»   » ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯ ಮನೆಗೆ ಶಿವಣ್ಣ ಭೇಟಿ

ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯ ಮನೆಗೆ ಶಿವಣ್ಣ ಭೇಟಿ

Posted By:
Subscribe to Filmibeat Kannada

ಶಿವರಾಜ್ ಕುಮಾರ್ ತಮ್ಮ ಪ್ರತಿಭೆ ಮತ್ತು ನಟನೆ ಮೂಲಕ ಮಾತ್ರವಲ್ಲ ತಮ್ಮಲ್ಲಿರುವ ಮಾನವೀಯತೆ ಮೂಲಕವೂ ರಿಯಲ್ ಹೀರೋ ಎಂದು ಕರೆಸಿಕೊಂಡಿದ್ದಾರೆ. ಅವರ ಹೃದಯ ವೈಶಾಲ್ಯತೆ ಎಂತಹುದು ಎನ್ನುವುದಕ್ಕೆ ಮತ್ತೆ ಒಂದು ಘಟನೆ ಉದಾಹರಣೆ ಆಗಿದೆ.

ಶಿವಣ್ಣ ಇಂದು ಮೈಸೂರಿನಲ್ಲಿರುವ ತಮ್ಮ ಅಭಿಮಾನಿಯ ಮನೆಗೆ ಭೇಟಿ ನೀಡಿದ್ದಾರೆ. ಮೈಸೂರಿನಲ್ಲಿರುವ ಪುಟ್ಟಸ್ವಾಮಿ ಅವರ ಕುಟುಂಬ ಡಾ.ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಗಳು. ಆದರೆ ಪುಟ್ಟಸ್ವಾಮಿ ಅವರ ಪುತ್ರ ಇತ್ತೀಚಿಗೆ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದ.

ಈ ಕಾರಣ ಪುಟ್ಟಸ್ವಾಮಿ ಅವರ ನಿವಾಸಕ್ಕೆ ಶಿವಣ್ಣ ಆಗಮಿಸಿದ್ದರು. ಜೊತೆಗೆ ಇಡೀ ಕುಟುಂಬದ ಜೊತೆಗೆ ಶಿವಣ್ಣ ಮಾತನಾಡಿ ಅವರಿಗೆ ಸಮಾಧಾನ ಹೇಳಿದ್ದಾರೆ.

Actor Shiva Rajkumar met his fan in mysuru

ಈ ರೀತಿ ಅನೇಕ ಬಾರಿ ಅಭಿಮಾನಿಗಳ ಕಷ್ಟದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಸಿನಿಮಾಗಳ ಕೆಲಸ ಎಷ್ಟೇ ಇದ್ದರು ಕೂಡ ಸಮಯ ತೆಗೆದುಕೊಂಡು ಅಭಿಮಾನಿಗಳನ್ನು ಇಂತಹ ಸಂದರ್ಭದಲ್ಲಿ ಭೇಟಿ ಮಾಡುತ್ತಾರೆ.

English summary
Kannada actor Shiva Rajkumar met his fan in mysuru. who lost his leg in an accident recently.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X