»   » ಹಸೆಮಣೆ ಏರಲು ರೆಡಿಯಾದ ಸ್ಯಾಂಡಲ್ ವುಡ್ ನಟನ ಪುತ್ರಿ

ಹಸೆಮಣೆ ಏರಲು ರೆಡಿಯಾದ ಸ್ಯಾಂಡಲ್ ವುಡ್ ನಟನ ಪುತ್ರಿ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಹಲವಾರು ವರ್ಷ ಖಳನಟನಾಗಿ ಪ್ರೇಕ್ಷಕರನ್ನ ರಂಜಿಸಿದ್ದ ಹಿರಿಯ ನಟ ಸತ್ಯಜಿತ್ ತಮ್ಮ ಪುತ್ರಿಗೆ ಮದುವೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಮಗಳು ಮಾಹಿ ಸ್ವಾಲೆಹಾ ಜೆಟ್ ಏರ್ವೇಸ್'ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಕಾರವಾರ ಮೂಲದ ತೌಸಿಪ್ ಖಾನ್ ರನ್ನ ಮದುವೆ ಆಗಲಿದ್ದಾರೆ.

ಜನವರಿ 7ನೇ ತಾರೀಕಿನಂದು ಮದುವೆಯ ಮುಹೂರ್ತ ನಡೆಯಲಿದೆ. ಯಲಹಂಕದಲ್ಲಿರುವ 'ಮಧುರ ಮಿಲನ ಕನ್ವೆಷನ್ ಸೆಂಟರ್' ನಲ್ಲಿ ಮದುವೆ ಹಾಗೂ ಆರತಕ್ಷತೆ ನಡೆಯಲಿದೆ. ಈ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸತ್ಯಜಿತ್ ಮಾಧ್ಯಮದವರು ಹಾಗೂ ಅಭಿಮಾನಿಗಳು ಮದುವೆಯಲ್ಲಿ ಭಾಗಿಯಾಗಿ ವಧು-ವರರಿಗೆ ಶುಭಾಶಯ ಕೋರಬೇಕೆಂದು ತಿಳಿಸಿದ್ದಾರೆ.

Actor Satyajit's daughter wedding will be held on January 7

ಸದ್ಯ ಬಾಗಲಕೋಟೆಯಿಂದ ಅತ್ಯಾಧುನಿಕ ಕೃತಕ ಕಾಲು ತರಿಸಿಕೊಂಡು ನಡೆಯಲು ಪ್ರಾರಂಭಿಸಿರುವ ಸತ್ಯಜಿತ್ ಹೀಗೊಂದು ಹಾಗೊಂದು ಸಿನಿಮಾಗಳ ಅವಕಾಶಗಳನ್ನ ಪಡೆದುಕೊಳ್ಳುತ್ತಿದ್ದಾರೆ. 654 ನಟಿಸಿರುವ ಸತ್ಯಜಿತ್ ಮಗಳ ಮದುವೆಯನ್ನ ಸಂಭ್ರಮದಿಂದ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Actor Satyajit's daughter wedding will be held on January 7

ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲ ಎನ್ನುವಂತಿರುವ ಮಾಹಿ ಸ್ವಾಲೆಹಾ ಪೈಲೆಟ್ ಆಗುವ ಮೂಲಕ ಅಪ್ಪನಿಗೆ ನೆರವಾಗಿದ್ದಾರೆ. 40 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಸತ್ಯಜಿತ್ ಇನ್ನೂ ಮುಂದೆಯೂ ಚಿತ್ರಗಳಲ್ಲಿ ಅಭಿನಯಿಸುವ ಬಯಕೆಯನ್ನ ಹೊಂದಿದ್ದಾರೆ.

Actor Satyajit's daughter wedding will be held on January 7
English summary
Kannada Actor Satyajit's daughter marriage preparations going on. The wedding will be held on January 7 in Yelahanka. Mahi Swalehah Working as a pilot in Jet Airways

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X