ಮೇ 10 ಕ್ಕೆ ರಿಲೀಸ್ ಆಗ್ತಿಲ್ಲ ಕಾಮಿಡಿ ಕಿಂಗ್ ಶರಣ್ ಸಿನಿಮಾ 'ಛೂ ಮಂತರ್'; ಮತ್ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

ಕಾಮಿಡಿ ಕಿಂಗ್ ಶರಣ್ ಅಭಿನಯದ ಹೊಚ್ಚ ಹೊಸ ಸಿನಿಮಾ 'ಛೂ ಮಂತರ್'. ಕೆಲವು ವಾರಗಳ ಹಿಂದಷ್ಟೇ 'ಅವತಾರ ಪುರುಷ 2' ಸಿನಿಮಾ ಬಿಡುಗಡೆಯಾಗಿತ್ತು. ಈಗ ಮತ್ತೊಂದು ಸಿನಿಮಾ ಇದೇ ತಿಂಗಳು ಮೇ 10ರಂದು ರಿಲೀಸ್ ಆಗುವುದಾಗಿ ಘೋಷಣೆಯಾಗಿತ್ತು. ಆದ್ರೀಗ ಈ ಸಿನಿಮಾ ಮೇ 10ಕ್ಕೆ ರಿಲೀಸ್ ಆಗುತ್ತಿಲ್ಲ.

'ಕರ್ವ' ಅಂತಹ ಹಿಟ್ ಸಿನಿಮಾ ಕೊಟ್ಟಿದ್ದ ನವನೀತ್ 'ಛೂ ಮಂತರ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾದಲ್ಲಿನ ಶರಣ್ ಲುಕ್ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಟೈಟಲ್ ಕೂಡ ಕ್ಯಾಚಿಯಾಗಿದ್ದು, ಈ ಸಿನಿಮಾ ನೋಡುವುದಕ್ಕೆ ಶರಣ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದರು. ಅದ್ಯಾಕೆ ಸಿನಿಮಾ ತಂಡ ರಿಲೀಸ್ ಡೇಟ್ ಅನ್ನು ಮುಂದೂಡಿದೆ.

Actor Sharan starrer Choomantar Movie release postponed

ಅಷ್ಟಕ್ಕೂ 'ಛೂ ಮಂತರ್' ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದೂಡಿದ್ದೇಕೆ? ಐಪಿಎಲ್ ಹಾಗೂ ಚುನಾವಣೆ ಬೆನ್ನಲ್ಲೇ ಈ ಸಿನಿಮಾ ಮುಂದೂಡಿದ್ರಾ? ಈ ಎಲ್ಲಾ ಪ್ರಶ್ನೆಗಳು ಮೂಡುವುದು ಸಹಜ. ಆದರೆ, ಅದಕ್ಕೆ ಚಿತ್ರತಂಡವೇ ಉತ್ತರ ಕೊಟ್ಟಿದೆ.

'ಛೂ ಮಂತರ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದೆ ಅನ್ನುವಾಗಲೇ ಮುಂದೂಡುವುದಕ್ಕೆ ಕಾರಣವಿದೆ. ಈ ಸಿನಿಮಾವನ್ನು ಈಗಾಗಲೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ವಿತರಕರು ವೀಕ್ಷಿಸಿದ್ದಾರಂತೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಹಾರರ್ ಸಿನಿಮಾ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲ ಭಾಷೆಯ ಜನರು ನೋಡುವ ಸಿನಿಮಾ ಎಂಬ ಅಭಿಪ್ರಾಯ ನೀಡಿದ್ದಾರಂತೆ.

ಈ ಕಾರಣಕ್ಕೆ ನಿರ್ಮಾಪಕ ತರುಣ್ ಶಿವಪ್ಪ ಈ ಸಿನಿಮಾವನ್ನು ಮುಂದೂಡುವುದಕ್ಕೆ ನಿರ್ಧರಿಸಿದ್ದಾರೆ. ಸೂಕ್ತ ಸಮಯವನ್ನು ನೋಡಿಕೊಂಡು ಸಿನಿಮಾ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತಂಡ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುವ ಸಾಧ್ಯತೆಯಿದೆ.

ಈಗಾಗಲೇ 'ಛೂ ಮಂತರ್'‌ ಟೀಸರ್, ಟ್ರೈಲರ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಶರಣ್ , ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಸೇರಿದಂತೆ ಹಲವು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಸಂಗೀತ ನಿರ್ದೇಶನವಿದೆ. ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

More from Filmibeat

English summary
Actor Sharan starrer Choomantar Movie release postponed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X