twitter
    For Quick Alerts
    ALLOW NOTIFICATIONS  
    For Daily Alerts

    ಬಾಗೇಪಲ್ಲಿಯಿಂದ ಚುನಾವಣೆಗೆ ಸಾಯಿಕುಮಾರ್

    By Rajendra
    |

    ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪಕ್ಕಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರು ಮಂಗಳವಾರ (ಜ.29) ಹೈದರಾಬಾದಿನ ಚಂಚಲಗೂಡ ಜೈಲಿಗೆ ಭೇಟಿ ನೀಡಿ ಮಾಜಿ ಸಚಿವ ಜನಾರ್ದನ ರೆಡ್ದಿ ಅವರ ಜೊತೆ ಮಾತುಕತೆ ನಡೆಸಿದರು.

    ಅವರು ಈ ಬಾರಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ, ಬಹುಶಃ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಿಚ್ಚಳವಾಗಿವೆ. ಜನಾರ್ದನ ರೆಡ್ಡಿ ಅವರೊಂದಿಗೆ ಅವರು ಈ ಬಗ್ಗೆಯೇ ಚರ್ಚಿಸಿದ್ದಾರೆ ಎನ್ನಲಾಗಿದೆ.

    ಕಳೆದ ಬಾರಿ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅವರು ಚುನಾವಣೆಯಲ್ಲಿ ಅಲ್ಪಮತದಿಂದ ತಮ್ಮ ಸಮೀಪದ ಸ್ಪರ್ಧಿ ಎನ್ ಸಂಪಂಗಿ (ಕಾಂಗ್ರೆಸ್) ವಿರುದ್ಧ ಸೋತಿದ್ದರು.

    ಆದರೆ ಈ ಬಾರಿ ಅವರು ಬಾಗೇಪಲ್ಲಿ ಕ್ಷೇತ್ರದಿಂದಲ್ಲೇ ಸ್ಪರ್ಧಿಸುವುದಾಗಿ ತಿಳಿಸಿದ್ದು, ಯಾವ ಪಕ್ಷದಿಂದ ಸ್ಪರ್ಧಿಸಲಿದ್ದೇನೆ ಎಂಬುದನ್ನು ಶೀಘ್ರದಲ್ಲೇ ವಿವರ ನೀಡುವುದಾಗಿ ತಿಳಿಸಿದ್ದಾರೆ. ರೆಡ್ಡಿ ಅವರನ್ನು ಭೇಟಿಯಾದ ಬಗ್ಗೆ ಅವರು ಮಾತನಾಡಲು ನಿರಾಕರಿಸಿದ್ದಾರೆ.

    ಉಪೇಂದ್ರ ಅವರ 'ಕಲ್ಪನ' ಚಿತ್ರದ ಬಳಿಕ ಅವರು ಅಂಗುಲಿಮಾಲ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಭಗವಂತ ಎಂಬ ಮತ್ತೊಂದು ಚಿತ್ರಕ್ಕೂ ಸಾಯಿಕುಮಾರ್ ಸಹಿಹಾಕಿದ್ದಾರೆ. (ಏಜೆನ್ಸೀಸ್)

    English summary
    Dialogue King Saikumar on Tuesday (29th Jan) met former Karnataka minister and mining baron Gali Janardhana Reddy at Chanchalaguda jail to discuss the political strategy in Karnataka. He would contest BSR Congress ticket floated by Gali’s closed aide and MLA, B Sriramulu.
    Wednesday, January 30, 2013, 15:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X