ಇದೇ ವರ್ಷ ಚಿತ್ರರಂಗದಲ್ಲಿ ಸದ್ದು ಮಾಡಲಿದ್ದಾನೆ ಆರುಮುಘ ಪುತ್ರ!
Recommended Video

ನಟ ರವಿಶಂಕರ್ ಈಗಾಗಲೇ ಕನ್ನಡದಲ್ಲಿ 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಆಫ್ ಸೆಂಚುರಿ ಬಾರಿಸಿದ ನಂತರ ಈಗ ಜೂನಿಯರ್ ಆರುಮುಘ ಅಂದರೆ ರವಿಶಂಕರ್ ಅವರ ಪುತ್ರ ಸಿನಿಮಾರಂಗಕ್ಕೆ ಕಾಲಿಡುವ ಸಮಯ ಬಂದಿದೆ.
ವರ್ಷಗಳಿಂದ ರವಿಶಂಕರ್ ಪುತ್ರ ಅದ್ವೆಯ್ ಪುದಿಪೆಡ್ಡಿ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಇದೇ ವರ್ಷವೇ ತಮ್ಮ ಮಗನನ್ನು ಲಾಂಚ್ ಮಾಡುವುದಾಗಿ ರವಿಶಂಕರ್ ಹೇಳಿದ್ದಾರೆ. ವಿಶೇಷ ಅಂದರೆ ರವಿಶಂಕರ್ ತಮ್ಮ ಮಗನಿಗೆ ತಾವೇ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಬಳಿಕ ಅವರು ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ. 'ದುರ್ಗಿ' ರವಿಶಂಕರ್ ಕಡೆಯದಾಗಿ ನಿರ್ದೇಶಕ ಮಾಡಿದ್ದ ಸಿನಿಮಾ.
ಕನ್ನಡ ಮತ್ತು ತೆಲುಗು ಎರಡು ಚಿತ್ರರಂಗವೂ ರವಿಶಂಕರ್ ಅವರಿಗೆ ಪರಿಚಿತ ಇದೆ. ಹೀಗಿದ್ದರು ತಮ್ಮ ಪ್ರತಿಭೆಗೆ ಸರಿಯಾದ ಬೆಲೆ ಸಿಕ್ಕ ಕನ್ನಡ ಚಿತ್ರರಂಗದಲ್ಲಿಯೇ ಮಗನನ್ನು ಪರಿಚಯ ಮಾಡುವ ನಿರ್ಧಾರ ಮಾಡಿದ್ದಾರೆ. ಅದ್ವೆಯ್ ಪುದಿಪೆಡ್ಡಿ ನ್ಯೂಯಾರ್ಕ್ ನ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟ್ ಟ್ಯೂಟ್ ನಲ್ಲಿ ಒಂದು ವರ್ಷದ ಕೋರ್ಸ್ ಮುಗಿಸಿಕೊಂಡು ಬಂದಿದ್ದಾರೆ. ಒಬ್ಬ ಹೀರೋಗೆ ಬೇಕಾದ ಎಲ್ಲ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಅಂದಹಾಗೆ, ರವಿಶಂಕರ್ ಸದ್ಯ ತಮ್ಮ ಸಿನಿಮಾದ ನಟನೆ ಜೊತೆ ಜೊತೆಗೆ ಮಗನ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿ ಇದ್ದಾರೆ. ಅದಷ್ಟು ಬೇಗ ಕಥೆ, ಚಿತ್ರಕಥೆ ಮುಗಿಸಿ ಮಗನ ಸಿನಿಮಾ ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಸದ್ಯ ರವಿಶಂಕರ್ ದರ್ಶನ್ ಅವರ 'ಯಜಮಾನ' ಮತ್ತು 'ಅಯೋಗ್ಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











