For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಸರಳತೆ ಕಣ್ಣಾರೆ ಕಂಡು ಅಚ್ಚರಿಯಾಗಿದ್ದ ಖಳನಟ ಸತ್ಯ ಪ್ರಕಾಶ್

  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸರಳತೆ ಬಗ್ಗೆ ಕನ್ನಡ ಇಂಡಸ್ಟ್ರಿಯ ಅನೇಕರು ಹೇಳಿರುವುದು ಕೇಳಿದ್ದೇವೆ. ಅನೇಕ ಕಾರ್ಯಕ್ರಮಗಳಲ್ಲಿ ಕಣ್ಣಾರೆ ಕಂಡಿದ್ದೇವೆ. ಅಭಿಮಾನಿಗಳ ಜೊತೆ ಶಿವಣ್ಣ ವರ್ತಿಸುವ ರೀತಿ ನೋಡಿದ್ದೇವೆ. ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆದ್ರು ಅಣ್ಣಾವ್ರಂತೆ ಸರಳತೆಯ ಗುಣವನ್ನು ಬಿಟ್ಟುಕೊಟ್ಟಿಲ್ಲ ಎಂದು ಇಡೀ ಇಂಡಸ್ಟ್ರಿ ಹೇಳುತ್ತದೆ.

  ಇದೀಗ, ಬಹುಭಾಷಾ ನಟ, ಖಳನಾಯಕನ ಪಾತ್ರಗಳಿಗೆ ಹೆಚ್ಚು ಖ್ಯಾತಿ ಹೊಂದಿದ್ದ ಸತ್ಯ ಪ್ರಕಾಶ್, ಶಿವಣ್ಣನ ಸರಳತೆಯ ಗುಣವನ್ನು ಸ್ಮರಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಶಿವರಾಜ್ ಕುಮಾರ್ ಅವರು ಶೂಟಿಂಗ್‌ ಸೆಟ್‌ನಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ...

  'ವಿಶ್ವ' ಚಿತ್ರದ ಚಿತ್ರೀಕರಣ

  'ವಿಶ್ವ' ಚಿತ್ರದ ಚಿತ್ರೀಕರಣ

  ''1999ರಲ್ಲಿ 'ವಿಶ್ವ' ಎನ್ನುವ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಸತ್ಯ ಪ್ರಕಾಶ್ ಒಟ್ಟಿಗೆ ನಟಿಸುತ್ತಿದ್ದರು. ಇದು ಹಿಂದಿಯ 'ಗಾಯಲ್' ಎಂಬ ಚಿತ್ರದ ರೀಮೇಕ್. ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದೆ, ಅದು ರಾತ್ರಿ ಸಮಯ. ಶೂಟಿಂಗ್‌ಗೆ ಎಲ್ಲರೂ ರೆಡಿಯಾಗಿದ್ದಾರೆ. ಇನ್ನೂ ಶಿವರಾಜ್ ಕುಮಾರ್ ಬಂದಿರಲಿಲ್ಲ'' ಎಂದು ಘಟನೆಯನ್ನು ಸತ್ಯ ಪ್ರಕಾಶ್ ಸ್ಮರಿಸಿಕೊಂಡರು.

  'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?

