For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ ಸುದೀಪ್ ಮಾಡಬೇಕಿರುವ ಕೆಲಸಗಳ ಬಗ್ಗೆ ನಟ ರವಿಚಂದ್ರನ್ ಹೇಳಿದ್ದೇನು?

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಣ್ಣದ ಲೋಕದ ಪಯಣಕ್ಕೆ 25 ತುಂಬಿದೆ. ಕಿಚ್ಚನ ಬೆಳ್ಳಿಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಕೋಟಿಗೊಬ್ಬ-3 ಸಿನಿಮಾತಂಡ ಮಾರ್ಚ್ 15ರಂದು ಸುದೀಪ್ ಬೆಳ್ಳಿಹಬ್ಬದ ಸಂಭ್ರಮವನ್ನು ಹಮ್ಮಿಕೊಂಡಿತ್ತು.

  ನನ್ನ ಮಾತನ್ನು ನಡೆಸಿಕೊಡು ಸುದೀಪ್ ಎಂದ್ರು ರವಿಚಂದ್ರನ್ | Kichcha Sudeep 25years Celebration | Ravichandran

  ಕಿಚ್ಚನ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಸಿಎಂ ಯಡಿಯೂರಪ್ಪ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಸುದೀಪ್ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ಇದೇ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಸುನಿಲ್ ಕುಮಾರ್ ದೇಸಾಯಿ, ರವಿಶಂಕರ್ ಸೇರಿದಂತೆ ಇನ್ನು ಹಲವು ಗಣ್ಯರು ಹಾಜರಿದ್ದರು.

  ನಾನು ಕಪ್ಪು ಬಟ್ಟೆ ಹಾಕಲು ಕಾರಣನೇ ರವಿ ಸರ್; ಕಿಚ್ಚ ಸುದೀಪ್ನಾನು ಕಪ್ಪು ಬಟ್ಟೆ ಹಾಕಲು ಕಾರಣನೇ ರವಿ ಸರ್; ಕಿಚ್ಚ ಸುದೀಪ್

  ಈ ಸಮಯದಲ್ಲಿ ಮಾತನಾಡಿದ ಹಿರಿಯ ನಟ ರವಿಚಂದ್ರನ್, ಒಬ್ಬ ಮನುಷ್ಯ ಏನಾದರು ಸಾಧನೆ ಮಾಡಬೇಕು ಎಂದರೆ ಅವನಲ್ಲಿ ಕಿಚ್ಚು, ಹುಚ್ಚುತನ ಇರಬೇಕು. ಯಾವುದೇ ಗೆಲುವು, ಸಾಧನೆ ಇರಬಹುದು ಅದರಲ್ಲಿ ಅವಮಾನ, ಅಸಮಾಧಾನ ಇದ್ದೇ ಇರುತ್ತೆ ಎಂದಿದ್ದಾರೆ. ಮುಂದೆ ಓದಿ..

  ಸುದೀಪ್ ನಗುವಿನಲ್ಲಿ ಹಠ ಕಾಣಿಸುತ್ತಿದೆ

  ಸುದೀಪ್ ನಗುವಿನಲ್ಲಿ ಹಠ ಕಾಣಿಸುತ್ತಿದೆ

  'ಸುದೀಪ್ ನಗುವಿನಲ್ಲಿ ನನಗೆ ಹಠ ಕಾಣಿಸುತ್ತೆ, ಛಲ, ತುಂಟತನ, ಗರ್ವ, ದುರಂಕಾರ, ಅಯ್ಯೋ ನನ್ನಮಕ್ಳ ಗೆದ್ದಿದ್ದೀನಿ ನೋಡ್ರೊ ಎನ್ನುವುದು ನನಗೆ ಕಾಣಿಸುತ್ತಿದೆ' ಎಂದಿದ್ದಾರೆ. ಪ್ರೇಮಲೋಕ, ರಣಧೀರ್ ಬೆಳ್ಳಿಹಬ್ಬ ಆಚರಣೆ ಮಾಡಿದ್ದು ಇಲ್ಲೇ, ಈಗ ನನ್ನ ಹಿರಿಯ ಮಗ ಸುದೀಪ್ ಬೆಳ್ಳಿಹಬ್ಬದ ಪಯಣ ಆಚರಿಸುತ್ತಿರುವುದು ಇಲ್ಲೇ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ರು.

  ಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣದ ಬಗ್ಗೆ ಕಿಚ್ಚನ ಭಾವುಕ ಮಾತುಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣದ ಬಗ್ಗೆ ಕಿಚ್ಚನ ಭಾವುಕ ಮಾತು

  ಇನ್ಮುಂದೆ ಪರೀಕ್ಷೆ ಪ್ರಾರಂಭವಾಗುತ್ತೆ

  ಇನ್ಮುಂದೆ ಪರೀಕ್ಷೆ ಪ್ರಾರಂಭವಾಗುತ್ತೆ

  ಬೆಳೆಯೋದು ಮುಖ್ಯವಲ್ಲ, ಹೇಗೆ ಬೆಳೆದ ಎನ್ನುವುದು ಆಯ್ತು, ಇಷ್ಟು ದೂರ ಬಂದು ಆಗಿದೆ. ಆದರೆ ಇನ್ಮುಂದೆ ಪರೀಕ್ಷೆ ಪ್ರಾರಂಭವಾಗುತ್ತೆ ಎಂದು ಹೇಳುತ್ತಾ ಇನ್ಮುಂದೆ ಸುದೀಪ್ ಮಾಡಬೇಕಿರುವ ಕೆಲಸಗಳ ಪಟ್ಟಿಯನ್ನು ಕ್ರೇಜಿಸ್ಟಾರ್ ವಿವರಿಸಿದರು.

  ಸುದೀಪ್ ಮಾಡಬೇಕಿರುವ ಕೆಲಸಗಳಿವು

  ಸುದೀಪ್ ಮಾಡಬೇಕಿರುವ ಕೆಲಸಗಳಿವು

  ಸುದೀಪ್ ನನ್ನ ಮಾತನ್ನು ಯಾವತ್ತು ಇಲ್ಲ ಅಂದಿಲ್ಲ ಎನ್ನುತ್ತಾ, 'ನಿನಗೆ ಇರುವ ಸಂತೋಷವನ್ನು ಇನ್ನಷ್ಟು ಜನರಿಗೆ ಹಂಚಬೇಕು, ಯಾರೆ ಸ್ಟಾರ್ ಇದ್ದರು ಸಹ ಎರಡು ವರ್ಷಕ್ಕೆ, ವರ್ಷಕ್ಕೆ ಸಿನಿಮಾ ಮಾಡಿದರೆ ಸಾಲದು, ವರ್ಷಕ್ಕೆ 3 ಸಿನಿಮಾಗಳನ್ನು ಮಾಡಿ, ಇನ್ನೊಂದಷ್ಟು ಜನ ನಿರ್ಮಾಪಕರನ್ನು ಸೇರಿಸಿಕೊಂಡು ಅವರನ್ನು ಗೆಲ್ಲಿಸಿ, ಇನ್ನಷ್ಟು ಜನ ಬರಲಿ ಚಿತ್ರರಂಗ ಬೆಳೆಯುತ್ತೆ. ದೊಡ್ಡ ಹೀರೋಗಳು 3 ಸಿನಿಮಾಗಳನ್ನು ಮಾಡಿ, ನಿರ್ಮಾಪಕರನ್ನು ಬೆಳೆಸಿ, ಚಿತ್ರರಂಗ ಬೆಳೆಸಿ ಎಂದು ಸುದೀಪ್ ಗೆ ಹೇಳಿದ್ದಾರೆ.

  ಜಾಸ್ತಿ ಸಿನಿಮಾಗಳನ್ನು ಮಾಡಿ

  ಜಾಸ್ತಿ ಸಿನಿಮಾಗಳನ್ನು ಮಾಡಿ

  ಒಂದು ಸಿನಿಮಾ ಗೆಲ್ಲಬೇಕೆಂದರೆ 30 ದಿನದಲ್ಲೂ ಮಾಡಬಹುದು, ಮನಸ್ಸಿಟ್ಟು ಮಾಡಬೇಕು ಅಷ್ಟೆ ಎಂದರು. 'ಸುದೀಪ್‌ಗೆ ಹೇಳುವುದು ಇಷ್ಟೆ ಜಾಸ್ತಿ ಸಿನಿಮಾಗಳನ್ನು ಮಾಡಿ, ನಿನ್ನ ಜೊತೆ ಇಷ್ಟು ಜನರು ಪಯಣ ಮಾಡಲಿ, ಅವರಿಗೂ ಸುಖ, ಸಂತೋಷ ಸಿಗಲಿ' ಎಂದಿದ್ದಾರೆ. ಇನ್ಮುಂದೆಯೂ ನಿಮ್ಮ ಆಶೀರ್ವಾದ ಸುದೀಪ್ ಮೇಲಿರಲಿ ಎಂದು ರವಿಚಂದ್ರನ್, ಕಿಚ್ಚನ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ.

  English summary
  Kannada Senior Actor Ravichandran talks about Sudeep in 25 years celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X