"ಕೆಜಿಎಫ್ ದಾಖಲೆ ಮಾಡಲು ಫೌಂಡೇಷನ್ ಹಾಕಿದ್ದು ನಾನೇ"- ರವಿಚಂದ್ರನ್

'ಕೆಜಿಎಫ್ ‌2' ಕನ್ನಡ ಚಿತ್ರರಂಗದ ‌ಪಾಲಿಗೆ ದೊಡ್ಡ ಇತಿಹಾಸವನ್ನು ಸೃಷ್ಟಿ ಮಾಡಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರ ರಿಲೀಸ್ ಆಗಿ ವಾರಗಳು ಉರುಳಿದರು ದಾಖಲೆ ಮುಂದುವರೆದಿದೆ. ಹಲವು ಪ್ರಥಮಗಳಿಗೆ 'ಕೆಜಿಎಫ್' ಮತ್ತು 'ಕೆಜಿಎಫ್ 2' ಸಾಕ್ಷಿ ಆಗಿವೆ.

ಈಗ ಈ‌ ಚಿತ್ರದ ಬಗ್ಗೆ ನಟ ರವಿಚಂದ್ರನ್ ಮಾತನಾಡಿದ್ದಾರೆ. 'ಕೆಜಿಎಫ್ 2' ದಾಖಲೆ ಮಾಡಿದೆ. ಆದರೆ ಈ ದಾಖಲೆಗೆ ಬುನಾದಿ ಹಾಕಿದ್ದು ನಾನೇ ಎಂದು ಕಾರ್ಯಕ್ರಮ ಒಂದರಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಈ ಹಿಂದೆ ರವಿಚಂದ್ರನ್ ಹಾಕಿಕೊಟ್ಟ ಮಾರ್ಗದಲ್ಲಿಯೇ ಈಗ ಪ್ಯಾನ್ ಇಂಡಿಯಾ ಚಿತ್ರಗಳು ಬರುತ್ತಿದ್ದು, ಸಕ್ಸಸ್ ಕಾಣುತ್ತಿವೆ.

ಕೆಜಿಎಫ್ 2 ಚಿತ್ರಕ್ಕೂ ರವಿಚಂದ್ರನ್‌ಗೂ ಏನಪ್ಪಾ ಸಂಬಂಧ? 'ಕೆಜಿಎಫ್' ಪ್ಯಾನ್ ಇಂಡಿಯಾ ಸಿನಿಮಾ ಆಗಲು ಕ್ರೇಜಿಸ್ಟಾರ್ ಕಾರಣ ಹೇಗೆ? ಎಂದು ಅಚ್ಚರಿ ಪಡಬೇಕಾಗಿಲ್ಲ. ಯಾಕೆಂದರೆ ಅದು ಹೇಗೆ ಎನ್ನುವುದನ್ನು ಕೂಡ ರವಿಚಂದ್ರನ್ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ರವಿಚಂದ್ರನ್ 'ಕೆಜಿಎಫ್' ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ..

'ಕೆಜಿಎಫ್' ಚಿತ್ರಕ್ಕೆ ಬುನಾದಿ ಹಾಕಿದ್ದು ರವಿಚಂದ್ರನ್!

'ಕೆಜಿಎಫ್' ಚಿತ್ರಕ್ಕೆ ಬುನಾದಿ ಹಾಕಿದ್ದು ರವಿಚಂದ್ರನ್!

ನಟ ರವಿಚಂದ್ರನ್ ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ 'ಕೆಜಿಎಫ್ 2' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ಬುನಾದಿ ಹಾಕಿದ್ದು ನಾನೆ ಎಂದು ಹೇಳಿದ್ದಾರೆ. "ಎಲ್ಲಾ ಸೇರಿಕೊಂಡರೆ ಎನಾದರೂ ಮಾಡೋಕೆ ಸಾಧ್ಯ. 'ಕೆಜಿಎಫ್' ದಾಖಲೆ ಬಗ್ಗೆ ಮಾತಾಡುತ್ತೀವಿ. 'ಕೆಜಿಎಫ್' ದಾಖಲೆ ಆಗಿರಬಹುದು ಫೌಂಡೆಷನ್ ಯಾರು ಹಾಕಿದ್ದು?, ನಾನೇ ಹಾಕಿದ್ದು ಫೌಂಡೇಷನ್. 'ಶಾಂತಿ ಕ್ರಾಂತಿ' ಫೌಂಡೇಷನ್ ಆಯ್ತು. 40 ವರ್ಷ ಸಮಯ ಬೇಕಾಯ್ತು ಈ ರೆಕಾರ್ಡ್ ಆಗಲು." ಎಂದಿದ್ದಾರೆ.

'ಕೆಜಿಎಫ್ 2' ರೆಕಾರ್ಡ್ ಬ್ರೇಕ್ ಮಾಡಿ: ರವಿಚಂದ್ರನ್!

