ರಶ್ಮಿಕಾ ನನ್ನ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ: ನಟ ಶಂಕರ್ ಅಶ್ವಥ್
ಸ್ಯಾಂಡಲ್ ವುಡ್ ನ ಖ್ಯಾತ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಹ ಪೊಷಕನಟನಾಗಿ ಖ್ಯಾತಿಗಳಿಸಿದ್ದಾರೆ. ಅಪ್ಪನ ಹಾಗೆ ಉತ್ತಮ ಸಿನಿಮಾಗಳನ್ನು ಮಾಡುತ್ತಿರುವ ಶಂಕರ್ ಅಶ್ವಥ್ ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಪೊಗರು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.
ಪೊಗರು ಸಿನಿಮಾದಲ್ಲಿ ಶಂಕರ್ ಅಶ್ವಥ್ ನಟಿ ರಶ್ಮಿಕಾ ಮಂದಣ್ಣ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟ ಶಂಕರ್ ಅಶ್ವಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮಗಳಾಗಿ ನಟಿಸಿದ್ದು, ನನ್ನ ಭಾಗ್ಯ ಎಂದು ಬರೆದುಕೊಂಡಿದ್ದಾರೆ.
'ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನನ್ನ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ. ಮಗಳ ಮಾತಿಗೆ ಬೆಲೆ ಕೊಟ್ಟು ಆಶೀರ್ವಾದಿಸಿದ ಕೊನೆಯ ಸನ್ನಿವೇಶ ಇಂದು ಚಿತ್ರೀಕರಣವಾಯಿತು. ಎರಡು ವರ್ಷಕ್ಕೂ ಮೀರಿ ನಡೆದ ಚಿತ್ರೀಕರಣ ಇಂದು ಮುಗಿತು.' ಎಂದು ಬರೆದುಕೊಂಡಿದ್ದಾರೆ.

ಆದರೆ ಈ ಪೋಸ್ಟ್ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆ ನಟಿಸುವುದು ನನ್ನ ಭಾಗ್ಯ ಎಂದು ಹಾಕಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನಿಮ್ಮ ಜೊತೆ ರಶ್ಮಿಕಾ ಅಭಿನಯಿಸುತ್ತಿರುವುದು ರಶ್ಮಿಕಾ ಪುಣ್ಯ, ನಿಮ್ಮ ಭಾಗ್ಯ ಎಂದು ಹೇಳಬೇಡಿ ಎಂದು ಅಭಿಮಾನಿಗಳು ವಿನಂತಿ ಮಾಡುತ್ತಿದ್ದಾರೆ.
ಅಂದಹಾಗೆ ನಟ ಶಂಕರ್ ಅಶ್ವಥ್ ಮತ್ತು ರಶ್ಮಿಕಾ ಮೊದಲು ದರ್ಶನ್ ಅಭಿನಯದ 'ಯಜಮಾನ' ಸಿನಿಮಾದಲ್ಲಿ ನಟಿಸಿದ್ದರು. ಆ ಸಮಯದಲ್ಲೂ ಶಂಕರ್ ಅಶ್ವಥ್ ರಶ್ಮಿಕಾ ನನ್ನ ಮಗಳಿದ್ದಂತೆ ಎಂದು ಹೇಳಿ ರಶ್ಮಿಕಾ ಜೊತೆ ಫೋಟೋ ಶೇರ್ ಮಾಡಿದ್ದರು.
ಪೊಗರು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಪೊಗರು ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮೂಲಗಳ ಪ್ರಕಾರ ಪೊಗರು ಸಿನಿಮಾ ಕ್ರಿಸ್ಮಸ್ ಗೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.


Click it and Unblock the Notifications