  ಫಟ್ ಅಂತ ಶಿವರಾಜ್ ಕುಮಾರ್ ಬಂದ್ರು

  ಫಟ್ ಅಂತ ಶಿವರಾಜ್ ಕುಮಾರ್ ಬಂದ್ರು

  ''ಏಳು ಗಂಟೆಗೆ ಬರಬೇಕಿತ್ತು. ಶಿವರಾಜ್ ಕುಮಾರ್ ಬರುವವಷ್ಟರಲ್ಲಿ ಒಂಬತ್ತು ಆಯ್ತು. ಫಟ್ ಅಂತ ಬರ್ತಿದ್ದಂತೆ, ಸೆಟ್‌ನಲ್ಲಿ ಶರ್ಟ್, ಪ್ಯಾಂಟ್ ಚೇಂಜ್ ಮಾಡ್ಕೊಂಡ್ರು. ಅಲ್ಲೆ ಟಚಪ್, ಫಟ್ ಫಟ್ ಅಂತ ಎಲ್ಲರ ಮುಂದೆನೇ ರೆಡಿ ಆಗ್ಬಿಟ್ರು. ನಾನು ಒಂದು ಕ್ಷಣ ಅಚ್ಚರಿಯಾದೆ. ಎಂತಹ ಸೂಪರ್ ಸ್ಟಾರ್ ಕಲಾವಿದನ ಮಗ, ಅವರೇ ಸ್ಟಾರ್, ಅವರಿಗೋಸ್ಕರ ಒಂದು ಜಾಗ ಇರುತ್ತೆ. ಆದರೂ, ಯಾರಿಗೂ ತಲೆಕೆಡಿಸಿಕೊಳ್ಳದ ನಟ ಲೇಟ್ ಆಗಿದೆ ಅಂತ ಯೋಚನೆ ಮಾಡಿದ್ರು. ಈ ಸರಳತೆ ನೋಡಿ ನಿಜಕ್ಕೂ ಗ್ರೇಟ್ ಎನಿಸಿತು'' ಎಂದು ಹೇಳಿಕೊಂಡಿದ್ದಾರೆ.

  ಕಿರೀಟ ಇಲ್ಲದ ರಾಜ ಅಂದ್ರೆ ರಾಜ್ ಕುಮಾರ್

  ಕಿರೀಟ ಇಲ್ಲದ ರಾಜ ಅಂದ್ರೆ ರಾಜ್ ಕುಮಾರ್

  ''ರಾಜ್ ಕುಮಾರ್ ಅಂದ್ರೆ ಕರ್ನಾಟಕದಲ್ಲಿ ಕಿರೀಟ ಇಲ್ಲದ ರಾಜ. ಅವರು ಒಂದು ಮಾತು ಹೇಳಿದರೆ ಇಡೀ ರಾಜ್ಯ ಕೇಳುತ್ತೆ. ಪ್ರತಿಭಟನೆ, ಬಂದ್ ಅಂತ ಏನಾದರೂ ಅವರು ಹೇಳಿಬಿಟ್ಟರೆ ಅಷ್ಟೇ ಅದಕ್ಕೆ ವಿರೋಧನೇ ಇರಲ್ಲ. ಅಂತಹ ಸೂಪರ್ ಸ್ಟಾರ್ ನಟರ ಮಗ ಶಿವರಾಜ್ ಕುಮಾರ್'' ಎಂದು ಅಣ್ಣಾವ್ರ ಬಗ್ಗೆ ಸತ್ಯ ಪ್ರಕಾಶ್ ಹೇಳಿದ್ದಾರೆ.

  ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎಂದು ಹೇಳಲಾರೆ: ಶಿವರಾಜ್ ಕುಮಾರ್

  ಇವರೇನಾ ಗಟ್ಟಿಮೇಳದ ಆದ್ಯ! | Gattimela | Adya | Filmibeat Kannada
  ಸತ್ಯ ಪ್ರಕಾಶ್ ಮಗ ಎಂಟ್ರಿ

  ಸತ್ಯ ಪ್ರಕಾಶ್ ಮಗ ಎಂಟ್ರಿ

  ಸತ್ಯ ಪ್ರಕಾಶ್ ಅವರ ಮಗ ನಿಶಾಂತ್ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ 'ಮನಸು ಮಲ್ಲಿಗೆ' (ಮರಾಠಿಯ ಸೈರಾಟ್ ಚಿತ್ರದ ರೀಮೇಕ್) ಎಂಬ ಚಿತ್ರದಲ್ಲಿ ಸತ್ಯ ಪ್ರಕಾಶ್ ಅವರ ಮಗ ನಾಯಕನಾಗಿ ನಟಿಸಿದ್ದರು. ಎಸ್ ನಾರಾಯಣ್ ಈ ಚಿತ್ರ ನಿರ್ದೇಶಿಸಿದ್ದು, ರಾಕ್ ಲೈನ್ ವಂಕಟೇಶ್ ನಿರ್ಮಿಸಿದ್ದರು.

  English summary
  Telugu actor Sathya prakash remembered about shiva rajkumar simplicity in his recent interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X