For Quick Alerts
  ALLOW NOTIFICATIONS  
  For Daily Alerts

  ರಿಷಬ್‌ ಮಗಳು 'ಕಾಂತಾರ' ಬೇಬಿ: ಪತಿಯ ಯಶಸ್ಸಿನ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು..?

  |

  ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರ 'ಕಾಂತಾರ' ಸಿನಿಮಾ ಸಪ್ಟೆಂಬರ್‌ 30 ರಂದು ತೆರೆ ಕಂಡಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರಂತ್ಯದಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಂಡಿರುವ 'ಕಾಂತಾರ' ಇಂದು (ಅಕ್ಟೋಬರ್ 3) ಕೂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ. 'ಕಾಂತಾರ' ಟಿಕೆಟ್‌ಗಾಗಿ ಪ್ರೇಕ್ಷಕರು ಮುಗಿ ಬೀಳುತ್ತಿದ್ದು, ಈಗಾಗಲೇ ಬಹುತೇಕ ಚಿತ್ರಮಂದಿಗಳ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ.

  'ಕಾಂತಾರ' ಚಿತ್ರದಲ್ಲಿ ರಷಬ್‌ ಶೆಟ್ಟಿ ಪಾತ್ರವನ್ನು ಕೇವಲ ಪ್ರೇಕ್ಷಕರಷ್ಟೇ ಅಲ್ಲದೇ ಚಿತ್ರರಂಗದ ನಟ ನಟಿಯರೂ ಕೂಡ ಮೆಚ್ಚಿ ಕೊಂಡಾಡಿದ್ದಾರೆ. ಕರಾವಳಿಯ ಸಂಸ್ಕೃತಿಯ ಚಿತ್ರಣವನ್ನು ಬಿಚ್ಚಿಟ್ಟಿರುವ 'ಕಾಂತಾರ'ದಲ್ಲಿ ನಟನೆಯಷ್ಟೇ ವೇಷಭೂಷಣವೂ ಮಹತ್ವತ್ತಾಗಿದೆ. 'ಕಾಂತಾರ' ಚಿತ್ರದ ಪ್ರತಿಯೊಂದು ಪಾತ್ರದ ವೇಷಭೂಷಣದ ಹಿಂದಿರುವ ಶ್ರಮದ ಕೈ ನಟ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ. 'ಕಾಂತಾರ' ಚಿತ್ರಕ್ಕಾಗಿ ಪಟ್ಟ ಶ್ರಮದ ಬಗ್ಗೆ ಸ್ವತಃ ಪ್ರಗತಿ ಶೆಟ್ಟಿ ಮಾತನಾಡಿದ್ದಾರೆ.

  ಅಂದು ಇದೇ ಥಿಯೇಟರ್‌ನಲ್ಲಿ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು 10 ಶೋಗಳು ಹೌಸ್‌ಫುಲ್!ಅಂದು ಇದೇ ಥಿಯೇಟರ್‌ನಲ್ಲಿ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು 10 ಶೋಗಳು ಹೌಸ್‌ಫುಲ್!

  ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಗತಿ ಶೆಟ್ಟಿ, ನಾನು ತುಂಬಾ ಲಕ್ಕಿ ಎಂದುಕೊಳ್ಳುತ್ತೇನೆ. ನಾನು ಮೊದಲು ಗರ್ಭಿಣಿಯಿದ್ದಾಗ ಚಾರ್ಲಿಗೆ ಕೆಲಸ ಮಾಡಿದ್ದೇ, ಎರಡನೇ ಬಾರಿ ಗರ್ಭಿಣಿಯಾದಾಗ 'ಕಾಂತಾರ' ಚಿತ್ರದ ಕೆಲಸ ಆರಂಭವಾಯಿತು. ಅದಕ್ಕೆ ನಾನು ನನ್ನ ಮಗಳಿಗೆ 'ಕಾಂತಾರ' ಬೇಬಿ ಅಂತಾ ಕರೆಯುತ್ತೇನೆ. 'ಕಾಂತಾರ' ಶೂಟಿಂಗ್‌ ಮುಗಿಯದ ಕಾರಣ, ಮಂಗಳೂರಿನಲ್ಲೇ ಮಗಳು ಹುಟ್ಟಿದಳು. ನನ್ನ, ಮಗ, ಮಗಳು ಎಲ್ಲರೂ ಕಾಂತಾರದಲ್ಲಿ ಶ್ರಮವಹಿಸಿದ್ದಾರೆ ಎಂದರು.

