For Quick Alerts
    ALLOW NOTIFICATIONS  
    For Daily Alerts

    ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ ನಟ ರವಿಚಂದ್ರನ್

    |

    ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್.

    ಬೆಂಗಳೂರಿನ ಸಿ ಎಮ್ ಆರ್ ವಿಶ್ವವಿದ್ಯಾನಿಲಯ ರವಿಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ.

    ರವಿಚಂದ್ರನ್ ತಂದೆ ನೆನೆದು ಕಣ್ಣೀರು ಹಾಕಿದ ದ್ವಾರಕೀಶ್ರವಿಚಂದ್ರನ್ ತಂದೆ ನೆನೆದು ಕಣ್ಣೀರು ಹಾಕಿದ ದ್ವಾರಕೀಶ್

    ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ ರವಿಚಂದ್ರನ್ ರಿಗೆ ಸಿ ಎಮ್ ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ತಯಾರಿ ಮಾಡಿಕೊಂಡಿದೆ. ರವಿಚಂದ್ರನ್ ಆಪ್ತ ಮೂಲಗಳು ಈ ಸುದ್ದಿಯನ್ನು 'ಫಿಲ್ಮಿಬೀಟ್ ಕನ್ನಡ'ಕ್ಕೆ ಖಚಿತಪಡಿಸಿದ್ದಾರೆ.

    ನಿರ್ಮಾಪಕ ವೀರಾಸ್ವಾಮಿ ಪುತ್ರ ರವಿಚಂದ್ರನ್ 1971ರಲ್ಲಿ ಬಾಲನಟನಾಗಿ 'ಕುಲ ಗೌರವ' ಸಿನಿಮಾದಲ್ಲಿ ನಟಿಸಿದರು. ನಂತರ 1982ರಲ್ಲಿ 'ಕದೀಮ ಕಳ್ಳರು' ಸಿನಿಮಾದ ನಿರ್ಮಾಣ ಮಾಡಿ ಒಂದು ಪಾತ್ರವನ್ನು ನಿರ್ವಹಿಸಿದರು. 'ಪ್ರೇಮಲೋಕ' ಚಿತ್ರದ ಮೂಲಕ ನಿರ್ದೇಶನ ಶುರು ಮಾಡಿ, ದೊಡ್ಡ ಹಿಟ್ ನೀಡಿದರು. ಅಲ್ಲಿಂದ ಶುರುವಾದ ರವಿಚಂದ್ರನ್ ಪ್ರಯಾಣ ಇಂದಿಗೂ ಮುಂದುವರೆದಿದೆ.

    ಪಿ ವಾಸು ಡೈರೆಕ್ಟರ್ ಅಲ್ಲ: 'ಆಪ್ತಮಿತ್ರ' ನಿರ್ದೇಶಕನ ಕುರಿತು ರವಿಚಂದ್ರನ್ ಹೀಗೆ ಹೇಳಿದ್ದೇಕೆ?ಪಿ ವಾಸು ಡೈರೆಕ್ಟರ್ ಅಲ್ಲ: 'ಆಪ್ತಮಿತ್ರ' ನಿರ್ದೇಶಕನ ಕುರಿತು ರವಿಚಂದ್ರನ್ ಹೀಗೆ ಹೇಳಿದ್ದೇಕೆ?

    ನಟ, ನಿರ್ದೇಶಕ, ನಿರ್ಮಾಪಕ, ಗೀತಾರಚನೆಗಾರ, ಸಂಗೀತ ನಿರ್ದೇಶಕ, ಸಂಭಾಷಣೆಕಾರನಾಗಿ ರವಿಚಂದ್ರನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.

    ಸದ್ಯ 'ಆ ದೃಶ್ಯ', 'ರಾಜೇಂದ್ರ ಪೊನ್ನಪ್ಪ', 'ರವಿ ಬೊಪ್ಪಣ್ಣ' ಸಿನಿಮಾಗಳಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ.

    English summary
    Kannada actor Ravichandran will honored with doctorate.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X