For Quick Alerts
  ALLOW NOTIFICATIONS  
  For Daily Alerts

  "90ರ ದಶಕದಲ್ಲಿ ಮಂಡ್ಯದಿಂದ ಬಂದ ಪ್ರತಿಭೆಗಳಲ್ಲಿ ರವಿ ಕೂಡ ಒಬ್ಬರು"- ನಟ ರವಿಶಂಕರ್ ಗೌಡ!

  |

  ಕನ್ನಡ ಚಿತ್ರರಂಗಕ್ಕೂ ಮಂಡ್ಯಕ್ಕೂ ಬಹಳ ಹಳೆಯ ಸಂಬಂಧವಿದೆ. ಇಂದಿಗೂ ಮಂಡ್ಯದಿಂದ ಕನ್ನಡ ಚಿತ್ರರಂಗಕ್ಕೆ ಬರೋ ನಟ, ಕಲಾವಿದರ, ತಂತ್ರಜ್ಞರ ಸಂಖ್ಯೆಯೇನು ಕಮ್ಮಿಯಿಲ್ಲ. ಪ್ರತಿ ದಿನ ಒಬ್ಬರಲ್ಲಾ ಒಬ್ಬರು ಇದೇ ಜಿಲ್ಲೆಯಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ.

  ಮಂಡ್ಯದಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ಸುಮ್ಮನೆ ಹಿಂತಿರುಗಿ ಹೋಗಿಲ್ಲ. ಇಂತಹವರಲ್ಲಿ ಬಹಳ ಮಂದಿ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಆದರೆ, 90 ರ ದಶಕದಲ್ಲಿ ಚಿತ್ರರಂಗದಲ್ಲಿ ನೆಲೆಯೂರಲೇ ಬೇಕು ಅಂತ ಪಟ್ಟು ಹಿಡಿದು ಬಂದವರು ಗಮನ ಸೆಳೆದಿದ್ದರು. ಅಂತಹವರಲ್ಲಿ ನಿನ್ನೆ(ಸೆಪ್ಟೆಂಬರ್ 14)ಯಷ್ಟೇ ಇಹಲೋಕ ತ್ಯಜಿಸಿದ ಮಂಡ್ಯ ರವಿ ಉರ್ಫ್ ರವಿ ಪ್ರಸಾದ್ ಮಂಡ್ಯ ಕೂಡ ಒಬ್ಬರು.

  "ಮಂಡ್ಯ ರವಿ ಲುಕ್​ನಲ್ಲೇ ಇನ್ನೊಬ್ಬರನ್ನ ತಿಂದಾಕಿ ಬಿಡುತ್ತಾನೆ": ಭಾವುಕರಾದ ನಟಿ ನಂದಿನಿ

  ಚಿತ್ರರಂಗದಲ್ಲಿ ಇವರನ್ನು ಪ್ರೀತಿಯಿಂದಲೇ ಮಂಡ್ಯ ರವಿ ಅಂತಲೇ ಕರೆಯುತ್ತಿದ್ದರು. ಇವರ ಸಿನಿಜರ್ನಿಯ ಬಗ್ಗೆ ನಟ ರವಿಶಂಕರ್ ಫಿಲ್ಮಿ ಬೀಟ್ ಜೊತೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

  ಅಪ್ಪಟ ಮಂಡ್ಯದ ಪ್ರತಿಭೆ

  ಅಪ್ಪಟ ಮಂಡ್ಯದ ಪ್ರತಿಭೆ

  ಮಂಡ್ಯ ರವಿ ಸಿನಿಮಾ ಹಾಗೂ ಕಿರುತೆರೆ ಪ್ರಪಂಚದಲ್ಲಿ ತೀರಾ ಚಿರಪರಿಚಿತ. ಅದರಲ್ಲೂ ಟಿ.ಎನ್‌ ಸೀತಾರಾಂ ನಿರ್ದೇಶನದ ಧಾರಾವಾಹಿಗಳಲ್ಲಿ ಇವರಿಗೊಂದು ಖಾಯಂ ಪಾತ್ರ ಫಿಕ್ಸ್. ರಂಗಭೂಮಿಯಲ್ಲಿ ಪಳಗಿದ ಪ್ರತಿಭೆಯಾಗಿದ್ದರಿಂದ ನಟನೆ ಬಗ್ಗೆ ಯಾರೂ ಕಿಂಚಿತ್ತೂ ಚಕಾರವೆತ್ತಿದ್ದ ಉದಾಹರಣೆಗಳೇ ಇಲ್ಲ. ಸಿನಿಮಾಗಳಲ್ಲಿ ನಟಿಸಿದ್ದರೂ ಮಂಡ್ಯ ರವಿಗೆ ಕೈ ಹಿಡಿದಿದ್ದು ಕಿರುತೆರೆ. ಅಪ್ಪಟ ಮಂಡ್ಯದ ಪ್ರತಿಭೆಗಾಗಿದ್ದ ರವಿ ಶಂಕರ್ ಅಷ್ಟು ಸಹಜ ಎಂದೆನಿಸುತ್ತಿತ್ತು. ಈ ಪ್ರತಿಭೆ ಬಗ್ಗೆ ನಟ ರವಿಶಂಕರ್ ಗೌಡ ಆಸಕ್ತಿಕರ ಸಂಗತಿಯೊಂದನ್ನು ತಿಳಿಸಿದ್ದಾರೆ.