  ಮೂರು ಕಾಲ ಘಟ್ಟಕ್ಕೆ ಕಾಸ್ಟ್ಯುಮ್ ರೆಡಿ ಮಾಡಿದ್ದೇವು

  ಮೂರು ಕಾಲ ಘಟ್ಟಕ್ಕೆ ಕಾಸ್ಟ್ಯುಮ್ ರೆಡಿ ಮಾಡಿದ್ದೇವು

  'ಕಾಂತಾರ' ಚಿತ್ರದ ಬಗ್ಗೆ ಹೇಳಲು ಮಾತುಗಳೇ ಇಲ್ಲ. ಕಾಂತಾರ ಚಿತ್ರಕ್ಕೆ ಕಾಸ್ಟ್ಯುಮ್ ಸಲ್ಪ ಕಷ್ಟ ಆಯ್ತು. ಪ್ರೀ ಪ್ರೊಡಕ್ಷನ್‌ಗೆ ಹೆಚ್ಚಾಗಿ ಸಮಯ ಸಿಗಲಿಲ್ಲ. ಆದ್ರೂ ಕಾಸ್ಟ್ಯುಮ್ ಎಲ್ಲಾ ರೆಡಿ ಮಾಡಿಕೊಡಬೇಕಿತ್ತು. ತುಂಬಾ ನೈಜವಾಗಿ ಮಾಡಿದ್ದೇವೆ. ಕಾಂತಾರದಲ್ಲಿ ಮೂರು ಕಾಲ ಘಟ್ಟ ಇತ್ತು. ಅದಕ್ಕೆ ತಕ್ಕಂತೆ ನಾವು ಎಲ್ಲಾ ಸಿದ್ಧ ಮಾಡಬೇಕಿತ್ತು. ಜೊತೆಗೆ ಒಂದು ಸಮುದಾಯದ ಬಗ್ಗೆ ಹೇಳಬೇಕಿತ್ತು. ಹೀಗಾಗಿ ಅದರ ಬಗ್ಗೆ ಅಧ್ಯಾಯನ ಮಾಡಿ ಕಾಸ್ಟ್ಯುಮ್ ಮಾಡಿದ್ದೇವು. ಈಗ ತೆರೆ ಮೇಲೆ ನೋಡಿದಾಗ ಖುಷಿ ಆಯ್ತು ಎಂದರು ಪ್ರಗತಿ ಶೆಟ್ಟಿ.

  Kantara : ಇವತ್ತು ಕೂಡ ಹೌಸ್‌ಫುಲ್.. ಹೌಸ್‌ಫುಲ್.. ಹೌಸ್‌ಫುಲ್: ಮಂಗಳವಾರ, ಬುಧವಾರ ಶೋಗಳು ಫಾಸ್ಟ್ ಫಿಲ್ಲಿಂಗ್!Kantara : ಇವತ್ತು ಕೂಡ ಹೌಸ್‌ಫುಲ್.. ಹೌಸ್‌ಫುಲ್.. ಹೌಸ್‌ಫುಲ್: ಮಂಗಳವಾರ, ಬುಧವಾರ ಶೋಗಳು ಫಾಸ್ಟ್ ಫಿಲ್ಲಿಂಗ್!

  ಕಾಂತಾರ ನಮ್ಮ ನಿರೀಕ್ಷೆ ಮೀರಿ ದೊಡ್ಡದಾಯಿತು

  ಕಾಂತಾರ ನಮ್ಮ ನಿರೀಕ್ಷೆ ಮೀರಿ ದೊಡ್ಡದಾಯಿತು

  ರಿಷಬ್‌ ಬರೆಯಬೇಕಾದ ಕಾಂತಾರ ಏನು ಅಂದುಕೊಂಡಿದ್ದರೂ, ಮಾಡುವಾಗ ಅದು ನಮ್ಮ ನಿರೀಕ್ಷೆ ಮೀರಿ ದೊಡ್ಡದಾಯಿತು. ಜನ ಕೂಡ ಜಾಸ್ತಿ ಆದರು. ಮೊದಲೆಲ್ಲ 100 ಜೂನಿಯರ್‌ ಆರ್ಟಿಸ್ಟ್‌ ಇರುತ್ತಿದ್ದರು, ಆಮೇಲೆ 200 ಆಯ್ತು, ಆಮೇಲೆ 300 ಆಯ್ತು. ಪ್ರತಿ ದಿನ 300 ಜನರ ಕಾಸ್ಟ್ಯುಮ್ ಸಿದ್ಧಪಡಿಸಬೇಕಿತ್ತು. ಜೊತೆಗೆ ಮಳೆ ಬೇರೆ ಇತ್ತು. ಇಂದು ದಿನ ಮಾಡಿದ ಕಾಸ್ಟ್ಯುಮ್ ಒಂದೇ ದಿನಕ್ಕೆ ಹಾಳಾಗುತಿತ್ತು. ಈರೀತಿಯ ಕಷ್ಟಗಳೆಲ್ಲ ಇತ್ತು. ಆದರೆ ಈಗ ಅದರ ಯಶಸ್ಸು ತೆರೆ ಮೇಲೆ ಕಾಣುತ್ತಿದೆ ಎಂದು ಖುಷಿ ಹಂಚಿಕೊಂಡರು.

