For Quick Alerts
  ALLOW NOTIFICATIONS  
  For Daily Alerts

  ಅಂತೂ ಕನ್ನಡಕ್ಕೆ ಕಾಲಿಟ್ಟರು ನಟ ರಾಣಾ ದಗ್ಗುಬಾಟಿ

  By Naveen
  |
  ಕನ್ನಡಕ್ಕೆ ಬಂದ ತೆಲುಗಿನ ಫೇಮಸ್ ನಟ..! | Filmibeat Kannada

  ನಟ ರಾಣಾ ದಗ್ಗುಬಾಟಿ ಸೌತ್ ಸಿನಿರಂಗದ ಸ್ಟಾರ್ ನಟ. 'ಬಾಹುಬಲಿ' ಸಿನಿಮಾದ ನಂತರವಂತೂ ರಾಣಾ ಇಡೀ ಭಾರತದಲ್ಲಿ ಹೆಸರು ಮಾಡಿದರು. ಇಂತಹ ನಟ ಈಗ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.

  ಮತ್ತೊಂದು ಸ್ಪೋಟಕ ಕಥೆಯೊಂದಿಗೆ ಬಂದ 'ಅಟ್ಟಹಾಸ'ದ ನಿರ್ದೇಶಕಮತ್ತೊಂದು ಸ್ಪೋಟಕ ಕಥೆಯೊಂದಿಗೆ ಬಂದ 'ಅಟ್ಟಹಾಸ'ದ ನಿರ್ದೇಶಕ

  ರಾಣಾ ಕನ್ನಡ ಸಿನಿಮಾ ಮಾಡುತ್ತಿದ್ದಾರೆ ಎಂದಾಗಲೇ ಅದು ಯಾವ ಚಿತ್ರ ಎಂಬ ಕುತೂಹಲ ಮೂಡುತ್ತದೆ. ಅಂತಹ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಹೊಸ ಸಿನಿಮಾದಲ್ಲಿ ರಾಣಾ ನಾಯಕನಾಗಿದ್ದಾರೆ. ಎಂ ಆರ್ ರಮೇಶ್ ಅವರ ಕಥೆಯನ್ನು ಇಷ್ಟ ಪಟ್ಟಿರುವ ರಾಣಾ ಚಿತ್ರದಲ್ಲಿ ನಟಿಸಲು ಓಕೆ ಹೇಳಿದ್ದಾರೆ.

  ಸಾಮಾನ್ಯವಾಗಿ ಎ ಎಂ ಆರ್ ರಮೇಶ್ ಅಂತ ಹೇಳಿದ ತಕ್ಷಣ ಅವರ ರಿಯಲ್ ಕಥೆಯ ಸಿನಿಮಾಗಳು ಕಣ್ಣು ಮುಂದೆ ಬರುತ್ತದೆ. 'ಸೈನೈಡ್', 'ಅಟ್ಟಹಾಸ' ಸೇರಿದಂತೆ ಈ ಹಿಂದೆ ಅನೇಕ ನೈಜ ಕಥೆಯ ಸಿನಿಮಾ ಮಾಡಿದ್ದ ಅವರು ಈಗ ಮತ್ತೆ ಅದನ್ನು ಮುಂದುವರೆಸಿದ್ದಾರೆ. ಈ ಬಾರಿ ಎಲ್ ಟಿ ಟಿ ಉಗ್ರ ಸಂಘಟನೆಯ ಬಗ್ಗೆ ಎ ಎಂ ಆರ್ ಸಿನಿಮಾ ಮಾಡಲಿದ್ದಾರೆ.

  ಅಂದಹಾಗೆ, ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಈ ಹೊಸ ಸಿನಿಮಾ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಪ್ರಾರಂಭ ಆಗಲಿದೆ.

  English summary
  Tollywood actor Rana Daggubati making his sandalwood debut under AMR Ramesh direction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X