  ಶಾಸ್ತ್ರಿ, ರಮೇಶ್‌ ಜೊತೆ ಎಂಟ್ರಿ ಕೊಟ್ಟ ರವಿ

  ಶಾಸ್ತ್ರಿ, ರಮೇಶ್‌ ಜೊತೆ ಎಂಟ್ರಿ ಕೊಟ್ಟ ರವಿ

  "ಮಂಡ್ಯದಿಂದ ಚಿತ್ರರಂಗಕ್ಕೆ ಬಂದ ಕಲಾವಿದರ ಸಂಖ್ಯೆಯೇನು ಕಮ್ಮಿಯಿಲ್ಲ. ಆದರೆ, 90 ದಶಕದಲ್ಲಿ ಮಂಡ್ಯದಿಂದ ಕೆಲ ಪ್ರತಿಭೆಗಳ ಎಂಟ್ರಿ ಆಗಿತ್ತು. ಅದರಲ್ಲಿ ಗಾಯಕ ಎಲ್‌ ಎನ್ ಶಾಸ್ತ್ರಿ, ಮಂಡ್ಯ ರವಿ, ಮಂಡ್ಯ ರಮೇಶ್ ಹಾಗೂ ನಾನು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೆವು. ನಾಲ್ವರಿಗೂ ಚಿತ್ರರಂಗ ಹಾಗೂ ಕಿರುತೆರೆ ಎರಡರಲ್ಲೂ ಉತ್ತಮ ಅವಕಾಶಗಳೇ ಸಿಕ್ಕಿದ್ದವು. ಹೀಗಾಗಿ ನಾವು 90ರ ದಶಕದ ಪ್ರತಿಭೆಗಳು ಅಂತ ನಿಸ್ಸಂದೇಹವಾಗಿ ಹೇಳಬಹುದು." ಎನ್ನುತ್ತಾರೆ ನಟ ರವಿಶಂಕರ್.

  ಮಂಡ್ಯ ರವಿ ತಂದೆಯೇ ಟೀಚರ್

  ಮಂಡ್ಯ ರವಿ ತಂದೆಯೇ ಟೀಚರ್

  ಅಸಲಿಗೆ ಮಂಡ್ಯ ರವಿ ಅವರ ಅಸಲಿ ಹೆಸರು ರವಿ ಪ್ರಸಾದ್. ಮಂಡ್ಯದಿಂದ ಮೂಲ ಆಗಿದ್ದರಿಂದ ಮಂಡ್ಯ ರವಿ ಅಂತ ಜನಪ್ರಿಯ. ಇವರ ತಂದೆ ಡಾ. ಹೆಚ್.ಎಸ್. ಮುದ್ದೇಗೌಡರು ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಟ ರವಿಶಂಕರ್ ಗೌಡಗೆ ಮಂಡ್ಯ ರವಿ ಅವರ ತಂದೆನೇ ಅಧ್ಯಾಪಕರಾಗಿದ್ದರು. ಈ ಸಂದರ್ಭದಲ್ಲಿ ರವಿಶಂಕರ್ ಗೌಡರನ್ನು ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.

  ತಾರೆಯರಿಂದ ಕಂಬನಿ

  ತಾರೆಯರಿಂದ ಕಂಬನಿ

  ಮಂಡ್ಯ ರವಿ ಅನಾರೋಗ್ಯದಿಂದ ನಿಧನರಾಗಿದ್ದಕ್ಕೆ ಕಿರುತೆರೆ ಲೋಕ ಕಂಬಿನಿ ಮಿಡಿದಿದೆ. ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಂ, ನಟಿ ನಂದಿನಿ, ನಿರ್ದೇಶಕ ರಾಜೇಶ್ ಗೌಡ, ರವಿಶಂಕರ್ ಗೌಡ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಭಾವುಕರಾಗಿದ್ದಾರೆ. ಕಂಚಿನ ಕಂಠದ, ಖಡಕ್ ನಟನ ಅಗಲಿಕೆ ಬಗ್ಗೆ ಕಣ್ಣೀರಾಗಿದ್ದಾರೆ.

  English summary
  Actor Ravishankar Gowda Reaction On Actor Mandya Ravi Aka Ravi Prasad Death, Know More.
  Thursday, September 15, 2022, 14:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X