ಅಭಿಮಾನಿಗಳ ಗಮನಕ್ಕೆ : ರವಿಚಂದ್ರನ್ ಈ ವರ್ಷದ ಹುಟ್ಟುಹಬ್ಬ ಆಚರಿಸುತ್ತಿಲ್ಲ
Recommended Video
ಈ ವರ್ಷ ರವಿಚಂದ್ರನ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ | FILMIBEAT KANNADA
ನಟ ರವಿಚಂದ್ರನ್ ಈ ವರ್ಷದ ತಮ್ಮ ಹುಟ್ಟುಹಬ್ಬ ಆಚರಣೆ ಮಾಡುತ್ತಿಲ್ಲ. ಈ ಕಾರಣ ಅಭಿಮಾನಿಗಳಿಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.
ರವಿಚಂದ್ರನ್ ಸದ್ಯ ತಮ್ಮ ಮಗಳ ಮದುವೆಯ ತಯಾರಿಯಲ್ಲಿ ಇದ್ದಾರೆ. ಗೀತಾಂಜಲಿ ಹಾಗೂ ಅಜಯ್ ವಿವಾಹ ಇದೇ ತಿಂಗಳ 28 ಹಾಗೂ 29 ರಂದು ನಡೆಯಲಿದೆ. ಮದುವೆಯ ನಂತರ ದಿನ ಅಂದರೆ ಮೇ 30 ರಂದು ರವಿಚಂದ್ರನ್ ಹುಟ್ಟುಹಬ್ಬ ಇದೆ.

ಮದುವೆಯ ಕೆಲಸಗಳು, ಬಂಧು ಮಿತ್ರರು, ಸಂಬಂಧಿಗಳು ಮನೆಯಲ್ಲಿ ಇರುವ ಕಾರಣ ಈ ವರ್ಷದ ಬರ್ತ್ ಡೇ ಆಚರಣೆ ಇರುವುದಿಲ್ಲ ಎಂದು ರವಿಚಂದ್ರನ್ ತಿಳಿಸಿದ್ದಾರೆ.
ಮಗಳ ಮದುವೆ ಮಾಡಿ ನಂತರ ಮತ್ತೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯ ಆಗುವುದಿಲ್ಲ ಎಂದು ರವಿಚಂದ್ರನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಕ್ರೇಜಿಸ್ಟಾರ್ ಪುತ್ರಿಯ ವಿವಾಹ ನಡೆಯಲಿದ್ದು, ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ತಾರೆಯರಿಗೆ ಆಹ್ವಾನ ನೀಡಲಾಗಿದೆ.
More from Filmibeat
English summary
Kannada Actor Ravichandran will not celebrate his birthday this year. because of his daughter marriage


Click it and Unblock the Notifications











