For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾಗ್ತಿದೆ 'ಲವ್ ಇನ್ ಮಂಡ್ಯ' ಜೋಡಿ

  |

  ನಟ ಸತೀಶ್ ನೀನಾಸಂ ಕೆರಿಯರ್ ನ ಬೆಸ್ಟ್ ಸಿನಿಮಾಗಳ ಪೈಕಿ 'ಲವ್ ಇನ್ ಮಂಡ್ಯ' ಕೂಡ ಒಂದು. ಮಂಡ್ಯದ ಹುಡುಗ ಸತೀಶ್ ಗೆ ಈ ಸಿನಿಮಾ ದೊಡ್ಡ ಫೇಮ್ ತಂದುಕೊಟ್ಟಿತ್ತು. ಇಂತಹ ಸಿನಿಮಾದ ಜೋಡಿ ಈಗ ಮತ್ತೆ ಒಂದಾಗುತ್ತಿದೆ.

  ಸತೀಶ್ ನೀನಾಸಂ 'ಅಯೋಗ್ಯ' ಸಿನಿಮಾದ ಯಶಸ್ಸಿನ ಬಳಿಕ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಸತೀಶ್ ಅವರ 'ಲವ್ ಇನ್ ಮಂಡ್ಯ' ಚಿತ್ರಕ್ಕೂ ಬಂಡವಾಳ ಹಾಕಿದ್ದು, ಇದೇ ನಿರ್ಮಾಪಕರೇ.

  ''ಯಾವ ಹೀರೋನನ್ನು ಕಳಪೆಯಾಗಿ ನೋಡಬೇಡಿ'' - ಸತೀಶ್ ನೋವಿನ ನುಡಿ

  ಐದು ವರ್ಷಗಳ ಬಳಿಕ ಹೊಸ ಸಿನಿಮಾ ಮಾಡಲು ಈ ಜೋಡಿ ಸಿದ್ಧವಾಗಿದೆ. ಈ ಸಿನಿಮಾ ಪಕ್ಕಾ ಕಮರ್ಶಿಯಲ್ ಎಂಟಟೈನ್ಮೆಂಟ್ ಆಗಿರಲಿದೆಯಂತೆ. ಸಿನಿಮಾದ ಮುಹೂರ್ತ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 6 ರಂದು ನಡೆಯಲಿದೆ. ಹೊಸ ವರ್ಷಕ್ಕೆ ಸತೀಶ್ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ.

  'ಏನಮ್ಮಿ ಏನಮ್ಮಿ..' ಹಾಡಿಗೆ ಸಿಕ್ಕಿದೆ 50 ಮಿಲಿಯನ್ ಹಿಟ್ಸ್

  ಸಿನಿಮಾದ ನಾಯಕಿ, ನಿರ್ದೇಶಕ ಹಾಗೂ ಟೈಟಲ್ ಸೇರಿದಂತೆ ಎಲ್ಲ ಮಾಹಿತಿ ಮುಹೂರ್ತದ ದಿನ ಬಹಿರಂಗ ಆಗಲಿದೆ. ಸಿನಿಮಾದಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇರಲಿದ್ದು, ಸತೀಶ್ ಇಲ್ಲಿ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  English summary
  Kannada actor Sathish Neenasam new movie will be launching on the on the occasion of ugadi. The movie will be producing by Uday K Mehta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X