ನಟ ಶರಣ್, ಪ್ರೇಮ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ: ಯಾವ ಚಿತ್ರ, ಯಾವ ಪಾತ್ರ?

ಸಿನಿಮಾ ರಂಗದಲ್ಲಿ ನಟ, ನಟಿಯರ ಮಕ್ಕಳು ಸಿನಿಮಾಗೆ ಬರುವುದು ಸಹಜ. ಅಪ್ಪ, ಅಮ್ಮನಂತೆ ಕಲಾವಿದರಾಗಿ ತೆರೆ ಮೇಲೆ ಮಿಂಚುತ್ತಾರೆ. ಈಗ ಕನ್ನಡದ ಇಬ್ಬರು ನಟರ ಮಕ್ಕಳು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹೌದು ನಟ ಶರಣ್ ಮತ್ತು ನೆನಪಿರಲಿ ಪ್ರೇಮ್ ಇಬ್ಬರ ಪುತ್ರರು ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.

ಈ ವಿಚಾರವನ್ನು ಗೋಲ್ಡನ್‌ಗ್ಯಾಂಗ್ ಕಾರ್ಯಕ್ರಮದಮಲ್ಲಿ ರಿವೀಲ್‌ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಶರಣ್ ಮತ್ತು ಪ್ರೇಮ್‌ ಇಬ್ಬರ ಮಕ್ಕಳು ಭಾಗಿ ಆಗಿದ್ದರು. ಅವರಿಬ್ಬರೂ ಕೂಡ ಸ್ನೇಹಿತರು ಆಗಿರುವ ಕಾರಣಕ್ಕೆ ಈ ಕಾರ್ಯಮದಲ್ಲಿ ಭಾಗಿ ಆಗಿದ್ದರು. ಶರಣ್, ಪ್ರೇಮ್, ತರುಣ್ ಸುಧೀರ್‌ ಅವರಂತೆಯೇ ಅವರ ಮಕ್ಕಳು ಕೂಡ ಸ್ನೇಹಿತರು. ಹಾಗಾಗಿ ಅವರು ಕೂಡ ಗೋಲ್ಡನ್‌ ಗ್ಯಾಂಗ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಕ್ಕಳು ಭಾಗಿ ಆಗಿದ್ದ ಎಪಿಸೋಡ್‌ನಲ್ಲಿ ಅವರ ಸ್ನೇಹದ ಬಗ್ಗೆಯೇ ಹೆಚ್ಚಾಗಿ ಮಾತನಾಡಲಾಯಿತು. ಪ್ರೇಮ್‌ ಮತ್ತು ಶರಣ್‌ ಕೂಡ ತಮ್ಮ ಮಕ್ಕಳ ಸ್ನೇಹದ ಕುರಿತು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಇಬ್ಬರೂ ಚಿತ್ರರಂಗಕ್ಕೆ ಬರುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಂತ ಇದು ಹೀರೋ ಎಂಟ್ರಿ ರೀತಿ ಇರುವುದಿಲ್ಲ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಒಂದೇ ಚಿತ್ರದಲ್ಲಿ ಒಟ್ಟಿಗೆ ಬಣ್ಣ ಹಚ್ಚುತ್ತಿರುವ ಏಕಾಂತ್, ಹೃದಯ್!

ಒಂದೇ ಚಿತ್ರದಲ್ಲಿ ಒಟ್ಟಿಗೆ ಬಣ್ಣ ಹಚ್ಚುತ್ತಿರುವ ಏಕಾಂತ್, ಹೃದಯ್!

ವಿಶೇಷ ಅಂದರೆ ಇವರಿಬ್ಬರು ಒಂದೇ ಚಿತ್ರದ ಮೂಲಕ, ಒಟ್ಟಿಗೆ ಬಣ್ಣ ಹಚ್ಚುತ್ತಿದ್ದಾರೆ. ಶರಣ್ ಪುತ್ರ ಹೃದಯ್ ಮತ್ತು ಪ್ರೇಮ್ ಪುತ್ರ ಏಕಾಂತ್ ಇಬ್ಬರು ಕೂಡ ಅಪ್ಪಂದಿರ ಹಾಗೆ ಅಪ್ಪಟ್ಟ ಸ್ನೇಹಿತರು. ಇವರಿಬ್ಬರು ಆಫ್ ಸ್ಕ್ರೀನ್ ನಲ್ಲಿ ತುಂಬಾನೇ ಕ್ಲೋಸ್, ಹಾಗೆಯೇ ಆನ್ ಸ್ಕ್ರೀನ್ ಮೇಲೂ ಒಟ್ಟಿಗೆ ಬರುತ್ತಿದ್ದಾರೆ. ನಟ ಶರಣ್ ಅಭಿನಯದ 'ಗುರು ಶಿಷ್ಯರು' ಚಿತ್ರದಲ್ಲಿ ಏಕಾಂತ್ ಮತ್ತು ಹೃದಯ್ ಇಬ್ಬರು ವಿಶೇಷ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಕೂಡ ಮುಗಿದಿದೆಯಂತೆ. ಇದೇ ವೇಳೆ ಚಿತ್ರೀಕರಣದ ಅನುಭವವನ್ನೂ ಕೂಡ ಇಬ್ಬರು ಹಂಚಿಕೊಂಡಿದ್ದಾರೆ.

