ಅಜಯ್ ರಾವ್ 'ಧೈರ್ಯಂ' ಚಿತ್ರವನ್ನ ಮೆಚ್ಚಿದ ಶಿವಣ್ಣ
ಅಜಯ್ ರಾವ್ ನಟನೆಯ 'ಧೈರ್ಯಂ' ಸಿನಿಮಾದ ಬಗ್ಗೆ ನಟ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ದಿ ವಿಲನ್' ಚಿತ್ರದ ಶೂಟಿಂಗ್ ಗಾಗಿ ಲಂಡನ್ ಗೆ ತೆರಳುವ ಮುಂಚೆ ಶಿವಣ್ಣ 'ಧೈರ್ಯಂ' ಚಿತ್ರದ ಟ್ರೇಲರ್ ವೀಕ್ಷಿಸಿದ್ದಾರೆ.
ಚಿತ್ರದ ಟ್ರೇಲರ್ ನೋಡಿದ ಶಿವಣ್ಣ ಚಿತ್ರದ ಮೇಕಿಂಗ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿನಿಮಾದ ಹಾಡುಗಳನ್ನು ಸಹ ಶಿವಣ್ಣ ನೋಡಿ ಇಷ್ಟಪಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಸದ್ದು ಮಾಡಿರುವ 'ಧೈರ್ಯಂ' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ.

ಈ ಹಿಂದೆ 'ಮಳೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶಿವ ತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆಯಂತೆ.

ಒಬ್ಬ ಮಿಡಲ್ ಕ್ಲಾಸ್ ಹುಡುಗ ಏನಾದರು ಸಾಧಿಸುವುದಕ್ಕೆ ಹೊರಟಾಗ ಅವನಿಗೆ ಆಗುವ ತೊಂದರೆಗಳ ಮೇಲೆ ಸಿನಿಮಾದ ಕಥೆ ಸಾಗಿದೆ. ಜೊತೆಗೆ ಎಲ್ಲರ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಚಿತ್ರದಲ್ಲಿ ತೋರಿಸಿದ್ದಾರೆ. 'ಧೈರ್ಯಂ' ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಕೂಡ ಇದ್ದು ಅಧಿತಿ ಎನ್ನುವ ಹೊಸ ಹುಡುಗಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ.


Click it and Unblock the Notifications











