For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಯಶಸ್ಸಿನ ಖುಷಿಯಲ್ಲಿ ಮಗಳ ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ

  |

  ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ರಿಷಬ್‌ ಶೆಟ್ಟಿ ತಾವೇ, ರಚಿಸಿ, ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ಎಲ್ಲೆಲ್ಲೂ ಕಾಂತಾರದ ಕೂಗು ಮೊಳಗುತ್ತಿದೆ. ಎಲ್ಲರ ಬಾಯಲ್ಲೂ ಕಾಂತಾರ ಚಿತ್ರದ ಹೆಸರು ಕೇಳಿ ಬರುತ್ತಿದೆ.

  ಸಪ್ಟೆಂಬರ್‌ 30ರಂದು ವಿಶ್ವದಾದ್ಯಂತ ತೆರೆಕಂಡ 'ಕಾಂತಾರ' ಚಿತ್ರ ಅಂದಿನಿಂದ ಇಂದಿನವರೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಕಾಂತಾರ' ಸಿನಿಮಾ ಅಬ್ಬರದಿಂದ ಸದ್ಯ ಚಿತ್ರಮಂದಿರ ತುಂಬಿದೆ ಬೋರ್ಡ್ ಗಳನ್ನು ಎಲ್ಲ ಥಿಯೇಟರ್‌ಗಳಲ್ಲಿ ನೋಡುವಂತಾಗಿದೆ. ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ ಕಾಂತಾರ ಚಿತ್ರ ಎಲ್ಲರ ನಿರೀಕ್ಷೆ ಮೀರಿ ಸೂಪರ್ ಹಿಟ್‌ ಆಗಿದೆ.

  'ಕಾಂತಾರ' ಸಿನಿಮಾದ ಬಗ್ಗೆ ದೈವ ನರ್ತಕ ಮುಖೇಶ್ ಹೇಳಿದ್ದು ಹೀಗೆ'ಕಾಂತಾರ' ಸಿನಿಮಾದ ಬಗ್ಗೆ ದೈವ ನರ್ತಕ ಮುಖೇಶ್ ಹೇಳಿದ್ದು ಹೀಗೆ

  ಕಾಂತಾರ ಚಿತ್ರ ತೆರೆಕಂಡ ದಿನದಿಂದ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ದಸರಾ ರಜೆಯೂ ಜೊತೆ ಸೇರಿಕೊಂಡು 'ಕಾಂತಾರ' ಚಿತ್ರ ಬಾಕ್ಸ್‌ ಆಫಿಸ್‌ನಲ್ಲಿ ಉತ್ತಮ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಆರನೇ ದಿನ 8.50 ಕೋಟಿ ರೂಪಾಯಿ ಗಳಿಸಿದ್ದ, 'ಕಾಂತಾರ' ಸಿನಿಮಾ ಏಳನೇ ದಿನವೂ 6.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಕಳೆದ ಏಳು ದಿನಗಳಲ್ಲಿ ಕಾಂತಾರ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 46.80 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕಾಂತಾರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹಾಗೂ ಜನರಿಂದ ಪಡೆದಿರುವ ಮೆಚ್ಚುಗೆಗೆ ಚಿತ್ರಕ್ಕೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲ್ಮ್ಸ್ ಕೂಡ ಖುಷಿಯಾಗಿದೆ.

  ಸದ್ಯ 'ಕಾಂತಾರ' ಯಶಸ್ಸಿನ ಖುಷಿಯಲ್ಲಿರುವ ರಿಷಬ್‌ ಶೆಟ್ಟಿ ತಮ್ಮ ಅಭಿಮಾನಿಗಳೊಂದಿಗೆ ಮತ್ತೊಂದು ಸಂತೋಷವನ್ನು ಹಂಚಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ ತಮ್ಮ ಮಗಳ ಮುದ್ದಾದ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜೊತೆಗೆ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

  ನಿನ್ನೆ (ಅಕ್ಟೋಬರ್‌ 6)ರಂದು ವಿಜಯ ದಶಮಿಯ ದಿನ ಮಗಳ ಫೋಟೋ ಶೇರ್‌ ಮಾಡಿರುವ ರಿಷಬ್‌, ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟ ರಿಷಬ್‌ ಶೆಟ್ಟಿ ತಮ್ಮ ಮಗಳು ರಾಧ್ಯಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

  ಮಿಸ್ಟರ್ ರಿಷಬ್ ಶೆಟ್ಟಿ ಅವರೇ ಇಂಥ ಶಿಕ್ಷಣ ಬೇಕು ಅಂತಿದ್ದೀರಲ್ಲ ಸರಿನಾ? ನೆಟ್ಟಿಗನ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರವೇನು?ಮಿಸ್ಟರ್ ರಿಷಬ್ ಶೆಟ್ಟಿ ಅವರೇ ಇಂಥ ಶಿಕ್ಷಣ ಬೇಕು ಅಂತಿದ್ದೀರಲ್ಲ ಸರಿನಾ? ನೆಟ್ಟಿಗನ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರವೇನು?

  ಇನ್ನು ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ರಣವಿತ್‌ ಎನ್ನುವ ಮಗನಿದ್ದು, ಮಾರ್ಚ್ 4ರಂದು ರಿಷಬ್‌ ಹೆಣ್ಣು ಮಗುವಿನ ತಂದೆಯಾಗಿದ್ದರು. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ತಮ್ಮ ಎರಡನೇ ಮಗುವಿನ ಬಗ್ಗೆ ಮಾತನಾಡಿದ್ದರು. ನಾನು ಎರಡನೇ ಬಾರಿ ಗರ್ಭಿಣಿಯಾದಾಗ 'ಕಾಂತಾರ' ಚಿತ್ರದ ಕೆಲಸ ಆರಂಭವಾಯಿತು. ಅದಕ್ಕೆ ನಾನು ನನ್ನ ಮಗಳಿಗೆ 'ಕಾಂತಾರ' ಬೇಬಿ ಅಂತಾ ಕರೆಯುತ್ತೇನೆ. 'ಕಾಂತಾರ' ಶೂಟಿಂಗ್‌ ಮುಗಿಯದ ಕಾರಣ, ಮಂಗಳೂರಿನಲ್ಲೇ ಮಗಳು ಹುಟ್ಟಿದಳು. ಬಾಣಂತನ ಕೂಡ ಅಲ್ಲೇ ಆಯಿತು. ನನ್ನ, ಮಗ, ಮಗಳು ಎಲ್ಲರೂ ಕಾಂತಾರದಲ್ಲಿ ಶ್ರಮವಹಿಸಿದ್ದಾರೆ ಎಂದಿದ್ದರು.

  ಸದ್ಯ ರಿಷಬ್‌ ಶೆಟ್ಟಿ ಅವರ ಮಗಳು ರಾಧ್ಯ ಮೊದಲ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ರಿಷಬ್‌ ಶೆಟ್ಟಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ."ಕಾಂತಾರ ಸಿರಿ" ನಿಮ್ಮ ಮಗಳು ರಾಧ್ಯಾ ಎಂದೆಲ್ಲಾ ಕಮೆಂಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಟನೆಯನ್ನು ಹಾಡಿ ಹೊಗಳಿದ್ದು, ನಾವು ಕಾಂತಾರ-೨ ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಕಮೆಂಟ್‌ ಮಾಡಿದ್ದಾರೆ.

  English summary
  Sandalwood Actor Rishab Shetty shared his daughter photo and introduced her to fans. ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
  Thursday, October 6, 2022, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X