'ಹೆಬ್ಬುಲಿ'ಯಲ್ಲಿ ಸುದೀಪ್ ಗೆ ಎದುರಾಗಲಿರುವ ವಿಲನ್ ಇವರೇ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ 'ಗಜಕೇಸರಿ' ಕೃಷ್ಣ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಹೆಬ್ಬುಲಿ' ಸಿನಿಮಾ ಸದ್ಯಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ.
ಈ ಮೊದಲು ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಈ ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಖಚಿತವಾದ ಬೆನ್ನಲ್ಲೇ ಇದೀಗ ಸುದೀಪ್ ಅವರಿಗೆ ಎದುರಾಗಿ ಖಳನಾಯಕನಾಗಿ ಪರಭಾಷಾ ನಟ ರವಿ ಕಿಶನ್ ಅವರು ಮಿಂಚಲಿದ್ದಾರೆ ಅಂತ ಸುದ್ದಿಯಾಗಿದೆ.['ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?]

ಹೌದು ಹಿಂದಿ ಹಾಗೂ ಭೋಜ್ ಪುರಿ ಖ್ಯಾತಿಯ ನಟ ರವಿ ಕಿಶನ್ ಅವರು 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ಎದುರಾಳಿಯಾಗಿ ಖಳನಟನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸುದ್ದಿಯನ್ನು ಖುದ್ದು ಎಸ್.ಕೃಷ್ಣ ಅವರೇ ಬಹಿರಂಗಪಡಿಸಿದ್ದಾರೆ.
ಈ ಮೊದಲು ನಟ ರವಿ ಕಿಶನ್ ಅವರು ರವಿತೇಜಾ ಅವರ 'ಕಿಕ್ 2' ಮತ್ತು ಅಲ್ಲು ಅರ್ಜುನ್ ಅವರ ತೆಲುಗು ಸಿನಿಮಾ 'ರೇಸ್ ಗುರ್ರಂ' ನಲ್ಲಿ ಖಳ ನಟನಾಗಿ ಮಿಂಚಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.[ಕಿಚ್ಚ ಸುದೀಪ್ ರ 'ಹೆಬ್ಬುಲಿ'ಗೆ ನಾಯಕಿ ಇವರೇನಾ?]
ಈ ಹಿಂದೆ 'ಹೆಬ್ಬುಲಿ' ಚಿತ್ರಕ್ಕೆ ಸಂಪತ್ ರಾಜ್ ಅವರು ಇನ್ನೋರ್ವ ಖಳನಟನಾಗಿ ಆಯ್ಕೆಯಾಗಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರ ಜಾಗಕ್ಕೆ ಇದೀಗ ಭೋಜ್ ಪುರಿ ನಟ ರವಿ ಕಿಶನ್ ಅವರು ಎಂಟ್ರಿಯಾಗಿದ್ದಾರೆ.
ಹಲವಾರು ಹಿಂದಿ ಸಿನಿಮಾ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ಖಳ ನಟನಾಗಿ ಖ್ಯಾತಿ ಪಡೆದಿರುವ ರವಿ ಕಿಶನ್ ಅವರು ಇದೀಗ 'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.[ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್]
ಇನ್ನುಳಿದಂತೆ 'ಹೆಬ್ಬುಲಿ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರವಿ ಶಂಕರ್, ತಮಿಳು-ತೆಲುಗು ಖ್ಯಾತಿಯ ಖಳನಟ ಕಬೀರ್ ದುಹಾನ್ ಸಿಂಗ್ ಮತ್ತು ಕಾಮಿಡಿ ನಟ ಚಿಕ್ಕಣ್ಣ ಅವರು ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಸ್.ವಿ ಪ್ರೊಡಕ್ಷನ್ಸ್ ಮತ್ತು ಉಮಾಪತಿ ಫಿಲ್ಮ್ ಸಹಯೋಗದಲ್ಲಿ ತಯಾರಾಗುತ್ತಿರುವ 'ಹೆಬ್ಬುಲಿ' ಸಿನಿಮಾ ಮೇ 1 ರಂದು ಅದ್ದೂರಿಯಾಗಿ ಸೆಟ್ಟೇರಲಿದೆ.
ಭೋಜ್ ಪುರಿ ಖ್ಯಾತಿಯ ನಟ ರವಿ ಕಿಶನ್
ಬಹುಭಾಷಾ ನಟ ಸಂಪತ್ ರಾಜ್
ಭೋಜ್ ಪುರಿ ಖ್ಯಾತಿಯ ನಟ ರವಿ ಕಿಶನ್
ಭೋಜ್ ಪುರಿ ಖ್ಯಾತಿಯ ನಟ ರವಿ ಕಿಶನ್
-ದಕ್ಷಿಣ ಭಾರತದ ನಟಿ ಅಮಲಾ ಪೌಲ್
-ದಕ್ಷಿಣ ಭಾರತದ ನಟ ಕಬೀರ್ ದುಹಾನ್ ಸಿಂಗ್
ದಕ್ಷಿಣ ಭಾರತದ ನಟ ಕಬೀರ್ ದುಹಾನ್ ಸಿಂಗ್
-ಬಹುಭಾಷಾ ನಟ ಸಂಪತ್ ರಾಜ್


Click it and Unblock the Notifications











