For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಆದಿಪುರುಷ್' ಸಿನಿಮಾ ಚಿತ್ರೀಕರಣಕ್ಕೆ ಸುದೀರ್ಘ ರಜೆ ಹಾಕಿದ ಸೈಫ್ ಅಲಿ ಖಾನ್: ಕಾರಣವೇನು?

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ರಾಧೆ ಶ್ಯಾಮ್ ಚಿತ್ರೀಕರಣ ಮುಗಿಸಿ ಆದಿಪುರುಷ್ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದೇ ತಿಂಗಳು ಜನವರಿ ಕೊನೆಯ ವಾರದಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

  ಆದರೆ ಸೈಫ್ ಅಲಿ ಖಾನ್ ಮಾತ್ರ ಎರಡು ತಿಂಗಳು ತಡವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೌದು, ಸೈಫ್ ಅಲಿ ಖಾನ್ ಮಾರ್ಚ್ ತಿಂಗಳಿಂದ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ನಿರ್ದೇಶಕ ಓಂ ರಾವತ್ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಸೈಫ್ ಅಲಿ ಖಾನ್ ಯಾಕೆ ತಡವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ? ಇಲ್ಲಿದೆ ಮಾಹಿತಿ.

  ರಾವಣನ ಕುರಿತು ಹೇಳಿಕೆ: ಸೈಫ್ ಅಲಿ ಖಾನ್ ವಿರುದ್ಧ ಕೇಸ್ರಾವಣನ ಕುರಿತು ಹೇಳಿಕೆ: ಸೈಫ್ ಅಲಿ ಖಾನ್ ವಿರುದ್ಧ ಕೇಸ್

  ಪಿತೃತ್ವ ರಜೆ ಪಡೆದ ಸೈಫ್ ಅಲಿ ಖಾನ್

  ಪಿತೃತ್ವ ರಜೆ ಪಡೆದ ಸೈಫ್ ಅಲಿ ಖಾನ್

  ಅಷ್ಟಕ್ಕೂ ಸೈಫ್ ತಡವಾಗಿ ಚಿತ್ರೀಕರಣಕ್ಕೆ ಹಾಜರಾಗಲು ಕಾರಣ ಪತ್ನಿ ಕರೀನಾ ಕಪೂರ್. ಸೈಫ್ ಅಲಿ ಖಾನ್ ಪತ್ನಿ ನಟಿ ಕರೀನಾ ಕಪೂರ್ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರೆ. ಸದ್ಯದಲ್ಲೇ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾರೆ. ಹಾಗಾಗಿ ಸೈಫ್ ಪಿತೃತ್ವ ರಜೆ ಪಡೆಯುತ್ತಿದ್ದಾರಂತೆ.

  ನಿರ್ದೇಶಕ ಓಂ ರಾವತ್ ಹೇಳಿದ್ದನು?

  ನಿರ್ದೇಶಕ ಓಂ ರಾವತ್ ಹೇಳಿದ್ದನು?

  ಈ ಬಗ್ಗೆ ಬಾಂಬೆ ಟೌಮ್ಸ್ ಜೊತೆ ಮಾತನಾಡಿದ ನಿರ್ದೇಶಕ ಓಂ ರಾವತ್, ಸೈಫ್ ಮತ್ತು ಪ್ರಭಾಸ್ ಇಬ್ಬರು ಕಳೆದ ಮೂರು ತಿಂಗಳಿಂದ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲು ನಮ್ಮ ತಂಡ ಉತ್ಸುಕವಾಗಿದೆ. ಸೈಫ್ ಸರ್ ಪಿತೃತ್ವ ರಜೆ ಪಡೆಯುತ್ತಿದ್ದಾರೆ. ಅವರು ಮಾರ್ಚ್ ತಿಂಗಳಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ ವರೆಗೂ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದೇವೆ' ಎಂದು ಹೇಳಿದ್ದಾರೆ.

  ವಿಕ್ರಂವೇದ ಹಿಂದಿ ರೀಮೇಕ್: ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪಕ್ಕಾವಿಕ್ರಂವೇದ ಹಿಂದಿ ರೀಮೇಕ್: ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪಕ್ಕಾ

  ವಿವಾದಾತ್ಮಕ ಹೇಳಿಕೆ ನೀಡಿದ್ದ ಸೈಫ್ ಅಲಿ ಖಾನ್

  ವಿವಾದಾತ್ಮಕ ಹೇಳಿಕೆ ನೀಡಿದ್ದ ಸೈಫ್ ಅಲಿ ಖಾನ್

  ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ರಾವಣನ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದ ಸೈಫ್ ಬಳಿಕ ಕ್ಷಮೆ ಯಾಚಿಸಿದ್ದರು. 'ಮನರಂಜನೆ ದೃಷ್ಟಿಯಿಂದ ರಾವಣ ಪಾತ್ರಕ್ಕೆ ನಾವು ಮಾನವೀಯ ಗುಣಗಳನ್ನು ಅಳವಡಿಸುತ್ತಿದ್ದೇವೆ. ಲಕ್ಷ್ಮಣನು ಶೂರ್ಪನಕಿಯ ಮೂಗು ಕತ್ತರಿಸಿದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳುವ ಕಾರಣಕ್ಕಾಗಿಯೇ ರಾವಣನು ಸೀತೆಯನ್ನು ಅಪರಿಸಿದ್ದ ಮತ್ತು ರಾಮನ ವಿರುದ್ಧ ಯುದ್ಧ ಮಾಡಿದ್ದ ಎಂಬುದನ್ನು ಈ ಸಿನಿಮಾ ಸಮರ್ಥಿಸುತ್ತಿದೆ' ಎಂದು ಸೈಫ್ ಅಲಿ ಖಾನ್ ಹೇಳಿದ್ದ ಹೇಳಿಕೆ ವಿವಾದ ಸೃಷ್ಟಿ ಮಾಡಿತ್ತು.

  ಸೈಪ್ ಅಲಿ ಖಾನ್ ಕೈಬಿಡುವಂತೆ ನೆಟ್ಟಿಗರ ಆಕ್ರೋಶ

  ಸೈಪ್ ಅಲಿ ಖಾನ್ ಕೈಬಿಡುವಂತೆ ನೆಟ್ಟಿಗರ ಆಕ್ರೋಶ

  ಸೈಫ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಸಿನಿಮಾದಿಂದ ಸೈಫ್ ಅಲಿ ಖಾನ್ ರನ್ನು ಕೈಬಿಡಬೇಕು ಎಂದು ನೆಟ್ಟಿಗರು ಒತ್ತಾಯ ಮಾಡಿದ್ದರು. ಆದಿಪುರುಷ್ ಸಿನಿಮಾದಲ್ಲಿ ಸೈಫ್ ನಟಿಸಬಾರದು, ಸೈಫ್ ಬದಲಿಗೆ ಬೇರೆ ನಟನನ್ನು ಆಯ್ಕೆ ಮಾಡಿ ಎಂದು ನೆಟ್ಟಿಗರು ಸಿನಿಮಾತಂಡಕ್ಕೆ ಒತ್ತಾಯ ಮಾಡಿದ್ದರು. ಬಳಿಕ ಸೈಫ್ ಕ್ಷಮೆ ಯಾಚಿಸುವ ಮೂಲಕ ವಿವಾದ ತಣ್ಣಗಾಗಿತ್ತು.

  English summary
  Bollywood Actor Sai Ali Khan to join shoot Adhpursh on March. Sai Ali Khan is on paternity leave.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X