ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್ ಎರಡನೆ ಪುತ್ರ
Recommended Video
ಕ್ರೇಜಿ ಸ್ಟಾರ್ ರವಿಚಂದ್ರನ್ ಸದ್ಯ ಮಗಳ ಮದುವೆ ಮಾಡಿ ನಿರಾಳರಾಗಿದ್ದಾರೆ. ಅನೇಕ ತಿಂಗಳಿಂದ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದ ರವಿಮಾಮ ಈಗ, ಎರಡನೇ ಮಗನ ಸಿನಿಮಾ ಪಯಣ ಕಡೆ ಗಮನ ಹರಿಸಿದ್ದಾರೆ.
ಮೊದಲ ಮಗನನ್ನು ಈಗಾಗಲೆ ಚಿತ್ರರಂಗಕ್ಕೆ ಪರಿಚಯಿಸಿರುವ ಕನಸುಗಾರ ಎರಡನೆ ಮಗನ ಎಂಟ್ರಿಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ರವಿಚಂದ್ರನ್ ಎರಡನೆ ಮಗ ವಿಕ್ರಮ್ ಸಿನಿಮಾ ಎಂಟ್ರಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಈಗಾಗಲೆ ಎರಡನೆ ಮಗ ವಿಕ್ರಮ ಅವರ ಮೊದಲ ಚಿತ್ರದ ಒಂದಿಷ್ಟು ಮಾಹಿತಿ ಬಹಿರಂಗ ಆಗಿದೆ. ಮೊದಲ ಮಗ ಮನೋರಂಜನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ವರ್ಷ ಆಗಿದೆ. ಈಗ ವಿಕ್ರಮ್ ಸರದಿ. ಹಾಗಾದ್ರೆ ವಿಕ್ರಮ್ ಚೊಚ್ಚಲ ಚಿತ್ರ ಯಾವುದು? ಯಾರು ನಿರ್ದೇಶನ ಮಾಡುತ್ತಿದ್ದಾರೆ? ಮುಂದೆ ಓದಿ..

'ತ್ರಿವಿಕ್ರಮ' ಸಿನಿಮಾ ಮೂಲಕ ಎಂಟ್ರಿ?
ವಿಕ್ರಮ್ ಮೊದಲ ಸಿನಿಮಾಗೆ 'ತ್ರಿವಿಕ್ರಮ' ಎಂದು ಟೈಟಲ್ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ನಿರ್ದೇಶಕ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ರೋಸ್' ಮತ್ತು 'ಮಾಸ್ ಲೀಡರ್' ಖ್ಯಾತಿಯ ನಿರ್ದೇಶಕ ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಮಗನ ಸಿನಿಮಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಂದ್ಹಾಗೆ ಇದೊಂದು ಪಕ್ಕಾ ಲವ್ ಸ್ಟೋರಿಯ ಸಿನಿಮಾ ಆಗಿದ್ದು ಚಿತ್ರಕ್ಕೆ 'ಹೈ ವೋಲ್ಟೇಜ್ ಲವ್ ಸ್ಟೋರಿ' ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

ಸಿನಿಮಾಗಾಗಿ ವಿಕ್ರಮ್ ತಯಾರಿ
ವಿಕ್ರಮ್ ಕಳೆದ ವರ್ಷವೆ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಾಗಿತ್ತು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿರಲ್ಲಿಲ್ಲ. ಈ ವರ್ಷ ಬರ್ತಿದ್ದಾರೆ. ಈಗಾಗಲೆ ವಿಕ್ರಮ್ ಚಿತ್ರಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅಭಿನಯ ತರಂಗದಲ್ಲಿ ಅಭಿನಯ ಕಲಿತಿದ್ದಾರೆ. ಅಲ್ಲದೆ ಸಾಹಸ ನಿರ್ದೇಶಕ ಮತ್ತು ನಿರ್ದೇಶಕ ರವಿವರ್ಮ ಅವರಿಂದ ಆಕ್ಷನ್ ಸೀಕ್ವೆನ್ಸ್, ನೃತ್ಯ ನಿರ್ದೇಶಕರಾದ ಮುರಳಿ ಮತ್ತು ಕಲೈ ಅವರಿಂದ ನೃತ್ಯ ಕೂಡ ಕಲಿತಿದ್ದಾರೆ. ಎಲ್ಲಾ ತಯಾರಿಗಳೊಂದಿದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದ ತಾಂತ್ರಿಕ ವರ್ಗ
ವಿಕ್ರಮ್ ಮೊದಲ ಚಿತ್ರಕ್ಕೆ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ರೆ , ಗೌರಿ ಎಂಟಟೈನರ್ಸ್ ಬ್ಯಾನರ್ ನಲ್ಲಿ ಸೋಮಣ್ಣ ಮತ್ತು ಸುರೇಶ್ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಂತೋಷ್ ರೈ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.

ವರಮಹಾಲಕ್ಷ್ಮೀಗೆ ಅದ್ಧೂರಿ ಮುಹೂರ್ತ
ವಿಕ್ರಮ್ ಮೊದಲ ಚಿತ್ರ ವರಮಹಾಲಕ್ಷ್ಮೀಗೆ ಸೆಟ್ಟೇರುತ್ತಿದೆ. ಮುಂದಿನ ತಿಂಗಳು ಆಗಸ್ಟ್ ನಲ್ಲಿ ಅದ್ಧೂರಿ ಕಾರ್ಯಕ್ರಮ ಕೂಡ ನಡೆಯಲಿದೆಯಂತೆ. ದೊಡ್ಡ ಸಮಾರಂಭದ ಮೂಲಕ ವಿಕ್ರಮ್ ಅವರನ್ನು ಲಾಂಚ್ ಮಾಡಲು ಪ್ಲಾನ್ ಮಾಡಿದ್ದಾರಂತೆ ರವಿಚಂದ್ರನ್.

ನಾಯಕಿ ಬೇಕಾಗಿದ್ದಾರೆ
ಸದ್ಯ ಬಹುತೇಕ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಚಿತ್ರಕ್ಕೆ ಹೊಸ ನಾಯಕಿಯೇ ಆಗಬೇಕಂತೆ. ಅದರಲ್ಲೂ ಕನ್ನಡತಿಯೆ ವಿಕ್ರಮ್ ಗೆ ಜೋಡಿಯಾಗಬೇಕಂತೆ. ಹಾಗಾಗಿ ಆಡಿಷನ್ ಕೂಡ ಕರೆದಿದ್ದಾರೆ. ನಟನೆ ಆಸಕ್ತಿ ಇರುವವರು 18 ರಿಂದ 23ರ ವಯೋಮಾನದ ಹುಡುಗಿಯರು ಭಾಗವಹಿಸಿಬಹುದ್ದಂತೆ.


Click it and Unblock the Notifications











