'ಮಂಜಿನ ಹನಿ' ಸಿನಿಮಾ ಮಾಡಬೇಕು ಅಂದರೆ 50 ಕೋಟಿ ಕೊಡಿ
Recommended Video

ಕನಸುಗಾರ ರವಿಚಂದ್ರನ್ ಅವರ ಕನಸಿನ ಸಿನಿಮಾ 'ಮಂಜಿನ ಹನಿ'. ಈ ಒಂದು ಸಿನಿಮಾಗಾಗಿ ರವಿಚಂದ್ರನ್ ಅಭಿಮಾನಿಗಳು ಅದೆಷ್ಟೋ ವರ್ಷದಿಂದ ಕಾಯುತ್ತಿದ್ದಾರೆ. ಒಂದು ಕಡೆ ವರ್ಷಗಳು ಉರುಳುತ್ತಿವೆ. ಆದರೆ 'ಮಂಜಿನ ಹನಿ' ಸಿನಿಮಾ ಮಾತ್ರ ತೆರೆ ಮೇಲೆ ಬರುತ್ತಲೇ ಇಲ್ಲ.
ವಾಸ್ತವವಾಗಿ 'ಮಂಜಿನ ಹನಿ' ಚಿತ್ರ ಯಾಕೆ ಇಷ್ಟೊಂದು ತಡ ಆಗುತ್ತಿದೆ ಎಂಬ ಬಗ್ಗೆ ಇದೀಗ ನಟ ರವಿಚಂದ್ರನ್ ಅವರೇ ಮಾತನಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಮಾಧ್ಯಮಗಳ ಜೊತೆಗೆ ಸಂತಸ ಹಂಚಿಕೊಂಡ ರವಿಚಂದ್ರನ್ 'ಮಂಜಿನ ಹನಿ' ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರ ನೀಡಿದರು.
''ಮಂಜಿನ ಹನಿ ಸಿನಿಮಾ ಮಾಡಬೇಕು ಅಂದರೆ ನೀವು (ಅಭಿಮಾನಿಗಳು) 'ರಾಜೇಂದ್ರ ಪೊನ್ನಪ್ಪ' ಸಿನಿಮಾಗೆ 50 ಕೋಟಿ ಕಲೆಕ್ಷನ್ ಮಾಡಿ ಕೊಡಬೇಕು'' ಎಂದು ಹೇಳಿ ನಕ್ಕರು ರವಿಚಂದ್ರನ್.

ನಂತರ ''ನನಗೆ 'ಮಂಜಿನ ಹನಿ' ಸಿನಿಮಾ ಮಾಡಲು ದುಡ್ಡು ಬೇಕು. ಆ ಚಿತ್ರಕ್ಕೆ ಹಾಕಿರುವ 8 ಕೋಟಿ ದುಡ್ಡು ಈಗಾಗಲೇ ಹೋಗಿದೆ. ಆಗ ನಾನು ಅಂದುಕೊಂಡಿದ್ದ ಗ್ರಾಫಿಕ್ಸ್ ಇರಲಿಲ್ಲ. ಈಗ ಗ್ರಾಫಿಕ್ಸ್ ತಂತ್ರಜ್ಞಾನ ಇನ್ನಷ್ಟು ಬೆಳೆದಿದೆ. ಆ ಸಿನಿಮಾದಲ್ಲಿ 9 ಪಾತ್ರ ಮಾಡಬೇಕು ಅಂತ ಇದ್ದೆ. ಅದನ್ನು ಸರಿಯಾಗಿ ಪರದೆ ಮೇಲೆ ತರಲು ಆಗಲಿಲ್ಲ. ಸಿನಿಮಾ ಓಡುತ್ತೆ.. ಓಡಲ್ಲ.. ಎನ್ನುವ ಪ್ರಶ್ನೆ ಬೇರೆ. ಮೊದಲು ಸಿನಿಮಾ ನನಗೆ ತೃಪ್ತಿ ನೀಡಬೇಕು. ಆಗ ಮಾತ್ರ ನಾನು ಸಿನಿಮಾ ಮಾಡುತ್ತೇನೆ'' ಎಂದರು ರವಿಚಂದ್ರನ್.


Click it and Unblock the Notifications











