ನಟ ನಿರಂಜನ್ ಸುಧೀಂದ್ರ ನಿಶ್ಚಿತಾರ್ಥ; ಉಪೇಂದ್ರ ಅಣ್ಣನ ಮಗ ಕೈ ಹಿಡಿಯುತ್ತಿರುವ ಹುಡುಗಿ ಯಾರು?

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ದಿಲ್ಲದೇ ನಿರಂಜನ್ ಮದುವೆ ನಿಶ್ಚಯವಾಗಿದೆ. ಸರಳವಾಗಿ ಎಂಗೇಜ್‌ಮೆಂಟ್ ಕೂಡ ನಡೆದಿದೆ. ಗೈನಕಾಲಜಿಸ್ಟ್ (ಸ್ತ್ರೀರೋಗ ತಜ್ಞೆ) ಸಂಜನಾ ಬಿ ರಾಜ್ ಎಂಬುವವರ ಜೊತೆ ಮದುವೆಗೆ ಸಿದ್ಧತೆ ನಡೀತಿದೆ.

ನಿನ್ನೆ(ಮೇ 25) ನಗರದ ಖಾಸಗಿ ಹೋಟೆಲ್‌ನಲ್ಲಿ ನಿರಂಜನ್ ಹಾಗೂ ಸಂಜನಾ ಉಂಗುರು ಬದಲಿಸಿಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರ ಫೋಟೊಗಳನ್ನು ಹಂಚಿಕೊಂಡು ಜೋಡಿ ಶುಭ ಹಾರೈಸಿದ್ದಾರೆ. ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ (RCB) ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಹಾಗೂ ನಿರಂಜನ್ ಮದುವೆ ಆಗ್ತಾರೆ ಎನ್ನುವ ವದಂತಿ ಇತ್ತೀಚೆಗೆ ಹರಿದಾಡಿತ್ತು. ಬಳಿಕ ಅದೆಲ್ಲಾ ಸುಳ್ಳು ಎಂದು ನಿರಂಜನ್ ಸ್ಪಷ್ಟನೆ ನೀಡಿದ್ದರು.

Actor real star Upendra s nephew Niranjan Sudhindra gets engaged to Dr Sanjana

ಟ್ರೋಲ್ ಪೇಜ್‌ನಲ್ಲಿ ಇಂತಾದೊಂದು ಸುಳ್ಳು ಪೋಸ್ಟ್ ಹರಿದಾಡಿದಾಗ ಸ್ವತಃ ನಿರಂಜನ್ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. "ಅಡ್ಮಿನ್.. ಇನ್ವಿಟೇಶನ್ ಬಂದ್ರೆ ನಮಗೂ ಒಂದು ಕಳಿಸಿಕೊಡು ಗುರು. ಮೊದಲು ಫ್ಯಾಕ್ಟ್ ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡಿ ಆಮೇಲೆ ಪೋಸ್ಟ್ ಮಾಡಿ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ನಿಲ್ಲಿಸಿ" ಎಂದು ನಿರಂಜನ್ ಪ್ರತಿಕ್ರಿಯಿಸಿದ್ದರು.

'ಬಳ್ಳಾರಿ ನಾಗ' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ನಿರಂಜನ್ ಬಳಿಕ 'ಸೆಕೆಂಡ್ ಹಾಫ್' ಚಿತ್ರದಲ್ಲಿ ಮಿಂಚಿದ್ದರು. ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ಜೊತೆ ಆ ಚಿತ್ರದಲ್ಲಿ ನಟಿಸಿದ್ದರು. 'ನಮ್ಮ ಹುಡುಗರು' ಎಂಬ ಹಳ್ಳಿ ಸೊಗಡಿನ ಚಿತ್ರದಲ್ಲಿ ಕೂಡ ನಿರಂಜನ್ ಕಾಣಿಸಿಕೊಂಡಿದ್ದರು. ಅರ್ಜುನ್ ಸರ್ಜಾ ನಿರ್ಮಿಸಿ ನಿರ್ದೇಶನ ಮಾಡಿದ್ದ 'ಸೀತಾಪಯಣ' ಚಿತ್ರದಲ್ಲಿ ನಿರಂಜನ್ ಹೀರೊ ಆಗಿ ಅವಕಾಶ ಗಿಟ್ಟಿಸಿಕೊಂಡಿದ್ದರು.

Actor real star Upendra s nephew Niranjan Sudhindra gets engaged to Dr Sanjana

ಐಶ್ವರ್ಯ ಅರ್ಜುನ್ ಜೋಡಿಯಾಗಿ 'ಸೀತಾಪಯಣ' ಚಿತ್ರದಲ್ಲಿ ನಟಿಸಿದ್ದರು. 'ಸೂಪರ್ ಸ್ಟಾರ್' ಹೆಸರಿನಲ್ಲಿ ನಿರಂಜನ್ ನಟನೆಯ ಸಿನಿಮಾ ಘೋಷಣೆ ಆಗಿತ್ತು. ಟೀಸರ್ ಕೂಡ ಬಂದಿತ್ತು. ಬಳಿಕ ಆ ಸಿನಿಮಾ ಕಥೆ ಏನಾಯ್ತೋ ಗೊತ್ತಿಲ್ಲ. ಸದ್ಯ 'ಸ್ಪಾರ್ಕ್' ಎಂಬ ಮತ್ತೊಂದು ಸಿನಿಮಾದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಕೆಲವೇ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ.

ಇತ್ತೀಚೆಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಿಯಾಂಕ ಉಪೇಂದ್ರ ಭಾಗವಹಿಸಿದ್ದರು. ಅಲ್ಲಿಂದ ಬಂದ ಬಳಿಕ ನಿರಂಜನ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಕಲರ್‌ಫುಲ್ ಸೀರೆಯಲ್ಲಿ ಪ್ರಿಯಾಂಕ ಮಿಂಚಿದ್ದು ಕುರ್ತಾ ಪೈಜಾಮಾ ಧರಿಸಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.

Read more about: upendra priyanka upendra niranjan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X