ್ಗವ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನ ಹಿರಿಯ ನಟ ರಮೇಶ್ ಭಟ್ ಸ್ವೀಕರಿಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ನಟ ರಮೇಶ್ ಭಟ್, ವಿಷ್ಣುವರ್ಧನ್ ಜೊತೆಗಿನ ಸ್ನೇಹ ಸಂಬಂಧದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
'ನಾನು ಸಹ ಹೀರೋ ಆಗಲು ಬಂದೆ ಆದರೆ ನನಗೆ ಹಿರಿಯ ನಿರ್ದೇಶಕ ಭಾರ್ಗವ ರವರು 'ಜೀವನಚಕ್ರ' ಚಿತ್ರದಲ್ಲಿ ಅವಕಾಶ ನೀಡಿ ನನ್ನ ಜೀವನ ಚಕ್ರವನ್ನ ಬದಲಿಸಿತು. ಅದಕ್ಕಿಂತ ಹಿಂದೆ ನನ್ನ ವಿಷ್ಣು ಸ್ನೇಹ ಚಲನಚಿತ್ರಕ್ಕಿಂತಲೂ ಹಿಂದೆ ಹೈಸ್ಕೂಲ್ ನ ಗೆಳೆತನ ಬೆಳೆಯಿತು, ಸೆಳೆಯಿತು' ಎಂದು ನೆನಪು ಹಂಚಿಕೊಂಡರು.

'ವಿಷ್ಣು ಅಭಿನಯಿಸಿದ ಸಾಕಷ್ಟು ಚಿತ್ರದಲ್ಲಿ ನನಗೆ ಒಂದು ಪಾತ್ರಗಳು ಇದ್ದೆ ಇತ್ತು. ಅವರ ಜೊತೆ ಹೆಚ್ಚು ಅಭಿನಯಿಸಿದ್ದಕ್ಕೆ ಈ ಪ್ರಶಸ್ತಿ ಬಂದಿದೆ ಅಂತ ನನ್ನ ಅನಿಸಿಕೆ. ನನ್ನ ಜೀವನ ಇಂದು ಸಾರ್ಥಕವಾಯಿತು. ನನ್ನ ಹೃದಯ ತುಂಬಿ ಬಂದಿದೆ. ಈಗಲೂ ಶೂಟಿಂಗ್ ಹೋದರೆ ವಿಷ್ಣುವಿನ ನೆನಪು ದಿನಾಲೂ ಕಾಡುತ್ತದೆ' ಎಂದರು.
'ಅವರಿಂದ ನನಗೂ ಬಹಳ ಅಭಿಮಾನಿಗಳೂ ಈ ವಿಶಾಲ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇದ್ದಾರೇ. ಇದು ಯಾವ ಜನ್ಮದ ಪುಣ್ಯ. ಅವರ ಸಂಪರ್ಕದಿಂದ ಸ್ವರ್ಗಕ್ಕೆ ಈ ಬೇರು ಹೋಗುವ ಯೋಗ ರಾಜಯೋಗ ಸಿಕ್ಕಿದೆ. ಆದರೆ, ಸ್ಮಾರಕ ವಿಷಯದಲ್ಲಿ ದಶಕ ಕಳೆದರು ಆಗಲಿಲ್ಲ ಎಂಬ ವಿಷಾದವಿದೆ. ಅವರು ಇದ್ದಾಗಲೇ ಯಾವ ಸನ್ಮಾನ ಬಿರುದು ಹಿಂದೆ ಹೋದವರಲ್ಲ. ಅವರು ಹೋಗಿ ಇಷ್ಟೂ ವರ್ಷವಾದರೂ ಇಷ್ಟೊಂದು ಜನ ಸೇರಿರುವುದು, ವಿಷ್ಣು ಸೇನೆಯ ಶಕ್ತಿಯನ್ನ ಸೂರ್ಯಚಂದ್ರ ಇರುವವರೆಗೂ ಶಾಶ್ವತ ಎಂದು ಅಭಿಪ್ರಾಯ ಪಟ್ಟರು.

ಕಳೆದ ಐದು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನ ನೀಡುತ್ತಿದ್ದು, ಮೊದಲ ವರ್ಷ ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನಂತರ ರೆಬಲ್ ಸ್ಟಾರ್ ಡಾ.ಅಂಬರೀಶ್, ಹಿರಿಯ ನಟಿ ಲೀಲಾವತಿ ಹಾಗೂ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ವಿಷ್ಣುವರ್ಧನ್ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಹಿರಿಯ ನಟ ರಮೇಶ್ ಭಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.


Click it and Unblock the Notifications