'ಕೆಜಿಎಫ್ 2' ರೆಕಾರ್ಡ್ ಬ್ರೇಕ್ ಮಾಡಿ: ರವಿಚಂದ್ರನ್!

ಇನ್ನು 'ಕೆಜಿಎಫ್' ರೆಕಾರ್ಡ್ ಬಗ್ಗೆ ಮಾತನಾಡಿದ ರವಿಚಂದ್ರನ್ ಈ ರೆಕಾರ್ಡ್ ಬ್ರೇಕ್ ಮಾಡಬೇಕು ಎಂದಿದ್ದಾರೆ. " ಇವಾಗ ಎಲ್ಲರಿಗೂ 'ಕೆಜಿಎಫ್' ದಾಖಲೆ ಮುರಿಯಬೇಕು ಎನ್ನುವುದೇ ಗುರಿಯಾಗಿರಬೇಕು. ಚಿತ್ರರಂಗದ ಎಲ್ಲರೂ ಕೂತು ಈ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ಹಳ್ಳಿಯಲ್ಲಿ 'ಕೆಜಿಎಫ್' ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಾ ಇದೆ". ಈ ಹಿಂದೆ 88ರಲ್ಲಿ ಫಿಲ್ಮ್ ಚೇಂಬರ್‌ನಲ್ಲಿ ಒಂದು ಗಲಾಟೆ ನಡೆಯುತ್ತೆ. ಹೆಚ್ಚು ಖರ್ಚು ಮಾಡಿದ ಚಿತ್ರಕ್ಕೂ, ಬೇರೆ ಚಿತ್ರಕ್ಕೂ ಒಂದೇ ರೀತಿಯ ರೇಟ್ ಆಫ್ ಅಡ್ಮಿಷನ್ ಇದೆ. ನನ್ನ ಚಿತ್ರಕ್ಕೆ ಜಾಸ್ತಿ ಮಾಡಿ ಅಂತ ಕೇಳಿದಾಗ ಅದು ಸಾಧ್ಯ ಆಗಲಿಲ್ಲ. ಈಗ 'ಕೆಜಿಎಫ್' ಅದನ್ನು ಸಾಧ್ಯ ಮಾಡಿದೆ." ಎಂದಿದ್ದಾರೆ.

1991ರಲ್ಲೇ ಕ್ರೇಜಿಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾ

1991ರಲ್ಲೇ ಕ್ರೇಜಿಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾ

ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿರುವ 'ಶಾಂತಿ ಕ್ರಾಂತಿ' ಚಿತ್ರ 1991ರಲ್ಲಿ ರಿಲೀಸ್ ಆಯ್ತು. ಈ ಚಿತ್ರವನ್ನು ಒಂದೆ ಬಾರಿಗೆ ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಶೂಟ್ ಮಾಡಿ ರಿಲೀಸ್ ಮಾಡಲಾಯಿತು. ಅತ್ಯಂತ ದುಬಾರಿ ಮೊತ್ತದಲ್ಲಿ ಚಿತ್ರವನ್ನು ರವಿಚಂದ್ರನ್ ನಿರ್ಮಾಣ ಮಾಡಿದರು. ಆದರೆ ಅಂದುಕೊಂಡ ಮಟ್ಟಿಗೆ ಲಾಭ ಬರಲಿಲ್ಲ. ಗಳಿಕೆ ಬಿಟ್ಟು ನೋಡಿದರೆ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಒಂದು ಇತಿಹಾಸವೇ ಆಗಿ ಉಳಿದು ಬಿಟ್ಟಿದೆ.

ಮುಂದುವರೆದ 'ಕೆಜಿಎಫ್' ದಾಖಲೆ!

ಮುಂದುವರೆದ 'ಕೆಜಿಎಫ್' ದಾಖಲೆ!

'ಕೆಜಿಎಫ್ 2' ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗಿದೆ. ವಿಶ್ವದಾದ್ಯಂತ ಚಿತ್ರದ ದಾಖಲೆ ಇನ್ನೂ ಕೂಡ ಮುಂದುವರೆದಿದೆ. ಕಲೆಕ್ಷನ್ ವಿಚಾರದಲ್ಲಿ 'ಕೆಜಿಎಫ್ 2' ಇನ್ನೂ ಸದ್ದು ಮಾಡುತ್ತಲೇ ಇದೆ. 18ನೇ ದಿನ ವರ್ಲ್ಡ್ ವೈಡ್ ಕಲೆಕ್ಷನ್ ಸುಮಾರು 32 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಇನ್ನು ಒಟ್ಟಾರೆ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.

More from Filmibeat

English summary
Actor Ravichandran Says He Put The Foundation For KGF 2 Record,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X