For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್

  |

  'ದಬಾಂಗ್-3' ಚಿತ್ರದ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಸ್ನೇಹಿತರು ಎನ್ನುವುದಕ್ಕಿಂದ ಸಹೋದರರ ಹಾಗೆ ಇದ್ದಾರೆ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಸುದೀಪ್ ನನ್ನ ಸಹೋದರ ಇದ್ದಹಾಗೆ ಎಂದು ಸಲ್ಮಾನ್ ಖಾನ್ ಸದಾ ಹೇಳುತ್ತಿರುತ್ತಾರೆ. ದಬಾಂಗ್-3 ಸಿನಿಮಾ ರಿಲೀಸ್ ಆಗಿ ತಿಂಗಳಾಗುತ್ತಾ ಬಂತು. ಸಿನಿಮಾ ನಂತರವು ಇಬ್ಬರ ಸ್ನೇಹ ಸಂಬಂಧ ಹಾಗೆ ಮುಂದುವರೆದಿದೆ.

  ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!

  ಎಷ್ಟರ ಮಟ್ಟಿಗೆ ಅಂದರೆ ಸಲ್ಮಾನ್ ಖಾನ್ ಸಹೋದರನಂತೆ ಇರುವ ಕಿಚ್ಚನಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ಬೆಲೆಬಾಳುವ ಉಡುಗೊರೆಯೊಂದಿಗೆ ಸುದೀಪ್ ಮನೆಗೆ ಬಂದಿದ್ದರು. ಸಲ್ಲು ಜೊತೆ ಕಿಚ್ಚನ ಮನೆಗೆ ಬಂದ ಆ ಉಡುಗೊರೆ BMW M5 ಕಾರು. ದುಬಾರಿ ಉಡುಗೊರೆ ಜೊತೆಗೆ ಮನೆಗೆ ಬಂದ ಸಲ್ಮಾನ್ ನೋಡಿ ಸುದೀಪ್ ಮೂಕವಿಸ್ಮಿತರಾಗಿದ್ದಾರೆ. ಈ ಬಗ್ಗೆ ಸುದೀಪ್ ಹೇಳಿದ್ದೇನು? ಮುಂದೆ ಓದಿ.

  ಸುದೀಪ್ ಗೆ BMW M5 ಕಾರ್ ಗಿಫ್ಟ್

  ಸುದೀಪ್ ಗೆ BMW M5 ಕಾರ್ ಗಿಫ್ಟ್

  ಸಲ್ಮಾನ್ ಖಾನ್ ಪ್ರೀತಿಯ ಕಿಚ್ಚನಿಗೆ 1.8 ಕೋಟಿ ಬಲೆ ಬಾಳುವ BMW M5 ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದೆ ದುಬಾರಿ ಕಾರಿನಲ್ಲಿ ಸಲ್ಮಾನ್ ಖಾನ್, ಸುದೀಪ್ ಮತ್ತು ಸುದೀಪ್ ತಂದೆ ಕುಳಿತು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಲ್ಮಾನ್ ಜೊತೆಗೆ ಸುದೀಪ್ ಮನೆಗೆ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಕೂಡ ಬಂದಿದ್ದಾರೆ.

  ಸಲ್ಮಾನ್ ಬಗ್ಗೆ ಸುದೀಪ್ ಹೇಳಿದ್ದೇನು?

  ಸಲ್ಮಾನ್ ಬಗ್ಗೆ ಸುದೀಪ್ ಹೇಳಿದ್ದೇನು?

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುದೀಪ್ "ನೀವು ಒಳ್ಳೆಯದು ಮಾಡಿದರೆ ನಿಮಗೆ ಖಂಡಿತ ಒಳ್ಳೆಯದೆ ಆಗುತ್ತೆ. ನಟ ಸಲ್ಮಾನ್ ಖಾನ್ ಬಿಎಂಬ್ಲ್ಯೂ ಜೊತೆಗೆಯೆ ಮನೆಗೆ ಬಂದಿರುವುದು ಈ ಸಾಲನ್ನು ಮತ್ತಷ್ಟು ನಂಬುವ ಹಾಗೆ ಮಾಡಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಈ ರೀತಿ ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಸರ್. ನಿಮ್ಮ ಜೊತೆ ಕೆಲಸ ಮಾಡಿರುವುದು ನನ್ನ ಭಾಗ್ಯ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಟಿ ಶರ್ಟ್-ಜಾಕೆಟ್ ಗಿಫ್ಟ್ ನೀಡಿದ್ದ ಸಲ್ಮಾನ್

  ಟಿ ಶರ್ಟ್-ಜಾಕೆಟ್ ಗಿಫ್ಟ್ ನೀಡಿದ್ದ ಸಲ್ಮಾನ್

  ಈ ಮೊದಲು ಅಂದರೆ ದಬಾಂಗ್-3 ಚಿತ್ರೀಕರಣ ಪ್ರಾರಂಭದಲ್ಲಿ ಸಲ್ಮಾನ್ ಖಾನ್ ಸುದೀಪ್ ಗೆ ಒಂದಿಷ್ಟು ಟಿ ಶರ್ಟ್ ಗಳನ್ನು ಗಿಫ್ಟಾಗಿ ನೀಡಿದ್ದರು. ಅಲ್ಲದೆ ಇತ್ತೀಚಿಗಷ್ಟೆ ಸಲ್ಮಾನ್ ಗೆ ತುಂಬ ಇಷ್ಟವಾದ ಜಾಕೆಟ್ ಅನ್ನು ಸುದೀಪ್ ಗೆ ಉಡುಗೊರೆಯಾಗಿ ಕೊಟ್ಟಿದ್ದರು. ಜಾಕೆಟ್ ನಲ್ಲಿ ಸಲ್ಲುಗೆ ಇಷ್ಟವಾದ ಶ್ವಾನದ ಫೋಟೋ ಇತ್ತು. ಸಲ್ಲು ಕೊಟ್ಟಿರುವ ಜಾಕೆಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

  ಅಭಿಮಾನಿಗಳ ಅಭಿನಂದನೆ

  ಅಭಿಮಾನಿಗಳ ಅಭಿನಂದನೆ

  ಸುದೀಪ್ ಈ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಇಬ್ಬರು ಸೂಪರ್ ಸ್ಟಾರ್ಸ್ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವಂತೆ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಇಬ್ಬರು ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಾರಾ ಕಾದುನೋಡಬೇಕು.

  English summary
  Bollywood star Actor Salman Khan gifted BMW M5 car for Actor Sudeep. Salman Khan visited to Sudeep house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X