ನಟ ನಿಖಿಲ್ ಕುಮಾರ್ ಬಗ್ಗೆ ರವಿಶಂಕರ್ ಮಾತು

By Naveen

ನಟ ನಿಖಿಲ್ ಕುಮಾರ್ ಈಗ ಎರಡೇರಡು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಒಂದು ಕಡೆ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'ದಲ್ಲಿ ನಿಖಿಲ್ ಅಭಿಮನ್ಯು ಪಾತ್ರವನ್ನು ಮಾಡಿದ್ದಾರೆ. ಇತ್ತ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿಯೂ ಅವರು ನಟಿಸುತ್ತಿದ್ದಾರೆ.

'ಸೀತಾರಾಮ ಕಲ್ಯಾಣ' ಸಿನಿಮಾದ ಸುದ್ದಿಗೋಷ್ಟಿ ಇತ್ತೀಚಿಗಷ್ಟೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಭಾಗಿಯಾಗಿದ್ದರು. ವೇದಿಕೆ ಮೇಲೆ ಇದ್ದ ಒಬ್ಬೊಬ್ಬರು ಸಿನಿಮಾದ ಬಗ್ಗೆ ಮಾತನಾಡಲು ಶುರು ಮಾಡಿದರು. ಈ ವೇಳೆ ಚಿತ್ರದ ಬಗ್ಗೆ ಮಾತನಾಡಿದ ರವಿಶಂಕರ್ ನಟ ನಿಖಿಲ್ ಕುಮಾರ್ ಅವರ ಶ್ರಮವನ್ನು ಮೆಚ್ಚಿದರು. ನಿಖಿಲ್ ಅವರ ಪ್ರತಿಭೆ ಮತ್ತು ಸಿನಿಮಾ ಪ್ಯಾಷನ್ ಅನ್ನು ಹೊಗಳಿದರು. ಮುಂದೆ ಓದಿ...

ಕಥೆ ಕೇಳಿದ ತಕ್ಷಣ ಈ ಸಿನಿಮಾವನ್ನು ಒಪ್ಪಿಕೊಂಡೆ

ಕಥೆ ಕೇಳಿದ ತಕ್ಷಣ ಈ ಸಿನಿಮಾವನ್ನು ಒಪ್ಪಿಕೊಂಡೆ

''ಸೀತಾರಾಮ ಕಲ್ಯಾಣ' ಸಿನಿಮಾದ ಕಥೆ ಕೇಳಿದ ತಕ್ಷಣ ಈ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದಲ್ಲಿ ದೊಡ್ಡ ತಾರ ಬಳಗ ಇದೆ. ಇದು ತುಂಬ ಒಳ್ಳೆಯ ಸಿನಿಮಾ ಆಗುತ್ತದೆ. ಎಲ್ಲ ರೀತಿಯ ಅಂಶಗಳು ಸಿನಿಮಾದಲ್ಲಿ ಇದೆ. ಈ ಹಿಂದೆ ಅನೇಕ ಬಾರಿ ತಂದೆಯ ಪಾತ್ರವನ್ನು ನಾನು ಮಾಡಿದ್ದೇನೆ. ಆದರೆ ಇಲ್ಲಿ ತುಂಬ ಡಿಫರೆಂಟ್ ಆಗಿದೆ.'' - ರವಿಶಂಕರ್, ನಟ

ತುಂಬ ಆಸಕ್ತಿಯಿಂದ ಸಿನಿಮಾ ಮಾಡುತ್ತಾರೆ

ತುಂಬ ಆಸಕ್ತಿಯಿಂದ ಸಿನಿಮಾ ಮಾಡುತ್ತಾರೆ

''ನಿಖಿಲ್ ಕುಮಾರ್ ಅವರ ಡೆಡಿಕೇಶನ್ ಮತ್ತು ಸಿನಿಮಾ ಮೇಲಿನ ನಿಷ್ಟೆ ನೋಡಿದರೆ ತುಂಬ ಖುಷಿ ಆಗುತ್ತದೆ. ಅವರು ಇರುವ ಸ್ಥಾನಕ್ಕೆ ಅಷ್ಟು ಕಷ್ಟ ಪಡುವ ಅಗತ್ಯ ಇಲ್ಲ. ಆದರೆ, ಒಂದು ಸಿನಿಮಾಗಾಗಿ ,ಒಂದು ಪಾತ್ರಕ್ಕಾಗಿ ಅವರು ತೆಗೆದುಕೊಳ್ಳುವ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು.'' - ರವಿಶಂಕರ್, ನಟ

'ಕುರುಕ್ಷೇತ್ರ' ಸಿನಿಮಾದಲ್ಲಿ ಸಹ ಅವರ ಜೊತೆ ನಟಿಸಿದ್ದೇನೆ

'ಕುರುಕ್ಷೇತ್ರ' ಸಿನಿಮಾದಲ್ಲಿ ಸಹ ಅವರ ಜೊತೆ ನಟಿಸಿದ್ದೇನೆ

''ಕುರುಕ್ಷೇತ್ರ' ಸಿನಿಮಾದಲ್ಲಿ ಸಹ ನಿಖಿಲ್ ಕುಮಾರ್ ಅವರ ಜೊತೆಗೆ ನಟಿಸಿದ್ದೇನೆ. ಆ ಚಿತ್ರದ ಪಾತ್ರಕ್ಕೆ, ಡೈಲಾಗ್ ಗಳಿಗೆ, ಆಕ್ಷನ್ ದೃಶ್ಯಗಳಿಗೆ, ಡ್ಯಾನ್ಸ್ ಗಳಿಗೆ ಹೀಗೆ ಎಲ್ಲ ವಿಷಯಗಳನ್ನು ಅವರೇ ನೋಡಿಕೊಳ್ಳುತ್ತಾರೆ. ಅವರಿಗೆ ಶುಭವಾಗಿಲಿ. ನಮ್ಮ ಈ ಸಿನಿಮಾಗಳಿಗೆ ಒಳ್ಳೆಯದಾಗಲಿ '' - ರವಿಶಂಕರ್, ನಟ

ರವಿಶಂಕರ್ ಅವರ ಮುಂದೆ ನಿಲ್ಲುವುದು ಗ್ರೇಟ್ ಎನಿಸುತ್ತದೆ

ರವಿಶಂಕರ್ ಅವರ ಮುಂದೆ ನಿಲ್ಲುವುದು ಗ್ರೇಟ್ ಎನಿಸುತ್ತದೆ

ರವಿಶಂಕರ್ ಅವರ ಬಳಿಕ ಮಾತನಾಡಿದ ನಿಖಿಲ್ 'ಸೀತಾರಾಮ ಕಲ್ಯಾಣ' ಒಂದು ಕೌಟುಂಬಿಕ ಸಿನಿಮಾ. ರವಿಶಂಕರ್ ಸರ್ ಅವರ ಜೊತೆಗೆ ಈ ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ. ಇಂತಹ ದೊಡ್ಡ ನಟರ ಮುಂದೆ ನಿಲ್ಲುವುದು ಗ್ರೇಟ್ ಎನಿಸುತ್ತದೆ. ಅವರ ಜೊತೆಗೆ ನಟಿಸಲು ಖುಷಿ ಆಗುತ್ತದೆ.'' ಎಂದು ಹೇಳಿದ್ದಾರೆ.

More from Filmibeat

English summary
Kannada actor Ravishankar spoke about Nikhil Kumar in Seetharama Kalyana movie press meet. Seetharama Kalyana movie is directed by A.Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X