ಪ್ರೀತಿಯ ಶಾಲಾ ಶಿಕ್ಷಕರನ್ನು ಕಳೆದುಕೊಂಡ ನಟ ಶರಣ್
ಪ್ರತಿಯೊಬ್ಬರ ಜೀವನದಲ್ಲಿ ತಂದೆ, ತಾಯಿಯ ನಂತರದ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುವುದು ಗುರು. ಒಂದು ಗುರಿ ಮುಟ್ಟಲು ಅಂದರೆ ಹಿಂದೆ ಗುರು ಇರಬೇಕು. ಇಂತಹ ಗುರುವನ್ನು ಕಳೆದುಕೊಂಡ ದುಃಖದಲ್ಲಿ ನಟ ಶರಣ್ ಇದ್ದಾರೆ.
ನಟ ಶರಣ್ ಅವರ ಗುರುಗಳಾದ ಬೆಲಹರ್ ಮಾಸ್ಟರ್ ವಿಧಿವಶರಾಗಿದ್ದಾರೆ. ತಮ್ಮ ಪ್ರೀತಿಯ ಗುರುಗಳನ್ನು ಕಳೆದುಕೊಂಡ ನೋವಿನಲ್ಲಿ ಶರಣ್ ಇದ್ದಾರೆ. ಬೆಲಹರ್ ಅವರು ನಟ ಶರಣ್ ಅವರ ಶಾಲಾ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಗಣಿತ ಪಾಠವನ್ನು ಶರಣ್ ಮಾಡುತ್ತಿದ್ದರು.

ಅಂದಹಾಗೆ, ತಮ್ಮ ಗುರುಗಳ ಬಗ್ಗೆ ಟ್ವೀಟ್ ಮಾಡಿರುವ ಶರಣ್ ''ನನ್ನ ನೆಚ್ಚಿನ ಶಿಕ್ಷಕರಾದ ಬೆಲಹರ್ ಸರ್ ರನ್ನು ಕಳೆದುಕೊಂಡಿದ್ದೇನೆ. ಅವರು ನನಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣಿತ ಪಾಠ ಮಾಡುತ್ತಿದ್ದರು. ನಾನು ನಿಮ್ಮನ್ನು ನನ್ನ ಜೀವನದಲ್ಲಿ ಪಡೆದಿದ್ದು, ನನ್ನ ಅದೃಷ್ಟ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ಸಂತಾಪ ಸೂಚಿಸಿದ್ದಾರೆ.
ಶಾಲೆ ಮುಗಿದ ತಕ್ಷಣವೇ ನಮ್ಮ ಶಿಕ್ಷಕರು ಯಾರು ಎಂದು ಮರೆಯುವ ಈ ಕಾಲದಲ್ಲಿ, ಒಬ್ಬ ನಟನಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದರೂ ಶರಣ್ ತಮ್ಮ ಮಾಸ್ಟರ್ ಅನ್ನು ಮರೆತಿಲ್ಲ. ಇದು ಶರಣ್ ಅವರ ಒಳ್ಳೆಯ ಮನಸ್ಸಿಗೆ ಉದಾಹರಣೆ.


Click it and Unblock the Notifications