  ಕಾಂತಾರಕ್ಕಾಗಿ ರಿಷಬ್‌ ಬೆವರಲ್ಲ, ರಕ್ತ ಹರಿಸಿದ್ದಾರೆ

  ಕಾಂತಾರಕ್ಕಾಗಿ ರಿಷಬ್‌ ಬೆವರಲ್ಲ, ರಕ್ತ ಹರಿಸಿದ್ದಾರೆ

  ನನಗೆ ಕಾಂತಾರ ಯಶಸ್ಸಿನ ಖುಷಿಯನ್ನು ತೋರಿಸಿಕೊಳ್ಳೋಕೆ ಆಗುತ್ತಿಲ್ಲ. ರಿಷಬ್‌ ಶೆಟ್ಟಿ ಪತ್ನಿ ಆಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಈ ಸಿನಿಮಾಕ್ಕಾಗಿ ಅವರು ಎಷ್ಟು ಕಷ್ಟಪಟ್ಟಿದ್ದಾರೆ ಎಂದರೆ, ಕಾಂತಾರಕ್ಕಾಗಿ ರಿಷಬ್‌ ಬೆವರಲ್ಲ, ರಕ್ತ ಹರಿಸಿದ್ದಾರೆ. ಕಾಂತಾರನ ಇಷ್ಟೇ ಸಮಯದಲ್ಲಿ ಮುಗಿಸಬೇಕು ಅಂತಾ ರಿಷಬ್‌ಗೆ ಟಾರ್ಗೆಟ್‌ ಇಟ್ಟುಕೊಂಡಿದ್ದರು. ಈ ಚಿತ್ರದಲ್ಲಿ ಮೂರು ಕಾಲಗಳನ್ನು ತೋರಿಸಲಾಗಿದೆ. ಮೊದಲ ಬಾರಿಗೆ ಅವರು ಇಷ್ಟು ಆ್ಯಕ್ಷನ್‌ ಸೀಕ್ವೆನ್ಸ್‌ಗಳನ್ನು ಮಾಡಿದ್ದಾರೆ. ಒಬ್ಬ ನಟನಾಗಿ, ನಿರ್ದೇಶಕನಾಗಿ ರಿಷಬ್‌ ಈ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ.

  ಪ್ರತಿ ದಿನ ಕೈ ಕಾಲು ಎಲ್ಲಾ ನೋವು ಮಾಡಿಕೊಳ್ಳುತ್ತಿದ್ದರು

  ಪ್ರತಿ ದಿನ ಕೈ ಕಾಲು ಎಲ್ಲಾ ನೋವು ಮಾಡಿಕೊಳ್ಳುತ್ತಿದ್ದರು

  ರಿಷಬ್‌ ಯಾವುದೇ ವಿಚಾರ ಮಾಡಬೇಕು ಅಂತಾ ಅಂದುಕೊಂಡರು, ಮಾಡಿಯೇ ತೀರುತ್ತಾರೆ. ಅವರು ಹೇಗಿರುತ್ತಾರೆ ಅಂದರೆ ಅವರ ಸುತ್ತಲಿನ ಜನ ನೆಗೆಟಿವ್‌ ಮಾತನಾಡಲು ಅವರು ಅವಕಾಶನೇ ಕೊಡುವುದಿಲ್ಲ. ಕೆಲವೊಮ್ಮೆ ಅವರ ಸ್ಥಿತಿ ನೋಡಿದಾಗ ನನಗೆ ಬೇಜಾರಾಗುತ್ತಿತ್ತು. ಆದರೆ ಅವರ ಮುಂದೆ ತೋರಿಸಿಕೊಳ್ಳುತ್ತಿರಲಿಲ್ಲ. ಪ್ರತಿ ದಿನ ಕೈ ಕಾಲು ಎಲ್ಲಾ ನೋವು ಮಾಡಿಕೊಳ್ಳುತ್ತಿದ್ದರು. ರಿಷಬ್ ಮಾತ್ರದಲ್ಲಿ ಕಾಂತಾರದಲ್ಲಿ ಚಿತ್ರದಲ್ಲಿ ಕೆಲಸ ಮಾಡಿ ನೋವು ಮಾಡಿಕೊಂಡಿರುವ ಪ್ರತಿಯೊಬ್ಬರನ್ನು ನೋಡಿ ನನಗೆ ಬೇಜಾರಾಗುತ್ತಿತ್ತು ಎಂದರು.

  English summary
  Actor Rishab Shetty wife Pragathi Shetty react on Kantara movie success.
  Monday, October 3, 2022, 16:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X