twitter
    For Quick Alerts
    ALLOW NOTIFICATIONS  
    For Daily Alerts

    ನಟ ಸತೀಶ್ ನೀನಾಸಂ ಹೇಳಿದ ಸುಂದರ ಕತೆ 'ಸಿಹಿ ತಿಂಡಿ'

    |

    ನಟ ಸತೀಶ್ ನೀನಾಸಂ ಏರುತ್ತಿರುವ ಎತ್ತರ ಹಲವು ನಟರಿಗೆ ಮಾದರಿ. ಕೇವಲ ಪ್ರತಿಭೆಯ ಮೂಲಕ ನಾಯಕ ನಟನಾಗುವ ಹಂತಕ್ಕೆ ಬಂದು ನಿಂತಿರುವ ಸತೀಶ್ ನೀನಾಸಂ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ.

    Recommended Video

    ನೀನಾಸಂ ಸತೀಶ್ ಅವರ ವಿನೂತನ ಕಥೆ ಹೇಳುವ ಸರಣಿ | Sathish Neenasam start new venture on YouTube channel

    ರಂಗಭೂಮಿ ಹಿನ್ನೆಲೆಯ ಸತೀಶ್ ನೀನಾಸಂ ಕ್ರಿಯಾಶೀಲ ವ್ಯಕ್ತಿ. ಅಂತೆಯೇ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕತೆ ಹೇಳುವ ಪ್ರಯತ್ನ ಆರಂಭಿಸಿದ್ದಾರೆ.

    ಸತೀಶ್ ನೀನಾಸಂ ಅವರು ತಮ್ಮ ಕತಾಸರಣಿಯ ಮೊದಲ ಕತೆಯಾಗಿ 'ಸಿಹಿ ತಿಂಡಿ' ಎಂಬ ಕತೆಯನ್ನು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸಿಹಿ ತಿಂಡಿ ಕತೆ ಸರಳವಾಗಿ ಸುಂದರವಾಗಿಯೂ ಇದೆ.

    ಅಜ್ಜಿಯೊಬ್ಬಳು ತನ್ನ 90 ನೇ ವಯಸ್ಸಿನಲ್ಲಿ ಸಾಧನೆ ಮಾಡಿದ ಪ್ರೇರಣಾತ್ಮಕ ಕತೆ ಇದು. ಅಜ್ಜಿ ತನ್ನ ಇಳಿ ವಯಸ್ಸಿನಲ್ಲಿ ತನಗೆ ಗೊತ್ತಿರುವ ಸಿಹಿ ತಿಂಡಿಯನ್ನು ಮಾಡಿ ಮೊಮ್ಮಗಳ ಸಹಾಯದೊಂದಿಗೆ ಸಣ್ಣ ಗೂಡಂಗಡಿಯಲ್ಲಿ ಮಾರಲು ಪ್ರಾರಂಭಿಸುತ್ತಾಳೆ.

    ಭಾರಿ ಜನಪ್ರಿಯತೆ ಗಳಿಸುತ್ತದೆ ಸಿಹಿ ತಿಂಡಿ

    ಭಾರಿ ಜನಪ್ರಿಯತೆ ಗಳಿಸುತ್ತದೆ ಸಿಹಿ ತಿಂಡಿ

    ಅಜ್ಜಿಯ ಸಿಹಿತಿಂಡಿ ಬಹಳ ಬೇಗ ಜನಪ್ರಿಯತೆ ಗಳಿಸುತ್ತದೆ. ಅಜ್ಜಿ ಮಾಡಿದ ಸಿಹಿತಿಂಡಿ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿಬಿಡುತ್ತದೆ. ನಂತರ ಅಜ್ಜಿ ವಿವಿಧ ಸಿಹಿತಿಂಡಿಗಳನ್ನು ಮಾಡುತ್ತಾಳೆ. ಅವೂ ಸೇಲ್ ಆಗಿಬಿಡುತ್ತದೆ.

    ಬಾಲ್ಯದ ನೆನಪು ಎಂದು ಹೆಸರಿಡುತ್ತಾರೆ

    ಬಾಲ್ಯದ ನೆನಪು ಎಂದು ಹೆಸರಿಡುತ್ತಾರೆ

    ಒಬ್ಬ ಗ್ರಾಹಕರಂತೂ ನಿಮ್ಮ ಸಿಹಿತಿಂಡಿ ತಿಂದು ನನಗೆ ಬಾಲ್ಯ ನೆನಪಾಯಿತು ಎನ್ನುತ್ತಾರೆ. ಮೊಮ್ಮಗಳು ಅಜ್ಜಿಯ ಸಿಹಿತಿಂಡಿ ಮಾರಲು ಬಾಕ್ಸ್‌ ಅನ್ನು ತಯಾರಿಸಿ ಅದಕ್ಕೆ 'ಬಾಲ್ಯದ ನೆನಪು' ಎಂದು ಹೆಸರಿಡುತ್ತಾರೆ.

    ಆನಂದ್ ಮಹೀಂದ್ರಾ ಅಜ್ಜಿಯ ಬಗ್ಗೆ ಮಾತನಾಡುತ್ತಾರೆ

    ಆನಂದ್ ಮಹೀಂದ್ರಾ ಅಜ್ಜಿಯ ಬಗ್ಗೆ ಮಾತನಾಡುತ್ತಾರೆ

    ಕೆಲವೇ ದಿನಗಳಲ್ಲಿ ಬಾಲ್ಯದ ನೆನಪು ಸಿಹಿ ತಿಂಡಿ ಬ್ರ್ಯಾಂಡ್ ಆಗಿ ಹೋಗುತ್ತದೆ. ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅಜ್ಜಿಯ ಸಾಧನೆಯನ್ನು ಮೆಚ್ಚಿ, ಆಕೆ ವರ್ಷದ ನವೋದ್ಯಮಿ ಎಂಬ ಬಿರುದು ನೀಡುತ್ತಾರೆ.

    ಆ ಅಜ್ಜಿಯ ಹೆಸರು ಹರ್ಬಜನ್ ಕೌರ್

    ಆ ಅಜ್ಜಿಯ ಹೆಸರು ಹರ್ಬಜನ್ ಕೌರ್

    ಕೊನೆಗೆ ಕೆಲವು ಯುವಕರು ಅಜ್ಜಿಗೆ ಕೇಳುತ್ತಾರೆ, 'ನಾವು ಬೇಗನೆ ಸಾಧನೆ ಮಾಡಬೇಕು ಆದರೆ ಏನು ಮಾಡಬೇಕು ಎಂದು ಗೊತ್ತಿಲ್ಲ ಎಂದು', ಆಗ ಅಜ್ಜಿ ಹೇಳುತ್ತಾಳೆ, 'ನನ್ನ ಬದುಕು ಪ್ರಾರಂಭವಾಗಿದ್ದೇ 90 ವಯಸ್ಸಾದ ನಂತರ ಎಂದು'. ಇದು ನೀನಾಸಂ ಸತೀಶ್ ಹೇಳಿದ ಸುಂದರ ಕತೆ. ಇದು ಸತ್ಯಕತೆಯೂ ಹೌದು, ಕತೆಯಲ್ಲಿ ಬರುವ ಅಜ್ಜಿಯ ಹೆಸರು ಹರ್ಬಜನ್ ಕೌರ್ ಈಗ ಆಕೆಯ ವಯಸ್ಸು 94.

    English summary
    Actor Sathish Neenasam tells a beautiful story about a old lady.
    Wednesday, July 1, 2020, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X