ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ಶರಣ್, ರವಿಶಂಕರ್?
Recommended Video

ಸೂಪರ್ ಆಗಿದೆ ಶರಣ್ ಹಾಗೂ ರವಿಶಂಕರ್ ಹೊಸ ಅವತಾರ..! | Filmibeat Kannada
ನಟ ಶರಣ್ ಹಾಗೂ ರವಿಶಂಕರ್ ಮತ್ತೆ ಈಗ ಒಂದಾಗಿದ್ದಾರೆ. ವಿಶೇಷ ಅಂದರೆ, ಇಬ್ಬರು ಕೂಡ ಹೆಣ್ಣಿನ ವೇಷದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅಂದಹಾಗೆ, ಈ ಇಬ್ಬರು ನಟರು ಈ ರೀತಿ ಬದಲಾಗಿರುವುದು 'ವಿಕ್ಟರಿ 2' ಸಿನಿಮಾಗಾಗಿ.
'ರಾಂಬೋ 2' ಯಶಸ್ಸಿನ ನಂತರ ಶರಣ್ 'ವಿಕ್ಟರಿ 2' ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ಮೇಕಿಂಗ್ ಫೋಟೋಗಳು ಬಿಡುಗಡೆಯಾಗಿದ್ದು, ಶರಣ್ ಹಾಗೂ ರವಿಶಂಕರ್ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಜೈ ಲಲಿತಾ' ಸಿನಿಮಾದಲ್ಲಿ ಕೂಡ ಶರಣ್ ಈ ರೀತಿ ಲುಕ್ ನಲ್ಲಿ ಇದ್ದರು.

ಅಂದಹಾಗೆ, 'ವಿಕ್ಟರಿ 2' ಸಿನಿಮಾವನ್ನು ಹರಿ ಸಂತೋಷ್ (ಅಲೆಮಾರಿ ಸಂತು) ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದೆ. ಈ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿ ಶರಣ್ ಗೆ ಜೋಡಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ವಿಕ್ಟರಿ' ಸಿನಿಮಾದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ.
More from Filmibeat
English summary
http://venus.greynium.com/index.php?module=article&class=ArticleManagement&action=add#english_summary_tabKannada actor Sharan kannada movie 'Victory 2' making still out.The movie is directed by Hari Santhosh.


Click it and Unblock the Notifications











