ಅಪ್ಪುಗಾಗಿ ನನ್ನ ಅಮ್ಮನ ಪ್ರಾಣ ಕೇಳುತ್ತಿದ್ದೆ: ರವಿಚಂದ್ರನ್; ಅಪ್ಪು ಯಾವತ್ತು ಕಿಂಗ್: ಶಿವರಾಜ್‌ಕುಮಾರ್!

ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ದಿವಂಗತರಾಗಿ ತಿಂಗಳುಗಳು ಕಳೆಯುತ್ತಿದೆ. ಆದರೆ ಎಷ್ಟೇ ದಿನಗಳು ಕಳೆದರು ಕೂಡ ಅಪ್ಪು ಇಲ್ಲ ಎನ್ನುವ ಆ ನೋವು ಮಾತ್ರ ಕರಗುತ್ತಿಲ್ಲ. ಅಪ್ಪು ಎಷ್ಟು ಹೇಳಿದರು ಅದಕ್ಕೆ ಕೊನೆಯೆ ಇಲ್ಲ. ಕರುನಾಡಿನಲ್ಲಿ, ಅಪ್ಪು ಜಪ ನಿರಂತರವಾಗಿ ಸಾಗಿದೆ.

Recommended Video

ಖಾಸಗೀ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮತ್ತು ಶಿವರಾಜ್‍ಕುಮಾರ್ ಭಾಗಿಯಾಗಿ ಅಪ್ಪು ಬಗ್ಗೆ ಮಾತನಾಡಿದ್ದಾರೆ

ನಟ ಶಿವರಾಜ್‌ ಕುಮಾರ್, ಕ್ರೇಜಿಸ್ಟಾರ್‌ ರವಿಚಂದ್ರನ್ ಇಲ್ಲಿ ತನಕ ಅಪ್ಪು ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ವಯಸ್ಸಿನಲ್ಲಿ ಇವರು ದೊಡ್ಡವರಾದರು ಕೂಡ ಅಪ್ಪು ಅವರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾರೆ ಮತ್ತು ಅವರೂ ಆ ಕಾರ್ಯಕ್ಕೆ ಮುಂದಾಗಿದ್ದಾರೆ.

ನಟ ಶಿವರಾಜ್‌ಕುಮಾರ್ ಮತ್ತು ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಮತ್ತೆ ಅಪ್ಪು ಬಗ್ಗೆ ಮಾತಾಡಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಅವರು ಮತ್ತೊಮ್ಮೆ ಅಪ್ಪು ಬಗ್ಗೆ ಮಾನಾಡಿ ದುಖಃ ತಪ್ತರಾಗಿದ್ದಾರೆ. ಅದರಲ್ಲಿ ಇವರು ಮಾತುಗಳು ಕರಳು ಹಿಂಡುವಂತಿದೆ.

ಅಪ್ಪು ಬಗ್ಗೆ ಮಾತನಾಡಿ ಕ್ರೇಜಿಸ್ಟಾರ್‌ ಭಾವುಕ!

ಅಪ್ಪು ಬಗ್ಗೆ ಮಾತನಾಡಿ ಕ್ರೇಜಿಸ್ಟಾರ್‌ ಭಾವುಕ!

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿ ನಟ ರವಿಚಂದ್ರನ್‌ ವಿಶೇಷವಾದ ಹಾಡೊಂದನ್ನು ಮಾಡಿದ್ದಾರೆ. ಅವರೇ ಪ್ರೀತಿಯಿಂದ ಬರೆದ ಹಾಡಿದು. ಹೇ ನಗುವ ಹೂವೆ ಎನ್ನುವ ಹಾಡನ್ನು ನಟ ರವಿಚಂದ್ರನ್‌ ವೇದಿಕೆ ಮೇಲೆ ಹಾಡಿದರು. ಅಷ್ಟೇ ಅಲ್ಲ ಅಪ್ಪು ಸದಾ ಅವರ ಹೃಯದ ಬಳಿಯೇ ಪ್ರೀತಿಯ ಅಪ್ಪುಗೆ ನೀಡುತ್ತಿದ್ದರು ಎನ್ನುವುದನ್ನು ಅವರು ಹೇಳಿ ಕೊಂಡಿದ್ದಾರೆ. ರವಿಚಂದ್ರನ್ ಮತ್ತು ರಾಜ್‌ಕುಮಾರ್‌ ಕುಟುಂಬಕ್ಕೆ ಅವಿನಾಭಾವ ಸಂಬಂಧ. ಹಾಗಾಗಿ ಅವರು ಅಪ್ಪು ಅವರನ್ನು ಕಿರಿಯ ವಯಸ್ಸಿನಿಂದ ನೋಡಿಕೊಂಡು ಬಂದಿದ್ದಾರೆ.

ಅಪ್ಪುಗಾಗಿ ಅಮ್ಮನಿಗೆ ಜೀವ ಕೊಡು ಅಂತಿದ್ದೆ: ನಟ ರವಿಚಂದ್ರನ್!

ಅಪ್ಪುಗಾಗಿ ಅಮ್ಮನಿಗೆ ಜೀವ ಕೊಡು ಅಂತಿದ್ದೆ: ನಟ ರವಿಚಂದ್ರನ್!

