ಟೈಟಲ್ ಏನಂತ ನೀವೆ ಕಂಡುಹಿಡಿಯಿರಿ: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಸತೀಶ್ ನಿನಾಸಂ

ಸತೀಶ್ ನೀನಾಸಂ ಕೊನೆಯದಾಗಿ 'ಬ್ರಹ್ಮಾಚಾರಿ' ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸತೀಶ್ ಸದ್ಯ ವೈತರಣಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೆ ವೈತರಣಿ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಹೆಚ್ಚಾಗಿ ಲಂಡನ್ ನಲ್ಲಿ ಚಿತ್ರೀಕರಣ ಮಾಡಿದ ಸಿನಿಮಾತಂಡ. ಸದ್ಯ ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೆ ಇದ್ದಾರೆ.

Recommended Video

ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | FILMIBEAT KANNADA

ಈ ನಡುವೆ ಸತೀಶ್ ಅಭಿಮಾನಿಗಳಿಗೆ ಒಂದು ಕೆಲಸ ಕೊಟ್ಟಿದ್ದಾರೆ. ಸತೀಶ್ ಅಭಿನಯದ ವೈತರಣಿ ಸಿನಿಮಾದ ಟೈಟಲ್ ಅನ್ನು ಬದಲಾಯಿಸಲಾಗಿದೆ. ಹೊಸ ಸಿನಿಮಾದ ಟೈಟಲ್ ಏನು ಎಂದು ಗುರುತಿಸಿ ಅಂತ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಟ್ಟಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿ ಈ ಫೋಟೋದಲ್ಲಿ ಸಿನಿಮಾದ ಟೈಟಲ್ ಇದೆ ಕಂಡುಹಿಡಿಯಿರಿ ಎಂದು ಹೇಳಿದ್ದಾರೆ. ಮುಂದೆ ಓದಿ...

ಟೈಟಲ್ ಕಂಡುಹಿಡಿಯಿರಿ ಎಂದ ಸತೀಶ್

ಟೈಟಲ್ ಕಂಡುಹಿಡಿಯಿರಿ ಎಂದ ಸತೀಶ್

ಸತೀಶ್ ಫೋಟೋ ಶೇರ್ ಮಾಡಿ ಫೋಟೋದಲ್ಲಿರುವ ಹೆಸರನ್ನು ಗುರುತಿಸಿ ಎಂದು ಹೇಳಿದ್ದಾರೆ. ಅಂದ್ಹಾಗೆ ವೈತರಣಿ ಸಿನಿಮಾದ ಟೈಟಲ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ವಿಭಿನ್ನವಾಗಿರುವ ಟೈಟಲ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಆದರೀಗ ಚಿತ್ರದ ಟೈಟಲ್ ಬದಲಾಯಿಸಲಾಗಿದೆ.

ಲಂಡನ್ ನಗರದ ಲೀಕ್ ಸ್ಟ್ರೀಟ್ ನಲ್ಲಿದೆ ಟೈಟಲ್

ಲಂಡನ್ ನಗರದ ಲೀಕ್ ಸ್ಟ್ರೀಟ್ ನಲ್ಲಿದೆ ಟೈಟಲ್

ಈ ಬಗ್ಗೆ ಟ್ವೀಟ್ ಮಾಡಿರು ಸತೀಶ್ "ನನ್ನ ಮುಂದಿನ ಸಿನಿಮಾದ ಶೀರ್ಷಿಕೆ 'ವೈತರಣಿ' ಅಲ್ಲ. ನಮ್ಮ ಚಿತ್ರದ ಹೊಸ ಹೆಸರು ಲಂಡನ್ ನಗರದ ಲೀಕ್ ಸ್ಟ್ರೀಟ್ ನ ಗೋಡೆಗಳಲ್ಲಿ ಅಡಗಿದೆ. ಹುಡುಕಿ, ನೋಡೋಣ" ಎಂದಿದ್ದಾರೆ.

ಟೈಟಲ್ ಗುರುತಿಸಿದ ಅಭಿಮಾನಿಗಳು

ಟೈಟಲ್ ಗುರುತಿಸಿದ ಅಭಿಮಾನಿಗಳು

ಸತೀಶ್ ಅಭಿನಯದ ಮುಂದಿನ ಸಿನಿಮಾದ ಟೈಟಲ್ ಲಂಡನ್ ನಗರದ ಲೀಕ್ ಸ್ಟ್ರೀಟ್ ನಲ್ಲಿದೆ. ಈ ಟೈಟಲ್ ಅನ್ನು ಗುರುತಿಸಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಒಂದೆ ಉತ್ತರ ನೀಡುತ್ತಿದ್ದಾರೆ. ಫೋಟೋದಲ್ಲಿ ಗುರಿತಿಸಿ ಅಭಿಮಾನಿಗಳು ಚಿತ್ರದ ಟೈಟಲ್ ದಸರಾ ಎಂದು ಉತ್ತರಿಸುತ್ತಿದ್ದಾರೆ. ಇದು ನಿಜಾನಾ ಎನ್ನುವ ಬಗ್ಗೆ ಸತೀಶ್ ಅವರೆ ಹೇಳಬೇಕು.

ಶರ್ಮಿಳಾ ಮಾಂಡ್ರೆ ನಾಯಕಿ

ಶರ್ಮಿಳಾ ಮಾಂಡ್ರೆ ನಾಯಕಿ

ಈ ಸಿನಿಮಾಗೆ ಅರವಿಂದ್ ಶಾಸ್ತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮರ್ಡರ್ ಮಿಸ್ಟ್ರಿ ಸಿನಿಮಾ ಇದಾಗಿದ್ದು ಸಿನಿಮಾಗೆ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಶರ್ಮಿಳಾ ಮಾಂಡ್ರೆ ಮತ್ತು ಸತೀಶ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

ಸತೀಶ್ ಬಳಿ ಸಿನಿಮಾಗಳು

ಸತೀಶ್ ಬಳಿ ಸಿನಿಮಾಗಳು

ಸತೀಶ್ ನೀನಾಸಂ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಸತೀಶ್ ಕೊನೆಯದಾಗಿ ಬ್ರಹ್ಮಾಚಾರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ದಸರಾ ಎಂದು ಹೇಳಲಾಗುತ್ತಿರುವ ಸಿನಿಮಾ ಜೊತೆಗೆ ಸತೀಶ್ ಗೋದ್ರಾ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ ಪರಿಮಳ ಲಾಡ್ಜ್, ಮೈ ನೇಮ್ ಈಸ್ ಸಿದ್ದೇಗೌಡ ಮತ್ತು ಒಂದು ತಮಿಳು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada Actor Ninasam Sathish starrer vaitarani movie title Changed. Sathish next movie title Dasara.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X