ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದಾಸ ದರ್ಶನ್
Recommended Video

ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಈ ಸುದ್ದಿ ಹೊರಬಂದಿತ್ತು. ಒಬ್ಬ ದೊಡ್ಡ ನಟನ ಮಗನ ಇಂದಿನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಆದರೆ ಈಗ ಅದೇ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿದೆ.
ಶಂಕರ್ ಅಶ್ವಥ್ ಖುಷಿಗೆ ಕಾರಣ ಆಗಿರುವುದು ಬೇರೆ ಯಾರು ಅಲ್ಲ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು, ಈ ಹಿಂದೆ ಶಂಕರ್ ಅಶ್ವಥ್ ಅವರ ಪರಿಸ್ಥಿತಿ ಕಂಡು ಬೇಸರಗೊಂಡಿದ್ದ ದರ್ಶನ್ ಅವರಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಈಗ ತಮ್ಮ ಮಾತಿನಂತೆ ದರ್ಶನ್ ನಡೆದುಕೊಂಡಿದ್ದಾರೆ.
ತಾವು ನಟಿಸುತ್ತಿರುವ 'ಯಜಮಾನ' ಸಿನಿಮಾದಲ್ಲಿ ಶಂಕರ್ ಅಶ್ವಥ್ ಅವರಿಗೆ ದರ್ಶನ್ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಅವರು ಶಂಕರ್ ಅಶ್ವಥ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಿನಿಮಾದ ಶೂಟಿಂಗ್ ನಲ್ಲಿ ಇದೀಗ ಶಂಕರ್ ಅಶ್ವಥ್ ಭಾಗಿಯಾಗಿದ್ದು, ಈ ವೇಳೆ ದರ್ಶನ್ ಜತೆಗೆ ಫೋಟೋ ತೆಗೆದುಕೊಂಡಿದ್ದಾರೆ.

'ಯಜಮಾನ' ನಟ ದರ್ಶನ್ ಅವರ ಹೊಸ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಬಿ ಸುರೇಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. 'ವಿಷ್ಣುವರ್ಧನ' ಸಿನಿಮಾದ ಖ್ಯಾತಿಯ ಪಿ.ಕುಮಾರ್
ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. 'ಕುರುಕ್ಷೇತ್ರ' ನಂತರ 'ಯಜಮಾನ' ಚಿತ್ರ ಬಿಡುಗಡೆಯಾಗಲಿದೆ.


Click it and Unblock the Notifications