ಸದ್ಯ ಅಪ್ಪು ಅವರು ಹೇಳಿದ ಒಂದು ಮಾತು ಎಂಥವರಿಗೂ ಕರುಳು ಹಿಂಡುವಂತೆ ಮಾಡುತ್ತದೆ. ಅಂದು ಅಪ್ಪು ಆಸ್ಪತ್ರೆಯಲ್ಲಿ ಇದ್ದಾಗ ರವಿಚಂದ್ರನ್‌ ಅವರ ಮನಃಸ್ಥಿತಿ ಸರಿ ಇರಲಿಲ್ಲವಂತೆ. ಅವರ ತಾಯಿ ಅವರು ಕೂಡ ಅಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಅಪ್ಪು ಏನಾದರು ರವಿಚಂದ್ರನ್‌ ಅಪ್ಪು ಇದ್ದಿದ್ದರೆ ಅಮ್ಮನ ಬಳಿ ಪ್ರಾಣ ಕೊಡು ಎಂದು ಹೇಳುತ್ತಿದೆ ಎಂದಿದ್ದಾರೆ. "ಅಂದು ಅಪ್ಪು ಐಸಿಯುನಲ್ಲಿ ಇದ್ದಿದ್ದರೆ, ಚಿಕಿತ್ಸೆ ಪಡೆದುಕೊಳ್ಳುತ್ತಾ ಇದ್ದಿದ್ದರೆ, ನಾನು ಅಮ್ಮನ ಬಳಿ ನಿಮ್ಮ ಪ್ರಾಣ ಅಪ್ಪುಗೆ ಕೊಟ್ಟು ಹೋಗು ನೀನು ಬದುಕಿದ್ದು ಸಾಕು, ಅವನು ಇನ್ನು ಹುಡುಗ ಬದುಕಲಿ ಎನ್ನುತ್ತಿದೆ" ಎಂದು ಹೇಳಿ ಭಾವುಕ ನುಡಿಗಳನ್ನು ರವಿಚಂದ್ರನ್ ಮಾಡನಾಡಿದರು.

ನನ್ನ ತಮ್ಮ ಯಾವತ್ತಿದ್ದರೂ ರಾಜಕುಮಾರ: ನಟ ಶಿವರಾಜ್‌ಕುಮಾರ್‌!

ನನ್ನ ತಮ್ಮ ಯಾವತ್ತಿದ್ದರೂ ರಾಜಕುಮಾರ: ನಟ ಶಿವರಾಜ್‌ಕುಮಾರ್‌!

ಅಪ್ಪು ಕಾರ್ಯಕ್ರಮ ಅಂದರೆ ಅಲ್ಲಿ ಮನೆಯವರು ಇರುತ್ತಾರೆ. ದುಖಃ ಆದರೂ, ಮಾತನಾಡಲು ನೋವು ಆದರೂ ಕೂಡ ಅವರು ಅಪ್ಪು ಕಾರ್ಯಕ್ರಮದಲ್ಲಿ ಗಟ್ಟಿ ಮನಸಿನಿಂದ ಪಾಲ್ಗೊಳ್ಳುತ್ತಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಭಾಗಿ ಆಗಿದ್ದರು. ವೇದಿಕೆ ಬೇಕೆ 'ಬಾನಾ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡು ಹಾಡಿ ಅಪ್ಪು ಬಗ್ಗೆ ಮಾತನಾಡಿದರು.

''ನನ್ನ ತಮ್ಮ ಯಾವತ್ತಿದ್ದರು ಕಿಂಗ್, ಅವನನ್ನು ಸದಾ ರಾಜನಂತೆ ರಾಯಲ್‌ ಆಗಿ ನೋಡಲು ನಾನು ಬಯಸುತ್ತೇನೆ. ಅವನ ಸ್ಟೈಲ್‌ ಹಾಗೇ ಇತ್ತು. ಯಾರೇ ಬರಲಿ ನಾನೇ ರಾಜ ಎನ್ನುವಂತೆ ಇತ್ತು. ಅವನು ನಡೆದು ಬಂದರೆ ರಾಜನ ಕಳೆ ಇರುತ್ತಿತ್ತು". ಎಂದು ಅಪ್ಪು ಬಗ್ಗೆ ಮನ ಬಿಚ್ಚಿ ಮಾತನಾಡಿ ಕಣ್ಣೀರು ಹಾಕಿದರು ಶಿವಣ್ಣ.

ಅಪ್ಪುಗೆ ಪವರ್ ಸ್ಟಾರ್‌ ಬಿರುದು ನೀಡಿದ್ದೇಕೆ ಶಿವಣ್ಣ!

ಅಪ್ಪುಗೆ ಪವರ್ ಸ್ಟಾರ್‌ ಬಿರುದು ನೀಡಿದ್ದೇಕೆ ಶಿವಣ್ಣ!

ಇನ್ನೂ ಪುನೀತ್ ರಾಜ್‌ಕುಮಾರ್‌ ಅವರಿಗೆ ಪವರ್‌ ಸ್ಟಾರ್‌ ಎನ್ನುವ ಬಿರುದು ನೀಡಿರುವ ಬಗ್ಗೆ ಶಿವರಾಜ್‌ಕುಮಾರ್‌ ಮಾತನಾಡಿದರು. "ಅಪ್ಪು ಅಭಿನಯದಲ್ಲಿ ಒಂದು ಪವರ್‌ ಇದೆ. ಅವನ ಫೈಟಿಂಗ್, ಡ್ಯಾನ್ಸ್, ಅಭಿನಯದಲ್ಲಿ ಏನೋ ಒಂದು ಪವರ್‌ ಕಾಣುತ್ತೆ. ಅರಸು ಸಿನಿಮಾ ನೋಡಿದರೆ ಗೊತ್ತಾಗುತ್ತೆ. ಪವರ್‌ ಅಂದ್ರೆ ಅದು, ಅಭಿನಯದ ಅಂದ್ರೆ ಅದು". ಎಂದು ಶಿವರಾಜ್‌ಕುಮಾರ್‌ ಮಾತನಾಡಿದರು.

More from Filmibeat

English summary
Actor Ravichandran And Shivarajkumar Become Emotional About Puneeth Rajkumar In A Programme
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X