ಮಕ್ಕಳ ನಟನೆ ಬಗ್ಗೆ ಶರಣ್ ಮಾತು!

ಮಕ್ಕಳ ನಟನೆ ಬಗ್ಗೆ ಶರಣ್ ಮಾತು!

ಈ ಕುರಿತು ನಟ ಶರಣ್ ಫಿಲ್ಮೀ ಬೀಟ್‌ ಜೊತೆಗೆ ಮಾತನಾಡಿದ್ದಾರೆ. "ಇದು ಹೀರೋ ರೀತಿಯ ಎಂಟ್ರಿ ಅಲ್ಲ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಆ ಸನ್ನಿವೇಷಗಳಿಗೆ ಅವರ ವಯಸ್ಸಿನ ಹುಡುಗರೇ ಬೇಕಾಗಿತ್ತು. ಹಾಗಾಗಿ ಅವರಿಂದ ಅಭಿನಯ ಮಾಡಿದ್ದೇವೆ. ಈಗ ಅವರು ಓದುತ್ತಿದ್ದಾರೆ. ಓದಲಿ ಮುಂದೆ ಏನು ಆಗುತ್ತೋ ನೋಡಬೇಕು. ಸದ್ಯದಲ್ಲೇ ಅವರ ಪಾತ್ರಗಳ ಪರಿಚಯದ ಟೀಸರ್ ರಿಲೀಸ್ ಆಗುತ್ತದೆ" ಎಂದು ಹೇಳಿದ್ದಾರೆ ನಟ ಶರಣ್.

ಪ್ರಥಮ PUC ಓದುತ್ತಿರುವ ಏಕಾಂತ್, ಹೃದಯ್!

ಪ್ರಥಮ PUC ಓದುತ್ತಿರುವ ಏಕಾಂತ್, ಹೃದಯ್!

ಪ್ರೇಮ್ ಪುತ್ರ ಏಕಾಂತ್ ಮತ್ತು ಶಣರ್ ಪುತ್ರ ಹೃದಯ್ ಇಬ್ಬರೂ ಕೂಡ ಪ್ರಥಮ ಪಿಯುಸಿ ಓದುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರು ಹೀರೋಗಳಾಗಿ ಎಂಟ್ರಿ ಕೊಡ್ತಿಲ್ಲ. ಬದಲಿಗೆ ವಿಶೇಷ ಪಾತ್ರಗಳನ್ನು ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಇಬ್ಬರ ಫಸ್ಟ್ ಲುಕ್‌ ರಿವೀಲ್‌ ಮಾಡಲು ತಯಾರಿ ನಡೆಸಿದೆ ಚಿತ್ರ ತಂಡ. ಬಹುಶಃ ಅವರುಗಳು ಹೀರೊಗಳಾಗಿ ಎಂಟ್ರಿ ಕೊಡೊಕೆ ಇನ್ನೂ ಸಾಕಷ್ಟು ಬೇಕು. ಆದರೆ ಸದ್ಯ ಸಣ್ಣ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಅಭಿನಯ ಮಾಡಿದ್ದಾರೆ.

ದರ್ಶನ್, ಗಣೇಶ್ ಮಕ್ಕಳು ಕೂಡ ಅಭಿನಯಿಸಿದ್ದಾರೆ!

ದರ್ಶನ್, ಗಣೇಶ್ ಮಕ್ಕಳು ಕೂಡ ಅಭಿನಯಿಸಿದ್ದಾರೆ!

ಇನ್ನು ಈಗಾಗಲೇ ನಟ ದರ್ಶನ್ ಪುತ್ರ ವಿನೀಶ್ ಮತ್ತು ಗಣೇಶ್ ಪುತ್ರ ವಿಹಾನ್ ಇಬ್ಬರು ಕೂಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂದೆ ಅವರುಗಳು ಹೀರೋಗಳಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ನಿಟ್ಟಿನಲ್ಲಿ ಈಗಲೇ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚುತ್ತಿದ್ದಾರೆ. ಈಗ ಶರಣ್ ಮತ್ತು ಪ್ರೇಮ್ ಮಕ್ಕಳು ಕೂಡ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇವರು ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

More from Filmibeat

English summary
Actor Sharan And Nenapirali Prem Children Enter To Film, In Special Charector,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X